More

    ಜನರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳು: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಮಾಹಿತಿ

    ಕೊಪ್ಪಳ: ವಿವಿಧ ದಾಖಲೆಗಳಿಗಾಗಿ ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮದಡಿ ರೈತರಿಗೆ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ, ಜಮೀನಿನ ನಕ್ಷೆಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಪ್ಪಳ ತಾಲೂಕಿನ ಓಜನಳ್ಳಿ ಗ್ರಾಮದಲ್ಲಿ ಮಾ.12ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ದಾಖಲೆ ನೀಡಲಿದ್ದಾರೆ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕಂದಾಯ ಗ್ರಾಮಗಳಿವೆ. ಮೂರು ದಿನದೊಳಗೆ ಎಲ್ಲರಿಗೂ ವಿತರಿಸಲಾಗುವುದು. ಒಂದೊಮ್ಮೆ ತಲುಪದಿದ್ದಲ್ಲಿ ವಾರದೊಳಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕೊಪ್ಪಳ, ಕಾರಟಗಿ, ಕುಕನೂರ, ಕನಕಗಿರಿ ತಾಲೂಕುಗಳ 1,59,941 ಕುಟುಂಬಗಳಿಗೆ 2,06,858 ಪಹಣಿಗಳು, 30,4282 ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 27,636 ಜಮೀನು ನಕ್ಷೆ, 94,003 ಎನವಲಪ್ ಕವರ್‌ಗಳನ್ನು ವಿತರಿಸಲಾಗುವುದು. ಕಂದಾಯ ಇಲಾಖೆಯ 300ಕ್ಕೂ ಹೆಚ್ಚು ಸಿಬ್ಬಂದಿ ಮೂರ‌್ನಾಲ್ಕು ದಿನದಲ್ಲಿ ದಾಖಲೆ ನೀಡಿ ರೈತರಿಂದ ದಾಖಲೆ ಪಡೆದ ಬಗ್ಗೆ ಸಹಿ ಮಾಡಿಸಿಕೊಳ್ಳಲಿದ್ದಾರೆಂದು ಡಿಸಿ ವಿಕಾಸ್ ಕಿಶೋರ್ ತಿಳಿಸಿದರು. ಎಡಿಸಿ ಎಂ.ಪಿ.ಮಾರುತಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ ಇದ್ದರು.

    ಅಂಜನಾದ್ರಿ ಕಾಮಗಾರಿಗಳಿಗೆ ಪ್ರಸ್ತಾವನೆ
    ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರ ಘೋಷಿಸಿದ್ದ 20 ಕೋಟಿ ರೂ.ಗೆ ವಿವಿಧ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ಮಾಡಲಾಗುವುದು. ಉಳಿದಂತೆ ವಸತಿ, ಶೌಚ, ಸ್ನಾನ ಗೃಹಗಳು, ಪಾರ್ಕಿಂಗ್, ಕುಡಿವ ನೀರು, ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಎಲ್‌ಸಿಡಿ ಪರದೆಗಳ ಮೂಲಕ ಹನುಮನ ಜೀವನ ಚರಿತ್ರೆ ಪರಿಚಯಿಸುವ ಹಾಗೂ ಧಾರ್ಮಿಕ ವಿಡಿಯೋ ಪ್ರಸಾರ, ಭಕ್ತರು ಹೋಗಿ ಬರಲು ಸರಳ ಮಾರ್ಗ, 500ಕ್ಕೂ ಹೆಚ್ಚು ಮೆಟ್ಟಿಲುಗಳಿದ್ದು, ಅಲ್ಲಲ್ಲಿ ವಿಶ್ರಮಿಸಲು ಸ್ಥಳವಾಕಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ ಭೂ ಸ್ವಾಧೀನಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕ್ಷೇತ್ರ ಅಭಿವೃದ್ಧಿಪಡಿಸಲಿವೆ. ಬಜೆಟ್ ಅಧಿವೇಶನ ಬಳಿಕ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ನೂರು ಕೋಟಿ ರೂ.ನಲ್ಲಿ ಏನೇನು ಯೋಜನೆ ರೂಪಿಸಬೇಕೆಂಬ ಚರ್ಚೆ ನಡೆಯಲಿದೆ ಎಂದು ಡಿಸಿ ವಿಕಾಸ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts