More

    ಧೋನಿ ವಿದಾಯದ ಬೆನ್ನಲ್ಲೇ ಯುವರಾಜ್​ ನಿವೃತ್ತಿಯಿಂದ ವಾಪಸ್​ ಆಗ್ತಾರಾ?

    ಮೊಹಾಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ವಿದಾಯ ಪ್ರಕಟಿಸಿರುವ ಬೆನ್ನಲ್ಲೇ ಮತ್ತೋರ್ವ ಸ್ಟಾರ್​ ಆಟಗಾರ ಯುವರಾಜ್​ ಸಿಂಗ್​ ನಿವೃತ್ತಿಯಿಂದ ವಾಪಸಾಗಿ ಮತ್ತೆ ಕ್ರಿಕೆಟ್​ ಮೈದಾನಕ್ಕಿಳಿಯುವ ಸಾಧ್ಯತೆ ಕಾಣಿಸಿದೆ. ನಿವೃತ್ತಿ ಹಿಂಪಡೆದು ಮುಂಬರುವ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ರಾಜ್ಯ ತಂಡದ ಪರ ಆಡುವಂತೆ ಪಂಜಾಬ್​ ಕ್ರಿಕೆಟ್​ ಸಂಸ್ಥೆ (ಪಿಸಿಎ)38 ವರ್ಷದ ಯುವರಾಜ್​ ಸಿಂಗ್​ಗೆ ಮನವಿ ಸಲ್ಲಿಸಿರುವುದು ಇದಕ್ಕೆ ಕಾರಣವಾಗಿದೆ. ಆಟಗಾರ ಮತ್ತು ಮೆಂಟರ್​ ಆಗಿ ಪಂಜಾಬ್​ ತಂಡಕ್ಕೆ ದೇಶೀಯ ಕ್ರಿಕೆಟ್​ನಲ್ಲಿ ನೆರವಾಗುವಂತೆ ಕೇಳಿಕೊಳ್ಳಲಾಗಿದೆ.

    ಚಂಡೀಗಢ ತಂಡವೂ ರಚನೆಯಾದ ಬಳಿಕ ಪಂಜಾಬ್​ ಇತ್ತೀಚೆಗೆ ಕೆಲ ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಮನನ್​ ವೊಹ್ರಾ ಮತ್ತು ಬರಿಂದರ್​ ಸ್ರಾನ್​ ಇವರಲ್ಲಿ ಪ್ರಮುಖವಾದವರು. ಯುವ ಬ್ಯಾಟ್ಸ್​ಮನ್​ಗಳಾದ ಜೀವನ್​ಜೋತ್​ ಸಿಂಗ್​ ಮತ್ತು ತರುವರ್​ ಕೊಹ್ಲಿ ಕೂಡ ಕ್ರಮವಾಗಿ ಛತ್ತೀಸ್​ಗಢ ಮತ್ತು ಮೇಘಾಲಯಕ್ಕೆ ವಲಸೆ ಹೋಗಿದ್ದಾರೆ. ಹೀಗಾಗಿ ಪಂಜಾಬ್​ನ ಯುವ ತಂಡಕ್ಕೆ ಯುವರಾಜ್​ ಸಿಂಗ್​ ಅವರಂಥ ಅನುಭವಿ ಆಟಗಾರರ ಮಾರ್ಗದರ್ಶನ ಅಗತ್ಯವಿದೆ ಎಂದು ಪಿಸಿಎ ಕಾರ್ಯದರ್ಶಿ ಪುನೀತ್​ ಬಾಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಿವೃತ್ತಿಯಿಂದ ವಾಪಸಾಗುವ ಬಗ್ಗೆ ಯುವರಾಜ್​ ಸಿಂಗ್​ ಇನ್ನೂ ಪಿಸಿಎಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಕರೊನಾ ಹಾವಳಿಯ ನಡುವೆಯೂ ಯುವರಾಜ್​ ಸಿಂಗ್​ ಕಳೆದ ತಿಂಗಳು ಚಂಡೀಗಢದಲ್ಲಿ ಯುವ ಆಟಗಾರರಾದ ಶುಭಮಾನ್​ ಗಿಲ್​, ಪ್ರಭಸಿಮ್ರನ್​ ಸಿಂಗ್​, ಅನ್ಮೋಲ್​ಪ್ರೀತ್​ ಸಿಂಗ್​, ಅಭಿಷೇಕ್​ ಶರ್ಮ ಮತ್ತು ಹರ್​ಪ್ರೀತ್​ ಬ್ರಾರ್​ ಜತೆ ಅಭ್ಯಾಸ ನಡೆಸಿದ್ದರು. ಈ ಆಟಗಾರರು ಐಪಿಎಲ್​ಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಯುವರಾಜ್​ ಸಿಂಗ್​ ಕೂಡ ಸಾಥ್​ ನೀಡಿದ್ದರು.

    ಇದನ್ನೂ ಓದಿ: ಐಪಿಎಲ್ ಶೀರ್ಷಿಕೆ​ ಪ್ರಾಯೋಜಕತ್ವ ಒಲಿಸಿಕೊಂಡ ಡ್ರೀಮ್​11, ಒಪ್ಪಂದದ ಮೊತ್ತವೆಷ್ಟು ಗೊತ್ತೇ?

    ಆದರೆ ಯುವರಾಜ್​ ಸಿಂಗ್​ ಮರಳಿ ಕಣಕ್ಕಿಳಿಯಲು ಒಂದು ಸಣ್ಣ ಅಡ್ಡಿಯೂ ಇದೆ. ಯುವಿ ಕಳೆದ ವರ್ಷ ನಿವೃತ್ತಿ ಪ್ರಕಟಿಸಿದ ಬಳಿಕ ಕೆನಡದ ಟಿ20 ಲೀಗ್​ನಲ್ಲಿ ಆಡಿದ್ದರು. ಯುವಿ ನಿವೃತ್ತಿ ಪ್ರಕಟಿಸಿದ್ದ ಕಾರಣದಿಂದಾಗಿ ಬಿಸಿಸಿಐ, ವಿದೇಶಿ ಟಿ20 ಲೀಗ್​ನಲ್ಲಿ ಆಡಲು ಎನ್​ಒಸಿ ನೀಡಿತ್ತು. ಹೀಗಾಗಿ ಈಗ ಅವರು ಮರಳಿ ಕಣಕ್ಕಿಳಿಯಲು ಬಿಸಿಸಿಐ ಅವಕಾಶ ನೀಡುವುದೇ ಎಂಬ ಪ್ರಶ್ನೆ ಎದುರಾಗಿದೆ. ಆದರೆ ಯುವಿ ಆಪ್ತ ಸೌರವ್​ ಗಂಗೂಲಿ ಅವರೇ ಬಿಸಿಸಿಐ ಅಧ್ಯಕ್ಷರಾಗಿ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇಡಬಹುದಾಗಿದೆ. 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲುವಿನ ಹೀರೋ ಯುವರಾಜ್​ ಸಿಂಗ್​ ಭಾರತ ಪರ 40 ಟೆಸ್ಟ್​, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷ ಪೂರೈಸಿದ ವಿರಾಟ್​ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts