More

    ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು…

    ನವದೆಹಲಿ: ಭಾರತ್ ಸಂಚಾರ್ ನಿಗಮ ಲಿಮಿಟೆಡ್​ (ಬಿಎಸ್​ಎನ್​ಎಲ್​) ಎಂದರೆ ‘ಬೋತ್ ಸೈಡ್ ನಾಟ್ ಲಿಸನಿಂಗ್’ ಎಂದು ಮೂಗು ಮುರಿಯುತ್ತಿದ್ದ ಸಾರ್ವಜನಿಕರಲ್ಲಿ ಇದೀಗ ಇದ್ದಕ್ಕಿದ್ದಂತೆ ಬಿಎಸ್​ಎನ್​ಎಲ್ ಪ್ರೇಮ ಹುಟ್ಟಿಕೊಂಡಿದೆ. ಬಿಎಸ್​ಎನ್​ಎಲ್ ಬಳಕೆಯೇ ಲೇಸು ಎಂದು ಹಲವರು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟಕ್ಕೂ ಹೀಗೆ ಜನರಲ್ಲಿ ಇದ್ದಕ್ಕಿದ್ದಂತೆ ಬಿಎಸ್​ಎನ್​ಎಲ್​ನತ್ತ ಒಲವು ಮೂಡಲು ಪ್ರಮುಖ ಕಾರಣ ಆ ಮೂವರು.

    ಅಂದರೆ ಜಿಯೋ, ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್​ಟೆಲ್ ಕಂಪನಿಗಳು. ವೊಡಾಫೋನ್​ ಐಡಿಯಾ ಹಾಗೂ ಭಾರ್ತಿ ಏರ್​ಟೆಲ್​ ತನ್ನ ಟ್ಯಾರಿಫ್​​ ದರದಲ್ಲಿ ಹೆಚ್ಚಳ ಮಾಡಿದ ಬೆನ್ನಿಗೆ ಅತ್ಯಂತ ದೊಡ್ಡ ದೂರಸಂಪರ್ಕ ಜಾಲದಲ್ಲಿ ಒಂದಾಗಿರುವ ಜಿಯೋ ಕಂಪನಿ ಕೂಡ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

    ಇದನ್ನೂ ಓದಿ: ನಂಜನಗೂಡು ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್; ಪ್ರೆಯಸಿಗಾಗಿ ಜಗಳ ಮಾಡಿಕೊಂಡವ ಜೈಲಲ್ಲಿ ಸಾವು

    ಡಿ. 1ರಿಂದ ಜಿಯೋ ಟ್ಯಾರಿಫ್​​ನಲ್ಲಿ ಶೇ. 20 ಹೆಚ್ಚಳ ಆಗುವುದಾಗಿ ಕಂಪನಿ ಘೋಷಿಸಿದೆ. ಅಂದರೆ 75, 129, 399, 1299, 2399 ರೂ. ಇರುವ ಸದ್ಯದ ಪ್ಲ್ಯಾನ್​ಗಳು ಡಿ. 1ರಿಂದ ಕ್ರಮವಾಗಿ 91, 155, 479, 1599, 2879 ರೂ. ಆಗಲಿವೆ. ಸರಿಯಾದ ನೆಟ್​​ವರ್ಕ್​ ಲಭ್ಯ ಇರದಿದ್ದರೂ, ಇಂಟರ್​ನೆಟ್​ ಸ್ಪೀಡ್​ ಸಮರ್ಪಕವಾಗಿ ಇರದಿದ್ದರೂ ಏಕಾಏಕಿ ದರ ಹೆಚ್ಚಳದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು ಖಾಸಗೀಕರಣದ ವಿರುದ್ಧವೂ ಬೇಸರ ಹೊರಹಾಕಿದ್ದಾರೆ.

    ಇದನ್ನೂ ಓದಿ: ನಟ ಪುನೀತ್ ರಾಜಕುಮಾರ್ ಫೌಂಡೇಷನ್​ ಸಹಾಯಾರ್ಥ ನಡೆಯಬೇಕಿದ್ದ ಶೋಗೆ ಪೊಲೀಸರ ತಡೆ, ಇಂದಿನ ಕಾರ್ಯಕ್ರಮ ರದ್ದು..

    ಮಾತ್ರವಲ್ಲ, ಬಿಎಸ್​ಎನ್​ಎಲ್​ ಟ್ಯಾರಿಫ್​ ಜತೆ ಹೋಲಿಸಿ ಮಾತನಾಡುತ್ತಿರುವ ನೆಟ್ಟಿಗರು, ಅದರತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟೇ ಅಲ್ಲ #BoycottJioVodaAirtel ಎನ್ನುವ ಜತೆಗೆ ಬಿಎಸ್​ಎನ್​ಎಲ್​ಗೆ ಸ್ವಿಚ್​ ಆಗೋಣ ಎಂಬುದಾಗಿ ಅಭಿಯಾನವನ್ನೇ ನಡೆಸುತ್ತಿದ್ದು, #BoycottJioVodaAirtel ಟ್ರೆಂಡಿಂಗ್​ನಲ್ಲಿದೆ.

    ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು...

     

    ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts