More

    ಆರ್ಥಿಕ ಸಂಕಷ್ಟ; ತಳ್ಳುಗಾಡಿಯಲ್ಲಿ ಬೀದಿಗಳಲ್ಲಿ ತರಕಾರಿ ಮಾರುತ್ತಿರುವ ಪಿಎಚ್ ಡಿ ಪದವೀಧರ

    ನವದೆಹಲಿ: ಮಾಸ್ಟರ್ ಡಿಗ್ರಿ.. ಪಿಎಚ್‌ಡಿ ಮುಗಿಸಿರುವ ಪ್ರಾಧ್ಯಾಪಕರೊಬ್ಬರು ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದಾರೆ. ಈ ಕುರಿತಾದ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತ ಯಾರು? ಈ ಪದವಿಧರ ತರಕಾರಿ ಮಾರುತ್ತಿರುವುದ್ಯಾಕೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿವೆ.

    ಪಂಜಾಬ್ ಮೂಲದ ಡಾ.ಸಂದೀಪ್ ಸಿಂಗ್ ಅವರಿಗೆ 39 ವರ್ಷ. 4 ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ್ದಾರೆ. ಪಂಜಾಬಿ ವಿಶ್ವವಿದ್ಯಾನಿಲಯದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದ ಸಂದೀಪ್ ಸಿಂಗ್ ಅವರು ಪಿಎಚ್‌ಡಿ ಮುಗಿಸಿದ ನಂತರ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಪಿಎಚ್‌ಡಿ ಸಾಬ್ಜಿವಾಲಾ ಎಂದು ವೈರಲ್ ಆಗುತ್ತಿರುವ ಸಂದೀಪ್ ಈ ಕೆಲಸ ಮಾಡಲು ಕಾರಣವೇನು? ಬನ್ನಿ ನೋಡೋಣ…

    ಡಾ.ಸಂದೀಪ್ ಅವರು 11 ವರ್ಷಗಳ ಕಾಲ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ವಿಶ್ವವಿದ್ಯಾನಿಲಯದ ಕಾನೂನು ವಿಭಾಗದಲ್ಲಿ 11 ವರ್ಷಗಳ ಕಾಲ ಕೆಲಸ ಮಾಡಿದ ಸಂದೀಪ್ ಸಿಂಗ್ ಅವರು ನಾಲ್ಕು ಸ್ನಾತಕೋತ್ತರ ಪದವಿಗಳನ್ನು (ನ್ಯಾಯಶಾಸ್ತ್ರ, ಪಂಜಾಬಿ, ಪತ್ರಿಕೋದ್ಯಮ, ರಾಜಕೀಯ ವಿಜ್ಞಾನ) ಮತ್ತು ಕಾನೂನಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಮತ್ತು ಇನ್ನೂ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

     

    A post shared by MPSC_MOTIVATION_ (@mpsc_motivation_)

    ಹಲವು ವರ್ಷಗಳಿಂದ ಗುತ್ತಿಗೆ ಕೆಲಸ ಮಾಡುತ್ತಿರುವ ಸಂದೀಪ್ ಮಾಸಿಕ ವೇತನದ ವಿಚಾರದಲ್ಲಿ ಹಲವು ತೊಂದರೆಗಳನ್ನು ಎದುರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಸಂಬಳ ನೀಡದ ಕಾರಣ ಮತ್ತು ಪದೇ ಪದೇ ಸಂಬಳ ಕಡಿತಗೊಂಡಿದ್ದರಿಂದ ಸಂದೀಪ್ ಕೆಲಸ ಬಿಟ್ಟಿದ್ದರು. ಬದುಕುವುದು ಕಷ್ಟವಾಯಿತು. ಸಂದೀಪ್ ಸಿಂಗ್ ತನ್ನ ಕುಟುಂಬವನ್ನು ಬೆಂಬಲಿಸಲು ಬೇರೆ ದಾರಿಯಿಲ್ಲದೆ, ರಸ್ತೆಯ ಮೇಲೆ ಗಾಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

    ಡಾ. ಸಂದೀಪ್ ಸಿಂಗ್ ಪ್ರತಿದಿನ ತರಕಾರಿ ಗಾಡಿಯಲ್ಲಿ ‘ಪಿಎಚ್‌ಡಿ ಸಬ್ಜಿವಾಲಾ’ ಎಂಬ ಫಲಕದೊಂದಿಗೆ ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ಪ್ರೊಫೆಸರ್ ಆಗಿ ಕೆಲಸ ಮಾಡುವುದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಸಂಪಾದಿಸುತ್ತೇನೆ ಎನ್ನುತ್ತಾರೆ ಸಂದೀಪ್.

    ಸಂದೀಪ್ ತರಕಾರಿ ಮಾರಾಟದಿಂದ ಸ್ವಲ್ಪ ಹಣವನ್ನು ಉಳಿಸಿ, ಸ್ವಂತ ಟ್ಯೂಷನ್ ಸೆಂಟರ್ ಸ್ಥಾಪಿಸುವ ಮೂಲಕ ತಮ್ಮ ನೆಚ್ಚಿನ ಶಿಕ್ಷಕ ವೃತ್ತಿಯನ್ನು ಮುಂದುವರಿಸುವ ಭರವಸೆ ಹೊಂದಿದ್ದಾರೆ. ಸದ್ಯ ಡಾ.ಸಂದೀಪ್ ಸಿಂಗ್ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts