More

    ಚಿಕಿತ್ಸೆಗೆಂದು ಉಡುಪಿಯಿಂದ ಬೆಂಗಳೂರಿಗೆ ಬಂದವನ ಎರಡೂ ಕಾಲು ಪೂರ್ತಿ ಜಖಂ!

    ಬೆಂಗಳೂರು: ಬಿಎಂಟಿಸ್ ಬಸ್ ಹತ್ತುವಾಗ ಆಯತಪ್ಪಿ ರಸ್ತೆಗೆ ಬಿದ್ದಾಗ ಬಸ್‌ನ ಹಿಂಬದಿ ಚಕ್ರಗಳು ವ್ಯಕ್ತಿಯ ಎರಡು ಕಾಲುಗಳ ಮೇಲೆ ಹರಿದು ಆತ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಯಶವಂತಪುರ ವೃತ್ತದಲ್ಲಿ ನಡೆದಿದೆ.

    ಉಡುಪಿ ಮೂಲದ ರವಿ (50) ಗಾಯಗೊಂಡವರು. ಶುಕ್ರವಾರ ರಾತ್ರಿ 10.10ರ ಸುಮಾರಿಗೆ ಯಶವಂತಪುರ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ರವಿ ಅವರ ಎರಡೂ ಕಾಲುಗಳು ಸಂಪೂರ್ಣ ಜಜ್ಜಿ ಹೋಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

    ರವಿ ಉಬ್ಬಸ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಶುಕ್ರವಾರ ಉಡುಪಿಯಿಂದ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಯಶವಂತಪುರ ಸರ್ಕಲ್‌ನಿಂದ ಮೆಜೆಸ್ಟಿಕ್​ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಯಶವಂತಪುರ ಸರ್ಕಲ್‌ನಲ್ಲಿ ಮುಂಬಾಗಿಲಿನಿಂದ ಬಿಎಂಟಿಸಿ ಬಸ್ ಏರಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದ ಪರಿಣಾಮ ರವಿ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಹಿಂಬದಿ ಚಕ್ರಗಳು ರವಿ ಅವರ ಎರಡೂ ಕಾಲುಗಳ ಮೇಲೆ ಹರಿದಿವೆ. ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.

    ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಘಟನೆಗೆ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts