ಒಂದು ಕಡೆ ಕಂಗನಾ ರಣಾವತ್ ತಮ್ಮ ಮಾತುಗಳಿಂದ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಂದು ಕಡೆ ಅವರು ಚಿತ್ರರಂಗದಲ್ಲಿ ದೊಡ್ಡದಾಗಿ ಬೆಳೆಯುತ್ತಿದ್ದಂತೆಯೇ, ಇನ್ನೊಂದು ಕಡೆ ಅವರ ಜತೆಗೆ ಕೆಲಸ ಮಾಡುವುದಕ್ಕೆ ಜನ ಹೆದರುತ್ತಿದ್ದಾರೆ.
ಇದನ್ನೂ ಓದಿ: VIDEO: ಸುಶಾಂತ್ ಸಿಂಗ್ರ ಅನ್ಸೀನ್ ವಿಡಿಯೋಗಳು ವೈರಲ್; ನೋಡಿದರೆ ಶಾಕ್ ಆಗದೆ ಇರದು !
ಹೌದು, ಕಂಗನಾ ರಣಾವತ್ ಅವರ ಮಾತು, ನಿಷ್ಠುರತೆ ಮತ್ತು ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವ ಸ್ವಭಾವದಿಂದ ಚಿತ್ರರಂಗದವರು ಬೇಸತ್ತಿದ್ದಾರೆ. ಅವರ ಸಹವಾಸವೇ ಬೇಡ ಎಂದು ದೂರವಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಹಿರಿಯ ಛಾಯಾಗ್ರಾಹಕ ಪಿ.ಸಿ. ಶ್ರೀರಾಮ್.
ದಕ್ಷಿಣ ಭಾರತದಲ್ಲಿ ತಮ್ಮ ಛಾಯಾಗ್ರಹಣದಿಂದ ದೊಡ್ಡ ಹೆಸರು ಮಾಡಿರುವ ಮತ್ತು ‘ನಾಯಗನ್’, ‘ಅಂಜಲಿ’, ‘ತಿರುಡಾ ತಿರುಡಾ’ ಸೇರಿದಂತೆ ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪಿ.ಸಿ. ಶ್ರೀರಾಮ್ ಅವರಿಗೆ ಕಂಗನಾ ಅಭಿನಯದ ಚಿತ್ರವೊಂದರ ಛಾಯಾಗ್ರಹಣ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತಂತೆ. ಆದರೆ, ಕಂಗನಾ ಅವರ ಇತ್ತೀಚಿನ ವರ್ತನೆ ನೋಡಿ ಬೇಸತ್ತಿರುವ ಶ್ರೀರಾಮ್ ಅವರ ಜತೆಗೆ ಕೆಲಸ ಮಾಡಬಾರದೆಂದು ನಿರ್ಧರಿಸಿ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕಂಗನಾ ಅಭಿನಯದ ಚಿತ್ರವೊಂದರ ಛಾಯಾಗ್ರಹಣ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ಕಂಗನಾ ಇರುವುದರಿಂದ ಯಾಕೋ ಕೆಲಸ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹಾಗಾಗಿ ಚಿತ್ರ ಒಪ್ಪಲಿಲ್ಲ’ ಎಂದು ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸೆ.15ಕ್ಕೆ ಆನ್ಲೈನ್ ಮೂಲಕ ಡಾ. ವಿಷ್ಣುವರ್ಧನ್ ಸ್ಮಾರಕದ ಭೂಮಿಪೂಜೆ
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ‘ನಿಮ್ಮಂತಹ ಲೆಜೆಂಡ್ಗಳ ಜತೆಗೆ ಕೆಲಸ ಮಾಡುವ ಅವಕಾಶ ಕಳೆದುಕೊಂಡಿದ್ದೇನೆ. ಇದು ಸಂಪೂರ್ಣವಾಗಿ ನನ್ನ ನಷ್ಟ. ನನ್ನ ಜತೆಗೆ ಕೆಲಸ ಮಾಡುವುದಕ್ಕೆ ನಿಮ್ಮ ಮನಸ್ಸು ಯಾಕೆ ಒಪ್ಪಲಿಲ್ಲವೋ ಗೊತ್ತಿಲ್ಲ. ಆದರೆ, ನೀವು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀರಾ ಎಂಬ ನಂಬಿಕೆ ನನಗಿದೆ. ಆಲ್ ದಿ ಬೆಸ್ಟ್’ ಎಂದು ಹಾರೈಸಿದ್ದಾರೆ.
https://twitter.com/KanganaTeam/status/1303334206878003200