More

    ಗಗನಕ್ಕೇರಿದ ಪೆಟ್ರೋಲ್, ಡೀಸೆಲ್​​ ದರ! ಒಂದೇ ವಾರದಲ್ಲಿ ನಾಲ್ಕು ಬಾರಿ ಏರಿಕೆ

    ನವದೆಹಲಿ: ಪೆಟ್ರೋಲ್​, ಡೀಸೆಲ್​ ದರದಲ್ಲಿ ಶನಿವಾರದಂದು ಏರಿಕೆ ಕಂಡುಬಂದಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಒಂದೇ ವಾರದಲ್ಲಿ ಪೆಟ್ರೋಲ್​ ದರ ನಾಲ್ಕನೇ ಬಾರಿ ಏರಿಕೆ ಕಂಡಿದೆ.

    ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್​ ದರ ಶನಿವಾರದಂದು ಲೀಟರ್​ಗೆ 25 ಪೈಸೆ ಏರಿಕೆಯಾಗಿದೆ. ಈ ಮೂಲಕ ಒಂದು ಲೀಟರ್​ ಪೆಟ್ರೋಲ್​ ದರ 85.70 ರೂಪಾಯಿಯಾಗಿದೆ. ಡೀಸೆಲ್​ ಬೆಲೆಯಲ್ಲೂ ಲೀಟರ್​ಗೆ 25 ಪೈಸೆ ಹೆಚ್ಚಳವಾಗಿದ್ದು, ಲೀಟರ್​ಗೆ 75.88 ರೂಪಾಯಿಯಾಗಿದೆ. ಪೆಟ್ರೋಲ್​ ಬೆಲೆ ಮುಂಬೈನಲ್ಲಿ 92.28 ರೂಪಾಯಿ, ಭೋಪಾಲ್​ನಲ್ಲಿ 93.59 ರೂಪಾಯಿ ಮತ್ತು ಬೆಂಗಳೂರಿನಲ್ಲಿ 88.59 ರೂಪಾಯಿಗೆ ಏರಿಕೆಯಾಗಿದೆ.

    ಡೀಸೆಲ್​ ಬೆಲೆ ಬೆಂಗಳೂರಿನಲ್ಲಿ 80.47 ರೂಪಾಯಿಗೆ ಏರಿದ್ದು, ಭೋಪಾಲ್​ನಲ್ಲಿ 83.85 ರೂಪಾಯಿ ಮತ್ತು ಮುಂಬೈನಲ್ಲಿ 82.66 ರೂಪಾಯಿಗೆ ಏರಿಕೆಯಾಗಿದೆ. ಒಂದೇ ವಾರದಲ್ಲಿ ಪೆಟ್ರೋಲ್​ ದರದಲ್ಲಿ ಲೀಟರ್​ಗೆ ಒಂದು ರೂಪಾಯಿ ಏರಿಕೆಯಾಗಿದೆ. (ಏಜೆನ್ಸೀಸ್​)

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts