More

    ‘ಇಡಿ ವಿಚಾರಣೆ: ಕೇಜ್ರಿವಾಲ್ ಹಾಕಿದ ಷರತ್ತು ಹೀಗಿದೆ ನೋಡಿ..

    ನವದೆಹಲಿ: ಮದ್ಯ ಹಗರಣ ಪ್ರಕರಣದಲ್ಲಿ ಕೆಲವು ದಿನಗಳಿಂದ ಇಡಿ ಸಮನ್ಸ್ ನಿರಾಕರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊನೆಗೂ ವಿಚಾರಣೆಗೆ ಹಾಜರಾಗಲು ಸಿದ್ಧತೆ ನಡೆಸಿದ್ದಾರೆ. ಆದರೆ, ಮಾರ್ಚ್ 12ರ ನಂತರವೇ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ಸಮನ್ಸ್‌ಗೆ ನೀಡಿದ ಉತ್ತರದಲ್ಲಿ ಸಿಎಂ ಇದನ್ನು ಹೇಳಿದ್ದಾರೆ ಎಂದು ಮೂಲಗಳು ಸೋಮವಾರ ಬಹಿರಂಗಪಡಿಸಿವೆ.

    ಇದನ್ನೂ ಓದಿ: ಭಾರತ, ಪಾಕಿಸ್ತಾನ ಪಂದ್ಯ.. ಟಿಕೆಟ್ ದರ ಗೊತ್ತಾದ್ರೆ ಶಾಕ್!

    ಈ ಪ್ರಕರಣದ ತನಿಖೆಗೆ ಮಾರ್ಚ್ 4 ರಂದು ಹಾಜರಾಗುವಂತೆ ಇಡಿ ಕೇಜಿವಾಲ್​ ಗೆ ಎಂಟನೇ ಬಾರಿ ಸಮನ್ಸ್ ಜಾರಿ ಮಾಡಿದ್ದು, ಈ ಬಾರಿಯೂ ಗೈರಾಗಿದ್ದರು. ಆದರೆ ಸಮನ್ಸ್​ಗೆ ಉತ್ತರ ಕಳುಹಿಸಿದ್ದು, ಸಮನ್ಸ್ ಅಕ್ರಮವಾಗಿದೆ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ.

    ಇಡಿಗೆ ಕಳೂಹಿಸಿರುವ ಪತ್ರದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಆದರೆ, ಮಾರ್ಚ್ 12ರ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

    ಕಳೆದ ನವೆಂಬರ್ 2 ರಂದು ದೆಹಲಿ ಮದ್ಯ ಪ್ರಕರಣದಲ್ಲಿ ಅರವಿಂದ್ ಕೇಜ್ರೀವಾಲ್​ ಅವರಿಗೆ ಜಾರಿ ನಿರ್ದೇಶನಾಲಯವು ಮೊದಲು ಸಮನ್ಸ್ ಜಾರಿ ಮಾಡಿತ್ತು. ಆ ನಂತರ ಸತತವಾಗಿ ನೋಟಿಸ್ ಕಳುಹಿಸಿದರೂ ಹಾಜರಾಗುತ್ತಿಲ್ಲ. ಸಮನ್ಸ್‌ಗೆ ಸಿಎಂ ಸ್ಪಂದಿಸದ ಹಿನ್ನೆಲೆಯಲ್ಲಿ ಇಡಿ ಕೆಲ ದಿನಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿತ್ತು.

    ಇತ್ತೀಚೆಗಷ್ಟೇ ನ್ಯಾಯಾಲಯವು ಈ ದೂರಿನ ಕುರಿತು ನೋಟಿಸ್ ಜಾರಿ ಮಾಡಿದ್ದರಿಂದ ಕೇಜ್ರಿವಾಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಅವರ ಕೋರಿಕೆಯ ಮೇರೆಗೆ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಲಾಯಿತು. ಅಂದು ಎಡಾ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

    ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಹೀರೋಯಿನ್​ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts