More

    ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕವಾಗಿ ಬ್ಯಾಟರಾಯನಪುರ, ಪಾದರಾಯನಪುರ ಸೀಲ್​ ಡೌನ್​: ಭಾಸ್ಕರ್​ ರಾವ್​

    ಬೆಂಗಳೂರು: ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕ ರೀತಿಯಲ್ಲಿ ಬಿಬಿಎಂಪಿಯ ಬ್ಯಾಟರಾಯನಪುರ ಮತ್ತು ಪಾದರಾಯನಪುರ ವಾರ್ಡ್​ಗಳನ್ನು ಸೀಲ್​ ಡೌನ್​ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ತಿಳಿಸಿದ್ದಾರೆ.

    ಆಯುಕ್ತರ ಕಚೇರಿಯಲ್ಲಿ ಶುಕ್ರವಅರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಬಿಎಂಪಿಯ ವಾರ್ಡ್​ ನಂ.134 ಮತ್ತು ವಾರ್ಡ್​ ನಂ.135ರ ವ್ಯಾಪ್ತಿಯಲ್ಲಿ ಒಂದೇ ದಿನ 5 ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಆ ಪ್ರದೇಶಗಳನ್ನು ಸೀಲ್​ ಡೌನ್​ ಮಾಡಲು ಸರ್ಕಾರ ತೀರ್ಮಾನಿಸಿತು. ಅದರಂತೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶಗಳನ್ನು ಸೀಲ್​ ಡೌನ್​ ಮಾಡಿದ್ದಾಗಿ ವಿವರಿಸಿದರು.

    ನಗರದಲ್ಲಿ ಸದ್ಯ ಈ ಎರಡು ಪ್ರದೇಶಗಳನ್ನು ಹೊರತುಪಡಿಸಿ, ಬೇರಾವುದೇ ಪ್ರದೇಶವನ್ನು ಸೀಲ್​ ಡೌನ್​ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
    ಎರಡು ವಾರ್ಡ್​ಗಳ ಸೀಲ್​ ಡೌನ್​ನಿಂದಾಗಿ 45 ಸಾವಿರ ಜನರು ತಮ್ಮ ಮನೆಗಳಿಗೇ ಸೀಮಿತಗೊಂಡಿದ್ದಾರೆ. ಹಾಗೆಂದು ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಅವರವರ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

    108ಕ್ಕೆ ಡಯಲ್​ ಮಾಡಿ ಆರೋಗ್ಯ ಸೇವೆಗಳನ್ನು ಹಾಗೂ ನಮ್ಮ 100ಕ್ಕೆ ಕರೆ ಮಾಡಿ ಉಳಿದ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

    ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಈ ಎರಡು ಪ್ರದೇಶಗಳನ್ನು ಹೊರತುಪಡಿಸಿ ನಗರದ ಉಳಿದೆಡೆಗಳಲ್ಲಿ ಎಂದಿನಂತೆ ದಿನಸಿ, ತರಕಾರಿ, ಹಣ್ಣುಹಂಪಲು ಮತ್ತು ಔಷಧಗಳು ಎಂದಿನಂತೆ ಲಭ್ಯ ಇರಲಿವೆ ಎಂದು ತಿಳಿಸಿದರು.

    ಬಾಪೂಜಿನಗರ, ಪಾದರಾಯನಪುರ ಸೀಲ್ ಡೌನ್: ಯಾವುದೇ ಕಾರಣಕ್ಕೂ ಹೊರಗೆ ಬರಲು ಅವಕಾಶವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts