More

    ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

    ರಾಂಚಿ: ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಆದರೆ ಇಲ್ಲೊಬ್ಬರು ಜನರು ವೈದ್ಯರಾಗುವುದೇ ಕೈತುಂಬಾ ವರದಕ್ಷಿಣೆ ಪಡೆಯಲಿಕ್ಕೆ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ವೈದ್ಯರ ಬಗ್ಗೆ ಹೀಗೆ ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಖ್ಯಮಂತ್ರಿಯವರಿಗೆ ದೂರು ನೀಡಿದೆ.

    ಅಷ್ಟಕ್ಕೂ ವೈದ್ಯರ ವಿರುದ್ಧ ಇಂಥದ್ದೊಂದು ಅವಹೇಳನಕಾರಿ ಹೇಳಿಕೆ ನೀಡಿರುವುದು ಬೇರೆ ಯಾರೂ ಅಲ್ಲ, ಅವರೂ ವೈದ್ಯರೇ. ಮಾತ್ರವಲ್ಲ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೂಡ. ಇವರು ಹೀಗೊಂದು ಹೇಳಿಕೆ ನೀಡುತ್ತಿದ್ದಂತೆ ಅದು ವೈರಲ್​ ಆಗಿದ್ದು, ಅದರ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿಯವರೆಗೂ ದೂರು ತಲುಪಿದೆ. ಈ ಹೇಳಿಕೆ ವಿರುದ್ಧ ಸಿಟ್ಟಿಗೆದ್ದಿರುವ ಐಎಂಎ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಜಾರ್ಖಂಡ್​ನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಿತಿನ್ ಕುಲಕರ್ಣಿ, ಡಿ. 30ರಂದು ಈ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಜಾರ್ಖಂಡ್​ನಲ್ಲಿ ಹೊಸದಾಗಿ ಆಯ್ಕೆಯಾದ ವೈದ್ಯರ ನೇಮಕ ವೇಳೆ ಮಾತನಾಡಿದ್ದ ಡಾ.ನಿತಿನ್​, ‘ಜನರು ವೈದ್ಯರಾದರೆ ಕೆಲಸ ಮಾಡಲಿಕ್ಕೆ ಇರುವುದಿಲ್ಲ ಎಂದುಕೊಂಡು ವೈದ್ಯರಾಗುತ್ತಿದ್ದಾರೆ. ಇನ್ನು ಕೆಲವು ಕೈತುಂಬಾ ವರದಕ್ಷಿಣೆ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ವೈದ್ಯರಾಗುತ್ತಿದ್ದಾರೆ’ ಎಂದು ಹೇಳಿದ್ದರು.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಡಾ. ನಿತಿನ್ ಹೇಳಿಕೆ ವೈರಲ್​ ಆಗಿದ್ದು, ಆ ಬಗ್ಗೆ ಹಲವಾರು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಭಾರತೀಯ ವೈದ್ಯಕೀಯ ಸಂಘವು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮನವಿ ಸಲ್ಲಿಸಿ, ಡಾ.ನಿತಿನ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ. ಕೋವಿಡ್​-19 ಪಿಡುಗಿನ ಸಂದರ್ಭದಲ್ಲಿ ವೈದ್ಯವೃಂದ ಮುಂಚೂಣಿಯಲ್ಲಿ ನಿಂತು ಕರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಿಸಿದೆ. ಹೀಗೆ ಸೇವೆ ಸಲ್ಲಿಸುತ್ತಿರುವಾಗ ಸೋಂಕಿಗೆ ಒಳಗಾದ 734 ವೈದ್ಯರು ಮೃತಪಟ್ಟಿದ್ದಾರೆ. ಅದಾಗ್ಯೂ ವೈದ್ಯವೃಂದ ಕರೊನಾ ವಿರುದ್ಧ ಸೆಟೆದೆದ್ದು ಹೋರಾಡುತ್ತಿದೆ. ಹೀಗಿರುವಾಗ ವೈದ್ಯರ ವಿರುದ್ಧ ಈ ರೀತಿ ಹೇಳಿಕೆ ನೀಡಿದ್ದು ನೋವುಂಟು ಮಾಡಿದೆ. ಅಂಥ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಐಎಂಎ ಆಗ್ರಹಿಸಿದೆ. (ಏಜೆನ್ಸೀಸ್)

    ಈ ಊರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನೇ ಕಿಡ್ನ್ಯಾಪ್​!; ಮತ್ತೊಬ್ಬ ಸದಸ್ಯನ ವಿರುದ್ಧವೇ ಅಪಹರಣ ಆರೋಪ…

    ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts