More

    ರೆಮ್​ಡೆಸಿವಿರ್​ ಚುಚ್ಚುಮದ್ದು : ಬೇಡಿಕೆಗಿಂತ ಹೆಚ್ಚಿದ ಪೂರೈಕೆ

    ನವದೆಹಲಿ : ಭಾರತದಲ್ಲಿ ಕರೊನಾ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್​ಡೆಸಿವಿರ್​ ಆ್ಯಂಟಿವೈರಲ್ ಔಷಧಿಯ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಗಿದೆ. ಕಳೆದ ಏಪ್ರಿಲ್ 12 ರಂದು ದಿನವೊಂದಕ್ಕೆ 33,000 ವಯಲ್​ ಔಷಧಿ ಉತ್ಪಾದಿಸಲ್ಪಡುತ್ತಿತ್ತು. ಅದೇ ಇಂದು ದಿನಕ್ಕೆ 3,50,000 ವಯಲ್​ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸೂಖ್ ಮಾಂಡವೀಯ ಹೇಳಿದ್ದಾರೆ.

    ಏಪ್ರಿಲ್​ ತಿಂಗಳಲ್ಲಿ 10 ಲಕ್ಷ ವಯಲ್​ಗಳು ಉತ್ಪಾದನೆಯಾಗಿದ್ದರೆ, ಮೇ ತಿಂಗಳಲ್ಲಿ 1 ಕೋಟಿ ವಯಲ್​ಗಳ ಉತ್ಪಾದನೆ ನಡೆದಿದೆ. ರೆಮ್​ಡೆಸಿವಿರ್ ಉತ್ಪಾದನಾ ಘಟಕಗಳ ಸಂಖ್ಯೆಯನ್ನೂ ಸರ್ಕಾರ ಒಂದು ತಿಂಗಳಲ್ಲಿ 20 ರಿಂದ 60 ಕ್ಕೆ ಹೆಚ್ಚಿಸಿದೆ. ಈಗ ಬೇಡಿಕೆಗಿಂತ ಬಹುಪಾಲು ಹೆಚ್ಚು ಪೂರೈಕೆಯಾಗುತ್ತಿರುವುದರಿಂದ ದೇಶದಲ್ಲಿ ಸಾಕಷ್ಟು ರೆಮ್​ಡೆಸಿವಿರ್ ಲಭ್ಯವಿದೆ ಎಂದು ಮಾಂಡವೀಯ ತಿಳಿಸಿದ್ದಾರೆ.

    ಇದನ್ನೂ ಓದಿ: ಜೂ.15ಕ್ಕೆ ಅನ್ನದಾತರ ಕೈಗೆಟುಕಲಿದೆ ನ್ಯಾನೋ ಗೊಬ್ಬರ

    ಕೇಂದ್ರದಿಂದ ಹಂಚಿಕೆ ಇಲ್ಲ : ಪೂರೈಕೆಯಲ್ಲಿ ಕೊರತೆಯಿಲ್ಲದ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ರೆಮ್​ಡೆಸಿವಿರ್​ನ ಹಂಚಿಕೆ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಆದರೆ ನ್ಯಾಷನಲ್ ಫಾರ್ಮಸಿಟಿಕಲ್ಸ್​ ಪ್ರೈಸಿಂಗ್ ಅಥಾರಿಟಿ ಮತ್ತು ಸೆಂಟ್ರಲ್​ ಡ್ರಗ್​ ಸ್ಟ್ಯಾಂಡರ್ಡ್​ ಕಂಟ್ರೋಲ್ ಆರ್ಗನೈಸೇಷನ್​ಗೆ ದೇಶದಲ್ಲಿ ಈ ಔಷಧಿಯ ಲಭ್ಯತೆಯ ಮೇಲ್ವಿಚಾರಣೆ ನಡೆಸಬೇಕೆಂದು ನಿರ್ದೇಶನ ನೀಡಲಾಗಿದೆ. ತುರ್ತು ಅಗತ್ಯದಲ್ಲಿ ಬಳಸಲು ಸಿದ್ಧವಿರಲೆಂದು 50 ಲಕ್ಷ ವಯಲ್​ ರೆಮ್​ಡೆಸಿವಿರ್​ಅನ್ನು ಖರೀದಿಸಿ ಶೇಖರಿಸಿಡಲು ಕೂಡ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. (ಏಜೆನ್ಸೀಸ್)

    ರಕ್ಷಿತ್ ಶೆಟ್ಟಿ ಚಿತ್ರ ‘777ಚಾರ್ಲಿ’ಯ ಟೀಸರ್​ ಬಿಡುಗಡೆಗೆ ಡೇಟ್​ ಫಿಕ್ಸ್

    ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts