More

    ದುಷ್ಕರ್ಮಿಗಳ ಬಂಧನಕ್ಕೆ ರೈತರ ಆಗ್ರಹ

    ಬೆಳಗಾವಿ: ರೈತ ಮುಖಂಡ ರಾಕೇಶ ಟಿಕಾಯತ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರಾಜಸ್ಥಾನದ ಅಲ್ವಾರ ಜಿಲ್ಲೆಯ ಕತಾರ್ಪುರ ಗ್ರಾಮದ ಬಳಿ ಏ. 2ರಂದು ದುಷ್ಕರ್ಮಿಗಳ ತಂಡವು ರಾಕೇಶ ಅವರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಲು ಯತ್ನಿಸಿದೆ. ರಾಜಕೀಯ ಪಕ್ಷಗಳ ಕೆಲವು ಗೂಂಡಾಗಳೇ ಹಲ್ಲೆಗೆ ಯತ್ನಿಸಿದ್ದು, ಅಲ್ಲಿನ ಸರ್ಕಾರ ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿದರು.

    ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ರಾಘವೇಂದ್ರ ನಾಯಕ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ರೈತ ಮುಖಂಡ ರಾಕೇಶ ಟಿಕಾಯತ್ ನೇತೃತ್ವದಲ್ಲಿ ನಿರಂತರವಾಗಿ ರೈತ ಚಳವಳಿ ನಡೆಯುತ್ತಿವೆ. ಅಲ್ಲದೆ, ರೈತ ವಿರೋಧಿ ನಿರ್ಣಯ ಕೈಗೊಳ್ಳುತ್ತಿರುವ ಆಯಾ ರಾಜ್ಯ ಸರ್ಕಾರಗಳ ವಿರುದ್ಧ ‘ರೈತ ಪಂಚಾಯತ್’ ಸಭೆ ನಡೆಸುವ ಮೂಲಕ ರೈತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಹೀಗಾಗಿ ಅವರ ಹೋರಾಟ ಹತ್ತಿಕ್ಕಲು ಇದೀಗ ರಾಜಕೀಯ ಪಕ್ಷಗಳ ಬೆಂಬಲಿತರು ಅವರ ಮೇಲೆ ಕಲ್ಲು ತೂರಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಲುವಾಗಿ ನಿರಂತರ ಹೋರಾಟ ನಡೆಸುತ್ತಿರುವ ರಾಕೇಶ ಟಿಕಾಯತ್ ಅವರಿಗೆ ಸರ್ಕಾರಗಳು ಸೂಕ್ತ ಭದ್ರತೆ ನೀಡಬೇಕು. ಅಲ್ಲದೆ, ಅವರ ಪ್ರವಾಸ ಮಾರ್ಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ರೈತರು ವಿನಂತಿಸಿದರು.

    ರೈತ ಸಂಘಟನೆಯ ಶಿವಾಜಿ ಬುರಲಿ, ಜಯಶ್ರೀ ಗುರಣ್ಣವರ, ಸಿದಗೌಡ ಮೋದಗಿ, ಅಪ್ಪಾಸಾಹೇಬ ದೇಸಾಯಿ ಸೇರಿದಂತೆ ಅನೇಕ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts