More

    ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ, ಅಡುಗೆ ಅನಿಲಕ್ಕೆ 200 ರೂ. ಸಬ್ಸಿಡಿ!

    ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಪೆಟ್ರೋಲ್​-ಡೀಸೆಲ್ ಬೆಲೆಯ ಜತೆಗೆ ಅಡುಗೆ ಅನಿಲದ ಬೆಲೆಯೂ ಸತತವಾಗಿ ಏರುತ್ತಲೇ ಬಂದಿದ್ದು, ಜನಸಾಮಾನ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಇದೀಗ ಪೆಟ್ರೋಲ್-ಡೀಸೆಲ್ ಮಾತ್ರವಲ್ಲದೆ ಗ್ಯಾಸ್ ಬೆಲೆಯಲ್ಲೂ ಇಳಿಕೆ ಆಗುವಂಥ ಸಂತಸದ ಸುದ್ದಿ ಹೊರಬಿದ್ದಿದೆ.

    ಇಂಥದ್ದೊಂದು ಸಿಹಿಸುದ್ದಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ಕೇಂದ್ರ ಅಬಕಾರಿ ಸುಂಕವನ್ನು ಪೆಟ್ರೋಲ್​ ಮೇಲೆ ಲೀಟರ್​ಗೆ 8 ರೂಪಾಯಿ ಮತ್ತು ಡೀಸೆಲ್​ ಮೇಲೆ ಲೀಟರ್​ಗೆ 6 ರೂಪಾಯಿ ಇಳಿಸಲಿದ್ದೇವೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ ಲೀಟರ್​ಗೆ 9.5 ರೂ. ಮತ್ತು ಡೀಸೆಲ್​ ಬೆಲೆಯಲ್ಲಿ ಲೀಟರ್​ಗೆ 7 ರೂ. ಇಳಿಕೆ ಆಗಲಿದೆ ಎಂದು ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಈ ವರ್ಷದಲ್ಲಿ ಅಡುಗೆ ಅನಿಲ ಸಿಲಿಂಡರ್​ಗೆ 200 ರೂ. ಸಹಾಯಧನ ನೀಡುವುದಾಗಿಯೂ ಅವರು ಹೇಳಿದ್ದಾರೆ. ವರ್ಷಕ್ಕೆ 12 ಸಿಲಿಂಡರ್​ವರೆಗೆ ಇದನ್ನು ನೀಡಲಿದ್ದು, ಇದರಿಂದ ಪ್ರಧಾನಮಂತ್ರಿ ಉಜ್ವಲಾ ಯೋಜನೆಯ 9 ಕೋಟಿ ಫಲಾನುಭವಿಗಳಿಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

    ಕಾಂಗ್ರೆಸ್ ಅಶಿಸ್ತಿನ ಪಕ್ಷ, ಅಲ್ಲಿ ಮುಂದಿನ ಚುನಾವಣೆಗೂ ಮುನ್ನ ಆಗಲಿದೆ ದೊಡ್ಡ ಸ್ಫೋಟ: ಪ್ರಮೋದ್ ಮಧ್ವರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts