More

    ಭಾರತೀಯ ಕಂಪನಿಗಳಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್​ ಹೊಂದಿರುವ ಹೂಡಿಕೆ ಎಷ್ಟು ಗೊತ್ತಾ?

    ಮುಂಬೈ: ಲಡಾಖ್ ಬಿಕ್ಕಟ್ಟಿನ ನಂತರದಲ್ಲಿ ದೇಶಾದ್ಯಂತ ಚೀನಾ ವಿರೋಧಿ ಮನೋಭಾವ ಹೆಚ್ಚಾಗಿದೆ. ಜನರು ಚೀನಾದ ವಸ್ತುಗಳನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಆದರೆ, ಇಂಥ ಒಂದು ವಿದ್ಯಮಾನ ಉಂಟಾಗುವ ಮುನ್ನವೇ ಚೀನಾದ ಕೇಂದ್ರೀಯ ಬ್ಯಾಂಕ್​ ಪೀಪಲ್ಸ್​ ಬ್ಯಾಂಕ್​ ಆಫ್​ ಚೀನಾ (ಪಿಬಿಒಸಿ) ಭಾರತೀಯ ಕಂಪನಿಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ ಎಂಬುದು ಗಮನಾರ್ಹವಾಗಿದೆ.

    ಭಾರತದ ಪ್ರಮುಖ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಪಿಬಿಒಸಿ ಶೇ.1 ಹೂಡಿಕೆ ಹೊಂದಿದೆ. ಇದೇ ರೀತಿ ಇನ್ನೂ ಹಲವು ಸಂಸ್ಥೆಗಳಲ್ಲಿ ಅದರ ಹೂಡಿಕೆ ಇದೆ. ಆದರೆ, ಹೂಡಿಕೆಗಳು ಶೇ.1 ಅಥವಾ ಅದಕ್ಕಿಂತ ಕಡಿಮೆ ಇರುವುದರಿಂದ ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಗೋವಾ ವೈದ್ಯ ಬೀಳ್ಕೊಡುವ ರೀತಿ ಇದು!

    ಪಿರಾಮಲ್​ ಎಂಟರ್​ಪ್ರೈಸಸ್​ನಲ್ಲಿ ಶೇ.0.43 ಹೂಡಿಕೆ ಹೊಂದಿರುವ ಪಿಬಿಒಸಿ, ಅಂಬುಜಾ ಸಿಮೆಂಟ್​ನಲ್ಲಿ ಶೇ.32 ಹೂಡಿಕೆ ಹೊಂದಿದೆ. ಕೇಂದ್ರ ಸರ್ಕಾರ ವಿದೇಶಿ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದ ನಂತರದಲ್ಲಿ ಈ ಹೂಡಿಕೆಗಳ ಮಾಹಿತಿ ಬಹಿರಂಗಗೊಂಡಿದೆ.

    ಎಚ್​ಡಿಎಫ್​ಸಿಯಲ್ಲಿ ಪಿಬಿಒಸಿಯ 3,100 ಕೋಟಿ ರೂ. ಹೂಡಿಕೆ ಇದ್ದರೆ, ಪಿರಾಮಲ್​ ಎಂಟರ್​ಪ್ರೈಸಸ್​ನಲ್ಲಿ 137 ಕೋಟಿ ರೂ. ಹಾಗೂ ಅಂಬುಜಾ ಸಿಮೆಂಟ್​ನಲ್ಲಿ 122 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಭಾರತದಲ್ಲಿ ತನ್ನ ಶಾಖೆಯನ್ನು ಆರಂಭಿಸಲು ಪಿಬಿಒಸಿಗೆ ಅನುಮತಿ ನೀಡಿತ್ತು. ಈ ಬ್ಯಾಂಕಿನ ಮೂಲಕ ಚೀನಾದ ಹಲವು ಕಂಪನಿಗಳು ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಟ್ಟಿರುವ ಕಂಪನಿಗಳಲ್ಲಿ ಹಾಗೂ ಭಾರತೀಯ ಆರ್ಥಿಕತೆಯಲ್ಲಿ ವ್ಯೋಹಾತ್ಮಕವಾಗಿ ಮಹತ್ವ ಪಡೆದುಕೊಂಡಿರುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಒಲವು ತೋರಿದ್ದವು ಎನ್ನಲಾಗಿದೆ.

    ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts