More

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಬೆಂಗಳೂರು: 25 ಸಾವಿರಕ್ಕೂ ಅಧಿಕ ಮಾತ್ರೆಗಳನ್ನು ತಿಂದರೂ ಪ್ರಯೋಜನವಾಗಿಲ್ಲ ಎಂದು ಬೇಸತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೊನೆಗೆ ತಾನೇ ಗುಂಡು ಹೊಡೆದುಕೊಂಡು ಸಾವು ಕಂಡಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಬೆಂಗಳೂರಿನ ಯಲಹಂಕದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್​. ಕಮಲಾಕರ್ ಎಂಬವರು ಕೊಡಿಗೇಹಳ್ಳಿಯ ಎನ್​ಟಿಐ ಲೇಔಟ್​​ನಲ್ಲಿರುವ ತಮ್ಮ ಮನೆಯಲ್ಲಿ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಕೋಣೆ ಬಾಗಿಲು ಹಾಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರು ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಗಿದೆ.

    ಇದನ್ನೂ ಓದಿ: ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್​, ಈಗ ಬದುಕು ಕೂಡ ಅಂತ್ಯ: ಎಸ್ಟೀಮ್​ ಕಾರಿನಲ್ಲಿ ಅನಾಥವಾಗಿತ್ತು ಶವ…

    ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯ ತೆಂಕಬೈಲಿನವರಾದ ಕಮಲಾಕರ್, ನಾಲ್ಕು ವರ್ಷಗಳಿಂದ ಯಲಹಂಕದಲ್ಲಿ ಬಿಇಒ ಆಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಒಬ್ಬ ಮಗನಿದ್ದಾನೆ. ಸಾವಿಗೂ ಮುನ್ನ ಇವರು ಡೆತ್​ನೋಟ್ ಬರೆದಿಟ್ಟಿದ್ದರು.

    ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದು, ಇದುವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ. ಈ ಅನಾರೋಗ್ಯದಿಂದ ಜೀವನವೇ ಸಾಕು ಅನಿಸಿದೆ. ನನ್ನ ಕುಟುಂಬದವರು ಇಲ್ಲಿಯವರೆಗೆ ನೋಡಿಕೊಂಡಿರೋದು ನಿಜಕ್ಕೂ ನನ್ನ ಅದೃಷ್ಟ. ಅವರಿಗೆ ಇನ್ನೂ ಹೆಚ್ಚು ನೋವು ಕೊಡಲು ನನಗೆ ಇಷ್ಟ ಇಲ್ಲ. ನಮ್ಮ ಮನೆಯವರು ಎಲ್ಲರೂ ತುಂಬಾ ಒಳ್ಳೆಯವರು. ಇನ್ಮುಂದೆ ಯಾರಿಗೂ ತೊಂದರೆ ಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಅಂತ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ ಎಂದು ಡಿಡಿಪಿಐ ನಾರಾಯಣ್ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

    ಕಮಲಾಕರ್ ಒಳ್ಳೆಯ ಅಧಿಕಾರಿಯಾಗಿದ್ದರು. ಈ ರೀತಿ ಆಗಿರುವುದು ನಮ್ಮ ಇಲಾಖೆಗೆ ದೊಡ್ಡ ನಷ್ಟ. ಅವರಿಗೆ ಕಾಯಿಲೆ ಇರುವುದರ ಬಗ್ಗೆ ಈಗಲೇ ನನಗೆ ಗೊತ್ತಾಗಿದ್ದು‌. ಈ ರೀತಿ ಮಾಡಿಕೊಳ್ಳುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಇಲಾಖೆಯ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಿಳಿಸಿದ್ದಾರೆ.

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts