More

    ನಾಯಿಗೆ ರೋಪ್​ ಕಟ್ಟಿ ಬೈಕ್​ನಲ್ಲಿ ಒಂದು ಕಿಲೋಮೀಟರ್​ ದೂರ ದರದರನೆ ಎಳೆದೊಯ್ದ; ವಿಡಿಯೋ ವೈರಲ್​, ಎಳೆದವ ಅಂದರ್…

    ಸೂರತ್​: ಇಲ್ಲೊಬ್ಬ ಮನುಷ್ಯ ಅಮಾನುಷ ವರ್ತನೆ ತೋರಿ ತಾನು ಪ್ರಾಣಿಗಿಂತಲೂ ಕಡೇ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಅರ್ಥಾತ್, ವ್ಯಕ್ತಿಯೊಬ್ಬ ನಾಯಿಗೆ ರೋಪ್ ಕಟ್ಟಿಕೊಂಡು ಬೈಕ್​ನಲ್ಲಿ ಒಂದು ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ಎಳೆದೊಯ್ದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

    ಆರೋಪಿಯನ್ನು ಸೂರತ್ ಮುನಿಸಿಪಲ್ ಕಾರ್ಪೋರೇಷನ್​ನ ಸ್ವಚ್ಛತಾ ಸಿಬ್ಬಂದಿ ಹಿತೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆತನಿಗೆ ಸಹಕರಿಸಿದ ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ಮುಂದುರಿಸಿದ್ದಾರೆ. ಇಂಥದ್ದೊಂದು ಅಮಾನವೀಯ ವರ್ತನೆಯ ವಿಡಿಯೋ ವೈರಲ್​ ಆಗಿದ್ದು, ಅದೇ ಕಾರಣಕ್ಕೆ ಆರೋಪಿ ಸುಲಭದಲ್ಲಿ ಸಿಕ್ಕಿಬಿದ್ದಿದ್ದಾನೆ.

    ಗುಜರಾತ್​ನ ಸೂರತ್​ನಲ್ಲಿನ ವೇಸು ಎಂಬಲ್ಲಿನ ಭಗವಾನ್​ ಮಹಾವೀರ್ ಕಾಲೇಜು ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ವಿಡಿಯೋದಿಂದ ಕಂಡುಬಂದಿದೆ. ಆರೋಪಿ ಹಿತೇಶ್ ಮಂಗಳವಾರ ಬೈಕ್​ ಮೇಲೆ ಕುಳಿತು ಕುತ್ತಿಗೆಗೆ ರೋಪ್​ ಕಟ್ಟಲಾಗಿರುವ ನಾಯಿಯನ್ನು ಎಳೆದೊಯ್ದಿದ್ದಾನೆ. ಆತನ ಗೆಳೆಯನೊಬ್ಬ ಬೈಕ್ ಓಡಿಸುತ್ತಿದ್ದ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬರು ಖಟೋದರ ಪೊಲೀಸ್​ ಠಾಣೆಯ ಗಮನಕ್ಕೆ ತಂದಿದ್ದರು.

    ಇದನ್ನೂ ಓದಿ: ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…

    ವಿಡಿಯೋದಲ್ಲಿ ಕಾಣಿಸಿದ ಬೈಕ್​ನ ನಂಬರ್​ನ ಜಾಡು ಹಿಡಿದು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನಾಯಿ ಸತ್ತು ಹೋಗಿದ್ದು, ಅದರ ಮೃತದೇಹವನ್ನು ವಿಲೇ ಮಾಡಲು ಕೊಂಡೊಯ್ಯುತ್ತಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ವಿಡಿಯೋದಲ್ಲಿ ನಾಯಿಯ ಚಲನೆ ಹಾಗೂ ಎಳೆಯುತ್ತಿದ್ದುದಕ್ಕೆ ಅದರ ಪ್ರತಿರೋಧ ಕಾಣಿಸುತ್ತಿದ್ದು, ನಾಯಿ ಜೀವಂತವಾಗಿತ್ತು ಎನ್ನುವ ಮೂಲಕ ಪ್ರಾಣಿಪ್ರಿಯ ಹಲವರು ಆರೋಪಿಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    Video | ಸ್ಟೈಲ್​ಕಿಂಗ್​ ಚಾಯ್​ವಾಲಾ: ವೈರಲ್​ ಆಗಿದೆ ಈತನ ಕೈಚಳಕದ ಝಲಕ್​; ಈ ವಿಡಿಯೋ ನೋಡಿದ್ರೆ ಇಲ್ಲೊಮ್ಮೆ ಟೀ ಕುಡಿಯಬೇಕು ಅನಿಸಬಹುದು!

    ರಾಜೀವ್ ಗಾಂಧಿ ಹತ್ಯೆ ವಿಚಾರ ಮತ್ತೆ ಪ್ರಸ್ತಾಪ; ರಾಹುಲ್​ ಗಾಂಧಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts