More

    ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ:ಶ್ರೀ ಮರುಳಾರಾಧ್ಯ ಶಿವಾಚಾರ್ಯರ ಅನಿಸಿಕೆ

    ಅಳವಂಡಿ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮ ಅಗತ್ಯವಿದ್ದು, ಪ್ರತಿಯೊಬ್ಬರೂ ಆಧುನಿಕ ಜಗತ್ತಿನ ವೇಗಕ್ಕೆ ತಕ್ಕಂತೆ ಸ್ಪರ್ಧೆಯನ್ನು ಎದುರಿಸಿ ಮುನ್ನಡೆಯಬೇಕು ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    12ನೇ ಮಾಸಿಕ ಶಿವಾನುಭವ ಸತ್ಸಂಗ ಕಾರ್ಯಕ್ರಮ


    ಗ್ರಾಮದ ಶ್ರೀ ಸಿದ್ದೇಶ್ವರ ಮಠದಲ್ಲಿ ಆಯೋಜಿಸಿದ್ದ 12ನೇ ಮಾಸಿಕ ಶಿವಾನುಭವ ಸತ್ಸಂಗ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ ಗೌರವ ಸ್ಥಾನದಲ್ಲಿದೆ. ಸರ್ವರೂ ಧರ್ಮದೊಂದಿಗೆ ಜೀವನ ನಡೆಸಿ ಕಾಯಕದಲ್ಲಿ ದೇವರನ್ನು ಕಾಣಬೇಕು. ಆಗ ಮಾತ್ರ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

    ಇದನ್ನೂ ಓದಿ: ಕಿಡ್ನಿ ರೋಗಿಗಳ ಸಹಾಯಕ್ಕಾಗಿ ಸಂಗೀತ ಕಾರ್ಯಕ್ರಮ, ಕಲಾ ಪ್ರದರ್ಶನ


    ಗ್ರಾಪಂ ಸದಸ್ಯ ಅಂದಪ್ಪ ಚಿಲಗೋಡ್ರ ಮಾತನಾಡಿ, ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ, ಸಮುದಾಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಸಾಮೂಹಿಕ ಒಗ್ಗಟ್ಟಿನ ಭಾವನೆ ಮೂಡಿಸಲಿದೆ ಎಂದು ಹೇಳಿದರು.
    ಸಂಗೀತಕಾರ ರಮೇಶ ಪೂಜಾರ ಹಾಗೂ ತಬಲಾ ವಾದಕ ಬಸವರಾಜ ಹಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಚಿಕ್ಕವೀರಜ್ಜ ಕವಡಿಮಟ್ಟಿ, ಸಿದ್ದಣ್ಣ ಕೋರಿಶೆಟ್ಟರ, ಗೀರಿಶ ಕಣವಿ, ರಮೇಶ ಭಾವಿಹಳ್ಳಿ, ಶ್ರೀನಿವಾಸ ಕಲಾದಗಿ, ಹನುಮಂತಪ್ಪ ಉಂಕಿ, ಹನುಮಂತ ಸಾಹುಕಾರ, ನಾಗಪ್ಪ ಮಾಸ್ತರ, ಬಸಣ್ಣ ಟುಬಾಕಿ, ಶರಣಪ್ಪ ಗದ್ದಿಕೇರಿ, ಕಾಸಯ್ಯ ಭ್ಯಾರಾಪುರ, ಪ್ರತಾಪ ಭಾವಿಹಳ್ಳಿ, ಅಶೋಕ ಬಂಡಿ, ರವಿ ಭಾವಿಹಳ್ಳಿ, ಉಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts