More

    ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ವ್ಯವಸ್ಥೆ

    ಹುಬ್ಬಳ್ಳಿ: ವಿವಿಧ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಿಂದ ಪಿಂಚಣಿದಾರರಿಗೆ ತ್ವರಿತವಾಗಿ ಪಿಂಚಣಿ ಲಭಿಸುತ್ತಿದೆ. ಪಿಂಚಣಿದಾರರು ಬಯಸಿದರೆ ಮೊಬೈಲ್ ಆಪ್ ಅಥವಾ ಚೆಕ್ ಮೂಲಕ ಪಿಂಚಣಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಪರ ಜಿಲ್ಲಾ ಖಜಾನಾಧಿಕಾರಿ ಉಲ್ಲಾಸ ನಿಂಗರೆಡ್ಡಿಯವರ್ ತಿಳಿಸಿದರು.

    ನಗರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್​ನಲ್ಲಿ ಅವರು ಮಾತನಾಡಿದರು.

    ಖಜಾನೆಯಿಂದ ಪಿಂಚಣಿ ಪಾವತಿ ವಿಳಂಬವಾಗುವ ಸಾಧ್ಯತೆ ಕಡಿಮೆ. ಸಕಾಲದಲ್ಲಿ ಪಿಂಚಣಿ ಪಾವತಿಸಲು ವ್ಯವಸ್ಥೆ ರೂಪಿಸಲಾಗಿದೆ. ಸೂಕ್ತ ದಾಖಲೆಗಳನ್ನು ಖಜಾನೆ ಕಚೇರಿಗೆ ನೀಡಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

    ಎಸ್​ಬಿಐ ಮುಖ್ಯ ವ್ಯವಸ್ಥಾಪಕ ಗಜಾನನ ಚಲವಾದಿ, ಬ್ಯಾಂಕ್ ಆಫ್ ಬರೋಡ ಸಹಾಯಕ ವ್ಯವಸ್ಥಾಪಕ ಮಹಾಂತೇಶ ತಳವಾರ, ಸಿಂಡಿಕೇಟ್ ಬ್ಯಾಂಕ್ ಸಹಾಯಕ ವ್ಯಸ್ಥಾಪಕ ರವಿಕಿರಣ ರೆಡ್ಡಿ, ಖಜಾನೆ ಮುಖ್ಯ ಲೆಕ್ಕಿಗ ಆರ್.ಎಸ್. ಸುಬ್ಬಾಪುರಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts