More

    ಮಗಳು ಡಾನ್ಸ್​ ಮಾಡಿದ ವಿಡಿಯೋ ನೋಡಿದ ಅಪ್ಪ ಭಯದಿಂದ ಬೆವರಿಬಿಟ್ಟರು…; ಭಯಾನಕ ಎಂದಿದ್ದೇಕೆ ಅವರು?

    ತೈವಾನ್​: ಚೀನಾದ ತೈವಾನ್​​ನಲ್ಲಿರುವ ಥೈಪೆದ ನಿವಾಸಿಯೋರ್ವ ತನ್ನ ಪುಟ್ಟ ಮಗಳ ಹಳೇ ಫೋಟೋಗಳು, ಅವಳು ಡ್ಯಾನ್ಸ್​ ಮಾಡಿದ್ದ ವಿಡಿಯೋಗಳನ್ನೆಲ್ಲ ನೋಡುತ್ತಿದ್ದರು. ಆದರೆ ಅದರಲ್ಲಿ ಒಂದು ವಿಡಿಯೋ ನೋಡುತ್ತಿದ್ದಂತೆ ಅವರಿಗೆ ಭಯದಿಂದ ಬೆವರಲು ಶುರುವಾಯಿತು.

    ಹ್ವಾಂಗ್​ ಎನ್ನುವರಿಗೆ ಹೀಗೊಂದು ವಿಚಿತ್ರ, ಭಯಾನಕ ಅನುಭವ ಆಗಿದೆ. 2017ರ ಆಗಸ್ಟ್​ 22ರಲ್ಲಿ ಯನ್ಲಿನ್​ ಎಂಬಲ್ಲಿ ಇರುವ ತಮ್ಮ ಪತ್ನಿಯ ತವರುಮನೆಗೆ ಹೋಗಿದ್ದಾಗ ತನ್ನ ಪುಟ್ಟ ಮಗಳು, ಹಾಡು ಹೇಳುತ್ತ, ಡಾನ್ಸ್ ಮಾಡಿದ ವಿಡಿಯೋಗಳನ್ನು ಹ್ವಾಂಗ್​​ ಅವರೇ ಚಿತ್ರೀಕರಿಸಿದ್ದರು.

    ಅದನ್ನು ಇತ್ತೀಚೆಗೆ ಮತ್ತೊಮ್ಮೆ ನೋಡುತ್ತಿದ್ದಾಗ ಒಂದು ಭಯ ಹುಟ್ಟಿಸುವ ಆಕೃತಿ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಪುಟ್ಟ ಬಾಲಕಿ ಬೆಡ್​ ಮೇಲೆ ಕುಣಿದು, ಕುಪ್ಪಳಿಸುತ್ತಿದ್ದರೆ, ಹಿಂದೆ ಓರ್ವ ಮಹಿಳೆಯ ಆಕೃತಿ ಕಂಡಿತ್ತು. ಆ ಮಹಿಳೆಗೆ ಉದ್ದ ಕೂದಲಿತ್ತು. ಆದರೆ ಮುಖವೇ ಇರಲಿಲ್ಲ. ಇದು ವಿಡಿಯೋ ಮಾಡುವಾಗ ಗಮನಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಅದನ್ನು ಹತ್ತಿರದಿಂದ ನೋಡಿದಾಗ ಆಕೃತಿ ಕಾಣಿಸಿಕೊಂಡಿತ್ತು. ಅದನ್ನು ನೋಡುತ್ತಿದ್ದಂತೆ ಹಾಂಗ್​ ಭಯದಿಂದ ಬೆವರಿದ್ದರು.

    ಆ ವಿಡಿಯೋವನ್ನು ಕುಟುಂಬದವರಿಗೂ ತೋರಿಸಿದೆ. ಅದೊಂದು ದೆವ್ವದಂತೆ ಭಾಸವಾಯಿತು. ಮನೆಯವರೆಲ್ಲರೂ ಭಯಪಟ್ಟರು ಎಂದು ಹಾಂಗ್​ ತಿಳಿಸಿದ್ದಾರೆ.

    ಅಷ್ಟೇ ಅಲ್ಲ, ವಿಡಿಯೋ ಚಿತ್ರೀಕರಿಸಿದ ದಿನದಂದೇ ತನ್ನ ಮಾವನ ಮನೆಯ ಪಕ್ಕದಲ್ಲಿ ಒಂದು ಹುಡುಗಿ ಸತ್ತಿದ್ದಳು. ಆಕೆಯ ಅಂತ್ಯಕ್ರಿಯೆಯನ್ನು ಮನೆಯ ಹಿಂಭಾಗದಲ್ಲೇ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
    ಆದರೆ ನೆಟ್ಟಿಗರು ಇದೊಂದು ಪಕ್ಕಾ ಫೇಕ್​ ವಿಡಿಯೋ ಎಂದು ಹೇಳಿದ್ದಾರೆ. ಹ್ವಾಂಗ್ ಅವರು ಭಯ ಹುಟ್ಟಿಸಲೆಂದೇ ಹೀಗೆ ಮಾಡಿದ್ದಾರೆ. ಭೂತವೂ ಇಲ್ಲ, ಏನೂ ಇಲ್ಲ ಎಂದಿದ್ದಾರೆ.

    ಆದರೆ ಹ್ವಾಂಗ್​ ಮಾತ್ರ ಇದು ಸುಳ್ಳಲ್ಲ. ನಾನು ವಿಡಿಯೋ ಮಾಡುವಾಗ ಆ ಕೋಣೆಯಲ್ಲಿ ನಾನು ಮತ್ತು ಮಗಳು ಇಬ್ಬರೇ ಇದ್ದೆವು. ಉಳಿದವರೆಲ್ಲರೂ ಕೆಳಗೆ ಇದ್ದರು ಎಂದು ಹೇಳಿದ್ದಾರೆ. ನಾನು ನನಗಾದ ಸತ್ಯವಾದ ಅನುಭವವನ್ನೇ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.(ಏಜೆನ್ಸೀಸ್​)

    ಮಗಳು ಡಾನ್ಸ್​ ಮಾಡಿದ ವಿಡಿಯೋ ನೋಡಿದ ಅಪ್ಪ ಭಯದಿಂದ ಬೆವರಿಬಿಟ್ಟರು...; ಭಯಾನಕ ಎಂದಿದ್ದೇಕೆ ಅವರು?

    ಕಂಬಳಿ ಹೊದ್ದು ಮಲಗಿ ಬೇಬಿ ಬಂಪ್​ ವಿಡಿಯೋ ಮಾಡಿದ ಮಹಿಳೆ; ಬಳಿಕ ಆ ವಿಡಿಯೋ ನೋಡಿ ನಲುಗಿಹೋದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts