More

    ಗಗನಕ್ಕೇರುತ್ತಿದೆ ಇಂಧನ ಬೆಲೆ – ಪೆಟ್ರೋಲ್​, ಡೀಸೆಲ್​ ದರಗಳು ಎರಡು ವರ್ಷದ ಗರಿಷ್ಠ ಮಟ್ಟಕ್ಕೆ

    ನವದೆಹಲಿ: ಪೆಟ್ರೋಲಿಯಂ ಇಂಧನಗಳ ಬೆಲೆ ಗಗನಕ್ಕೇರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ಇಂದು 28 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರಿಗೆ 29 ಪೈಸೆ ಹೆಚ್ಚಳವಾಗಿದೆ.

    ದೆಹಲಿಯಲ್ಲಿ ಸತತ ಐದನೇ ದಿನ ಬೆಲೆ ಏರಿಕೆಯಾಗಿದ್ದು ಪೆಟ್ರೋಲ್ ದರ ಲೀಟರಿಗೆ 83.13 ರೂಪಾಯಿಯಿಂದ 83.41 ರೂಪಾಯಿಗೂ ಡೀಸೆಲ್ ಬೆಲೆ 73.32 ರೂಪಾಯಿಯಿಂದ 73.61 ರೂಪಾಯಿಗೆ ಹೆಚ್ಚಳವಾಗಿದೆ. ಮುಂಬೈನಲ್ಲೂ ಪೆಟ್ರೋಲ್​ ಬೆಲೆ 90 ರೂಪಾಯಿ, ಡೀಸೆಲ್ ದರ 80 ರೂಪಾಯಿ ಗಡಿ ದಾಟಿದೆ.

    ಇದನ್ನೂ ಓದಿ: ಪರಮಾಧಿಕಾರ ಬಳಸೋದಕ್ಕೆ ಅವಕಾಶ ಕೊಡಬೇಡಿ : ದೀದಿ ಸರ್ಕಾರಕ್ಕೆ ಗರ್ವನರ್ ವಾರ್ನಿಂಗ್​

    ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 29 ಪೈಸೆ ಏರಿಕೆಯಾಗಿದ್ದು, 86.20 ರೂಪಾಯಿ ತಲುಪಿದೆ. ನಿನ್ನೆ 85.91 ರೂಪಾಯಿ ಇತ್ತು. ಐದೇ ದಿನದಲ್ಲಿ 1.11 ರೂಪಾಯಿ ಲೀಟರ್ ಮೇಲೆ ಏರಿಕೆಯಾಗಿದೆ. ಇದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 30 ಪೈಸೆ ಹೆಚ್ಚಳವಾಗಿ 78.03 ರೂಪಾಯಿ ತಲುಪಿದೆ. ನಿನ್ನೆ 77.73 ರೂಪಾಯಿ ಇತ್ತು. ಒಟ್ಟು ಐದು ದಿನಗಳಲ್ಲಿ 1.26 ರೂಪಾಯಿ ಹೆಚ್ಚಳವಾಗಿದೆ. (ಏಜೆನ್ಸೀಸ್)

    ಇಂಧನ ದರ ಗಗನಮುಖಿ – ಎರಡು ವಾರದಲ್ಲಿ ಪೆಟ್ರೋಲ್​ 2 ರೂಪಾಯಿ, ಡೀಸೆಲ್ ಅಂದಾಜು 3 ರೂಪಾಯಿ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts