More

    ಕೇಂದ್ರ ಸಚಿವೆಗೆ ಮನವಿ ಸಲ್ಲಿಕೆ

    ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜಿಲ್ಲಾ ಫೆಡರೇಷನ್ ಕಾರ್ಯಕರ್ತೆಯರು ಭಾನುವಾರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.

    ಫೆಡರೇಶನ್ ತಾಲೂಕು ಅಧ್ಯಕ್ಷೆ ಶೈಲಾ ಬಸವರಾಜ್ ಮಾತನಾಡಿ, ದೇಶದಲ್ಲಿ ಐಸಿಡಿಎಸ್ ಯೋಜನೆಗಳಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ 4,500 ರೂ. ಹಾಗೂ ಸಹಾಯಕಿಯರಿಗೆ 2,250 ರೂ. ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
    10 ವರ್ಷಗಳಿಂದ ಗೌರವಧನ ಹೆಚ್ಚಿಸದ ಕಾರಣ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಜೀವನ ಸಂಕಷ್ಟದಿಂದ ಕೂಡಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಿಸಬೇಕು. ನಿವೃತ್ತಿ ವೇತನ, ಗ್ರಾಚುಟಿ ಸೌಲಭ್ಯ ಹಾಗೂ ಆರೋಗ್ಯ ವಿಮೆ ಒದಗಿಸಬೇಕು ಎಂದು ಒತ್ತಾಯಿಸಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು. ಪೋಷಣ್ ಕಾರ್ಯಕ್ರಮದಲ್ಲಿ ಮೊಬೈಲ್ ಹಣ ಹೆಚ್ಚಳ ಮಾಡಿ ಬೆಲೆ ಏರಿಕೆಗೆ ತಕ್ಕಂತೆ ಗುಣಮಟ್ಟದ ಮೊಬೈಲ್ ಖರೀದಿಗೆ ಅನುದಾನ ಒದಗಿಸಿಕೊಡಬೇಕು. ಸರ್ಕಾರದ ಬಜೆಟ್‌ನಲ್ಲಿ ಬೇಡಿಕೆ ಜಾರಿ ಮಾಡುವಂತೆ ಒತ್ತಾಯಿಸಬೇಕು ಎಂದರು.
    ಫೆಡರೇಷನ್ ತರೀಕೆರೆ ಅಧ್ಯಕ್ಷೆ ಕೆ.ಟಿ.ಸವಿತಾ, ಮೂಡಿಗೆರೆ ಅಧ್ಯಕ್ಷೆ ಶೈಲಾ, ಪದಾಧಿಕಾರಿಗಳಾದ ಕಲಾ, ನಳಿನಾ, ದೀಪಿಕಾ, ವನಜಾಕ್ಷಿ, ಗ್ರಾಪಂ ಸದಸ್ಯ ವಿನೋದ್ ಬೊಗಸೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts