More

    ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ ಇನ್ಮುಂದೆ ಸಂಪೂರ್ಣ ಆನ್‌ಲೈನ್

    ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಮತ್ತು ಡಿಪ್ಲೊಮೊ ಪ್ರವೇಶ ಪರೀಕ್ಷೆ (ಡಿಸಿಇಟಿ)ಗಳನ್ನು ಮೊದಲ ಬಾರಿಗೆ ಸಂಪೂರ್ಣ ಪ್ರಕ್ರಿಯೆಗಳನ್ನು ಆನ್‌ಲೈನ್‌ಗೊಳಿಸಿದೆ.

    ಸ್ಪಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ ಸೇರಿ ಹಲವು ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತಿದೆ. ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಕೆ-ಸಿಇಟಿಯಲ್ಲಿ ಅರ್ಜಿ ಸಲ್ಲಿಕೆ, ದಾಖಲಾತಿ ಪರಿಶೀಲನೆ, ಕೌನ್ಸೆಲಿಂಗ್, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ಆನ್‌ಲೈನ್‌ಗೊಳಿಸಿದೆ. ಅದರ ಜತೆಗೆ ಈ ವರ್ಷದಿಂದ ಪಿಜಿ ಸಿಇಟಿ ಮತ್ತು ಡಿ-ಸಿಇಟಿ ಪರೀಕ್ಷೆಗಳ ಪರೀಕ್ಷೆಗಳನ್ನು ಕೂಡ ಆನ್‌ಲೈನ್ ಮೂಲಕವೇ ನಡೆಸಲಾಗುತ್ತಿದೆ.

    ಈ ಕುರಿತು ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ಪಿಜಿ ಸಿಇಟಿ ಮತ್ತು ಡಿಪ್ಲೊಮೊ ಸಿಇಟಿ ಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ 40ರಿಂದ 45 ಸಾವಿರ ಮತ್ತು ಡಿಪ್ಲೊಮೊಗೆ 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆನ್‌ಲೈನ್ ಪರೀಕ್ಷೆ ನಡೆಸುವುದರಿಂದ ಲಿತಾಂಶ ಸೇರಿ ಒಟ್ಟು ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರದ ಕೇಂದ್ರ ಕಚೇರಿ ಹಾಗೂ ರಾಜ್ಯದ ಜಿಲ್ಲಾ ಕೇಂದ್ರಗಳು ಸೇರಿ ಗರಿಷ್ಠ 20 ಸಾವಿರ ಮಂದಿಗೆ ಏಕಕಾಲಕ್ಕೆ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ, ಆನ್‌ಲೈನ್‌ಗೆ ಬದಲಾಗುತ್ತಿದ್ದೇವೆ ಎಂದು ಹೇಳಿದರು.

    ಒಟ್ಟಿಗೆ ನಡೆಯಲ್ಲ ಮೂರೂ ಸಿಇಟಿ

    ಕಳೆದ ಜನವರಿಯಲ್ಲಿ ಸಿಇಟಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಸಿಇಟಿ, ಪಿಜಿ ಸಿಇಟಿ ಮತ್ತು ಡಿಸಿಇಟಿಗಳನ್ನು ಒಟ್ಟಿಗೆ ನಡೆಸುವುದಾಗಿ ಪ್ರಕಟಿಸಿತ್ತು. ಆದರೆ, ಇಲ್ಲಿಯವರೆಗೂ ಸಿಇಟಿ ಹೊರತುಪಡಿಸಿ ಡಿಸಿಇಟಿ ಮತ್ತು ಪಿಜಿಸಿಇಟಿ ಅಧಿಸೂಚನೆ ಪ್ರಕಟಿಸಿಲ್ಲ.

    ತಾಂತ್ರಿಕ ಕಾರಣಗಳಿಂದ ಮತ್ತು ಆನ್‌ಲೈನ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಈ ಪರೀಕ್ಷೆಗಳನ್ನು ಒಟ್ಟಿಗೆ ನಡೆಸಲು ಸಾಧ್ಯವಾಗುತ್ತಿಲ್ಲ. ಪಿಜಿಸಿಇಟಿ ಮತ್ತು ಡಿಸಿಇಟಿ ಪರೀಕ್ಷೆಗಳ ಅಧಿಸೂಚನೆಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    3.6 ಲಕ್ಷ ನೋಂದಣಿ

    ಈ ಬಾರಿ ಸಿಇಟಿ, ನೀಟ್ ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ ಒಂದೇ ಬಾರಿ ಅರ್ಜಿ ಸಲ್ಲಿಸಲು ಕೆಇಎ ಅವಕಾಶ ಮಾಡಿಕೊಟ್ಟಿದೆ. ನೀಟ್ ಮತ್ತು ಸಿಇಟಿ ಸೇರಿ 3.6 ಲಕ್ಷ ಅರ್ಜಿಗಳು ದಾಖಲಾಗಿವೆ. ಸಾಮಾನ್ಯವಾಗಿ ಸಿಇಟಿಗೆ 2.4 ಲಕ್ಷದಿಂದ 2.6 ಲಕ್ಷವರೆಗೆ ಅರ್ಜಿಗಳು ದಾಖಲಾಗುತ್ತಿದ್ದವು. ಕಳೆದ ಬಾರಿ ನೀಟ್‌ಗೆ 1.34 ಲಕ್ಷ ಮತ್ತು ಸಿಇಟಿಗೆ 2.61 ಲಕ್ಷ ಅರ್ಜಿಗಳು ದಾಖಲಾಗಿದ್ದವು.

    ಪಿಜಿಸಿಇಟಿ ಮತ್ತು ಡಿಸಿಇಟಿಗೆ ಕಡಿಮೆ ಪ್ರಮಾಣದ ವಿದ್ಯಾರ್ಥಿಗಳು ಇರುವ ಕಾರಣ ಪರೀಕ್ಷೆ ಸೇರಿ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಈ ವರ್ಷದಿಂದಲೇ ಹೊಸ ನಿಯಮ ಜಾರಿಯಾಗಲಿದೆ.
    – ಎಸ್. ರಮ್ಯಾ, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts