More

    ನಾಟಕಗಳ ಪ್ರದರ್ಶನವಿಂದು ದುಬಾರಿಯಾಗಿದೆ

    ಚಿತ್ರದುರ್ಗ: ಸಿನಿಮಾ, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ಶಿಕ್ಷಣದೊಂದಿಗೆ ರಂಗಭೂಮಿಯ ಪರಿಸ್ಥಿತಿ ಕೂಡ ಹದಗೆಡುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಹೇಳಿದರು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್, ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

    ನಾಟಕಗಳ ಪ್ರದರ್ಶನವಿಂದು ದುಬಾರಿಯಾಗಿದೆ. ಒಂದು ಕಾಲದಲ್ಲಿ ನಾಟಕಗಳಿಗೆ ಜನರ ಪ್ರೋತ್ಸಾಹವಿತ್ತು. ಆದರೆ, ಈಗ ಸಿನಿಮಾ, ಟಿವಿ, ಸಾಮಾಜಿಕ ಜಾಲತಾಣಗಳಿಂದಾಗಿ ಜನರು ರಂಗಭೂಮಿಯಿಂದ ದೂರವಾಗುತ್ತಿದ್ದಾರೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಉಸ್ತುವಾರಿ ಪೀಠಾಧ್ಯಕ್ಷ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ರಂಗಭೂಮಿ ನೀತಿ ಬೋ ಧಿಸುವ ಪಾಠಶಾಲೆ. ಶ್ರೀ ಶಿವಕುಮಾರ ಕಲಾ ಸಂಘ ಮತ್ತು ಜಮುರಾ ಕಲಾಲೋಕದ ತಂಡಗಳು ನಾಟಕಗಳ ಪ್ರದರ್ಶನದ ಮೂಲಕ ಜನ ರಿಗೆ ಉತ್ತಮ ಸಂದೇಶ ನೀಡುತ್ತಿವೆ. ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿಲ್ಲ. ರಂಗಭೂಮಿಯ ಮೂಲಕ ಸಂಸ್ಕಾರ ಕಲಿಸಲು ನೆರವಾಗುತ್ತದೆ ಎಂದರು.

    ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವಿರೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ, ಪತ್ರಕರ್ತ ಜಿ. ಎಸ್. ಉಜ್ಜಿನಪ್ಪ, ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿ ಕಾರ್ಜನ್, ಡಾ. ಚಾಂದಿನಿ ಖಾಲಿದ್, ಮಹಡಿ ಶಿವಮೂರ್ತಿ, ಕೆಪಿಎಂ ಗಣೇಶಯ್ಯ ಇತರರು ಇದ್ದರು. ನವೀನ್ ಮಂಡ್ಯ ನಿರ್ದೇಶನದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ರಚಿಸಿರುವ ಬಿಜ್ಜಳ ನ್ಯಾಯ ನಾಟಕ ಪ್ರದರ್ಶನವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts