More

    ಸಿಎಎ ವಿರುದ್ಧ ಚೆನ್ನೈನಲ್ಲಿ ಪ್ರತಿಭಟನೆ: ರಾಜ್ಯ ಸಚಿವಾಲಯದತ್ತ ಹೊರಟ ಪ್ರತಿಭಟನಾ ಮೆರವಣಿಗೆ

    ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿಸಿ ದೇಶದ ಹಲವೆಡೆ ತಿಂಗಳುಗಳಿಂದ ಹೋರಾಟ ನಡೆಯುತ್ತಿದೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಹೋರಾಟದ ಕಿಚ್ಚು ಹತ್ತಿದ್ದು ಬೃಹತ್​ ಮೆರವಣಿಗೆಯ ಮೂಲಕ ಹೋರಾಟಗಾರರು ರಾಜ್ಯ ಸಚಿವಾಲಯದತ್ತ ಹೊರಟಿದ್ದಾರೆ.

    ಸಿಎಎ ವಿರುದ್ಧ ಪ್ರತಿಭಟನೆ ನಡೆಸದಂತೆ ತಡೆಗಟ್ಟಲು ಮದ್ರಾಸ್​ ಹೈ ಕೋರ್ಟ್​ ಮಂಗಳವಾರದಂದು ಆದೇಶ ಹೊರಡಿಸಿತ್ತು. ನ್ಯಾಯಮೂರ್ತಿಗಳಾದ ಎಂ​. ಸತ್ಯನಾರಾಯಣ್​ ಮತ್ತು ಆರ್​.ಹೇಮಲತಾ ಇದ್ದ ನ್ಯಾಯಪೀಠವು ಹೋರಾಟಗಾರರು ಮೆರವಣಿಗೆ ನಡೆಸುವುದನ್ನು ತಡೆಗಟ್ಟಲು ಕೋರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಬಂದಿದ್ದ ಪಿಐಎಲ್​ನ ಆದೇಶವನ್ನು ಅಂಗೀಕರಿಸಿದ್ದರು.

    ಇಂದು ನಗರದಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದು, ಯಾವುದೇ ಹಿಂಸಾತ್ಮಕ ಚಟುವಟಿಕೆ ನಡೆಯದಿರುವಂತೆ ನೋಡಿಕೊಳ್ಳುವ ಸಲುವಾಗಿ ಸಾವಿರಾರು ಪೊಲೀಸರನ್ನು ನೇಮಿಸಿರುವುದಾಗಿ ನಗರ ಪೊಲೀಸ್​ ಆಯುಕ್ತ ಎ.ಕೆ.ವಿಶ್ವನಾಥ್​ ತಿಳಿಸಿದ್ದಾರೆ. ನ್ಯಾಯಾಲಯದಿಂದ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts