More

    ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ: ಈ ಮಹಾನಗರದಲ್ಲಿ ದಾಟಿತು ಶತಕ!

    ನವದೆಹಲಿ : ಭಾರತದಲ್ಲಿ ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದ್ದು, ದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈ ನಗರದಲ್ಲಿ ಶತಕ ದಾಟಿದೆ. ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 18 ದಿನಗಳ ಮಟ್ಟಿಗೆ ಸರ್ಕಾರಿ ತೈಲ ಕಂಪೆನಿಗಳು ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ ಮೇ 4 ನೇ ತಾರೀಕಿನಿಂದ ಮತ್ತೆ ಏರಿಕೆ ಆರಂಭವಾಗಿದ್ದು, ಇಂದು 15ನೇ ಬಾರಿಗೆ ಬೆಲೆ ಏರಿಸಲಾಗಿದೆ.

    ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 26 ಪೈಸೆಯಷ್ಟು ಏರಿಸಲಾಗಿದ್ದು, ಲೀಟರ್​​ಗೆ 93.68 ರೂ.ಗಳಿಂದ 93.94 ರೂ.ಗಳಿಗೆ ತಲುಪಿದೆ. ಡೀಸೆಲ್​ ಬೆಲೆ 28 ಪೈಸೆ ಏರಿಕೆಯೊಂದಿಗೆ 84.61 ಪ್ರತಿ ಲೀಟರ್​ನಿಂದ 84.89 ರೂ. ಪ್ರತಿ ಲೀಟರ್​ ಆಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಪೆಟ್ರೋಲ್​ ಬೆಲೆ ಲೀಟರ್​​ಗೆ 97.07 ರೂ. ಆಗಿದ್ದು, ಡೀಸೆಲ್​ಗೆ ಲೀಟರ್​ಗೆ 89.99 ರೂ. ಆಗಿದೆ.

    ಇದನ್ನೂ ಓದಿ: ಡಾರ್ಕ್‌ವೆಬ್‌ನಲ್ಲಿ ಡ್ರಗ್ಸ್ ಖರೀದಿಸಿ ಲಾಕ್‌ಡೌನ್​ ವೇಳೆ ಮಾರಾಟ ಮಾಡುತ್ತಿದ್ದ ಖದೀಮರು

    ಮುಂಬೈನಲ್ಲಿ ಶತಕ ದಾಟಿರುವ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 100.19 ರೂಪಾಯಿ ಆಗಿದೆ. ಡೀಸೆಲ್​ ಬೆಲೆ ಲೀಟರ್​ಗೆ 92.17 ರೂ. ಆಗಿದೆ. ತೈಲ ಬೆಲೆಗಳು ವ್ಯಾಟ್​ನಿಂದಾಗಿ ವಿವಿಧ ರಾಜ್ಯಗಳಲ್ಲಿ ವ್ಯತ್ಯಾಸ ಹೊಂದಿರುತ್ತವೆ. ಹೀಗಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ 100 ರೂ.ಗಳ ಮಾರ್ಕ್​ಅನ್ನು ಪೆಟ್ರೋಲ್ ಬೆಲೆ ಈ ಮುನ್ನವೇ ದಾಟಿತ್ತು ಎನ್ನಲಾಗಿದೆ.

    ದೇಶದ ನಾಲ್ಕು ಮೆಟ್ರೊ ಸಿಟಿಗಳಲ್ಲಿ ಇಂದಿನ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೀಗಿವೆ:-
    ನಗರ     ಪೆಟ್ರೋಲ್     ಡೀಸೆಲ್
    ದೆಹಲಿ    93.94       84.89
    ಮುಂಬೈ 100.19     92.17
    ಚೆನ್ನೈ     95.51      89.65
    ಕೊಲ್ಕತ   93.97     87.74
    ಬೆಲೆ ರೂ.ಗಳಲ್ಲಿ. ಮೂಲ : ಇಂಡಿಯನ್ ಆಯಿಲ್

    ಫಾರಿನ್ ಎಕ್ಸ್​ಚೇಂಜ್​ ದರದಲ್ಲಿ ಉಂಟಾಗುವ ವ್ಯತ್ಯಾಸಗಳಿಗೆ ತಕ್ಕಂತೆ ಜಾಗತಿಕ ಕಚ್ಚಾ ತೈಲದ ಬೆಲೆಗೆ ಅನುಸಾರವಾಗಿ ಸರ್ಕಾರಿ ತೈಲ ಮಾರಾಟ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೊಲಿಯಮ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ದೇಶೀಯ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ. ಯಾವುದೇ ಬದಲಾವಣೆಗಳಿದ್ದಲ್ಲಿ ಆ ದಿನ ಬೆಳಿಗ್ಗೆ 6 ಗಂಟೆಯಿಂದ ಹೊಸ ದರವನ್ನು ಜಾರಿಗೆ ತರಲಾಗುತ್ತದೆ. (ಏಜೆನ್ಸೀಸ್)

    ರೆಮ್​ಡೆಸಿವಿರ್​ ಚುಚ್ಚುಮದ್ದು : ಬೇಡಿಕೆಗಿಂತ ಹೆಚ್ಚಿದ ಪೂರೈಕೆ

    ರಾಜ್ಯದಲ್ಲಿ ಜೂನ್​ 7 ಕ್ಕೂ ಮುಂದಕ್ಕೆ ಲಾಕ್ಡೌನ್ ವಿಸ್ತರಣೆ ? ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts