ನಟಿ ಮೀರಾ ಚೋಪ್ರಾ ವಿರುದ್ಧ ಜ್ಯೂನಿಯರ್ ಎನ್.ಟಿ.ಆರ್ (ತಾರಕ್) ಅವರ ಅಭಿಮಾನಿಗಳು ರೊಚ್ಚಿಗೆದ್ದಿರುವುದು ಕಳೆದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಮೀರಾ ಚೋಪ್ರಾ ಅವರಿಗೆ ತಾರಕ್ ಅಭಿಮಾನಿಗಳು ಕೊಲೆ ಮತ್ತು ಮಾನಭಂಗದ ಬೆದರಿಕೆಯಾಗಿದ್ದು, ಇದರಿಂದ ತಾರಕ್‌ಗೆ ಸಾಕಷ್ಟು ಮುಜುಗರವಾಗಿದೆ.
ಇದೀಗ ತಾರಕ್ ನೆರವಿಗೆ ಅವರ ಹಳೆಯ ಹೀರೋಯಿನ್ ಒಬ್ಬರು ಬಂದಿದ್ದಾರೆ. ‘ಊಸರವಳ್ಳಿ’ ಚಿತ್ರದಲ್ಲಿ ತಾರಕ್‌ಗೆ ನಾಯಕಿಯಾಗಿದ್ದ ಪಾಯಲ್ ಘೋಶ್, ಸೋಷಿಯಲ್ ಮೀಡಿಯಾ ಮೂಲಕ ಆತ ಎಂಥಾ ಒಳ್ಳೆಯ ಮನುಷ್ಯ ಎಂದು ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಗೌರವ ಕೊಡುವುದನ್ನು ಅವರಿಂದ ನೋಡಿ ಕಲಿಯಬೇಕು ಎಂದಿದ್ದಾರೆ.
ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ … ಕಳೆದ ವರ್ಷದ ಸಂಪಾದನೆ ಎಷ್ಟು?
ಈ ಕುರಿತು ಉದಾಹರಣೆಯೊಂದನ್ನು ನೀಡಿರುವ ಅವರು, ‘ಕೆಲವು ವರ್ಷಗಳ ಹಿಂದೆ ಬ್ಯಾಂಕಾಕ್‌ನಲ್ಲಿ ‘ಊಸರವಳ್ಳಿ’ ಚಿತ್ರದ ಚಿತ್ರೀಕರಣ ಮಾಡುತ್ತಿದ್ದೆವು. ಔಟ್‌ಡೋರ್ ಶೂಟಿಂಗ್ ಆಗಿದ್ದರಿಂದ, ನನಗೆ ಬಟ್ಟೆ ಬದಲಾಯಿಸುವುದು ಕಷ್ಟವಾಗುತಿತ್ತು. ಆಗ ಚಿತ್ರತಂಡದವರು ನನಗೆ ಬಟ್ಟೆ ಬದಲಾಯಿಸುವುದಕ್ಕೆ ಒಂದು ಸಣ್ಣ ಟೆಂಟ್ ಮಾಡಿಕೊಟ್ಟರು. ಇದರಿಂದ ತಾರಕ್‌ಗೆ ಬಹಳ ಬೇಸರವಾಯ್ತು. ರೋಡ್‌ನಲ್ಲಿ ಹೆಣ್ಮಕ್ಕಳು ಹೀಗೆ ಕಷ್ಟಪಡಬೇಕಾಯಿತು ಎಂದು ಅವರು ಬೇಸರಿಸಿಕೊಂಡಿದ್ದರು. ಹೆಣ್ಮಕ್ಕಳಿಗೆ ಹೇಗೆ ಗೌರವ ಕೊಡಬೇಕು ಎನ್ನುವುದು ಅವರಿಗೆ ಗೊತ್ತು’ ಎಂದು ಪಾಯಲ್, ತಾರಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದಕ್ಕೂ ಮುನ್ನ ನಟಿ ಮೀರಾ ಚೋಪ್ರಾ ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಸಂವಾದ ನಡೆಸಿದ್ದರು. ಈ ವೇಳೆ, ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಬಗ್ಗೆ ಏನಾದರೂ ಹೇಳಿ ಎಂದರು. ಅದಕ್ಕೆ ಮೀರಾ, ಅವರ ಬಗ್ಗೆ ಏನೂ ಗೊತ್ತಿಲ್ಲ, ತಾನು ಅವರ ಅಭಿಮಾನಿಯಲ್ಲ ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ಜ್ಯೂನಿಯರ್ ಎನ್.ಟಿ.ಆರ್ ಅಭಿಮಾನಿಗಳು, ಮೀರಾ ವಿರುದ್ಧ ತಿರುಗಿಬಿದ್ದರು. ಅವರ ವಿರುದ್ಧ ಕೆಟ್ಟದಾಗಿ ಟ್ರೋಲ್ ಮಾಡಿದರು.
ಇದನ್ನೂ ಓದಿ: ನೆಟ್‌ಫ್ಲಿಕ್ಸ್, ಅಮೆಜಾನ್ ಎರಡಕ್ಕೂ ‘ತಲೈವಿ’ ಮಾರಾಟ … ಇದು ಹೇಗೆ ಸಾಧ್ಯ?
ಇದಕ್ಕೆ ಪ್ರತಿಯಾಗಿ ಮೀರಾ ಚೋಪ್ರಾ, ತಾರಕ್ ಅವರನ್ನು ಟ್ಯಾಗ್ ಮಾಡಿ ಇನ್ನೊಂದು ಟ್ವೀಟ್ ಮಾಡಿದ್ದರು. ‘ನಾನು ನಿಮ್ಮ ಅಭಿಮಾನಿಯಲ್ಲ, ನಿಮ್ಮ ಬಗ್ಗೆ ಮಾತಾಡಲಿಲ್ಲ ಎಂಬ ಕಾರಣಕ್ಕೆ ನಿಮ್ಮ ಅಭಿಮಾನಿಗಳಿಗೆ ಬಿಚ್ ಅಂತ ಅನಿಸಿಕೊಳ್ಳಬೇಕು ಎಂಬುದು ನನಗೆ ಗೊತ್ತಿರಲಿಲ್ಲ. ಇಂಥ ಅಭಿಮಾನಿಗಳಿಂದ ನಿಮಗೆ ಸಂತೋಷವಿದೆಯಾ?’ ಎಂದು ಪ್ರಶ್ನಿಸಿದ್ದರು.
ಈ ಪ್ರಕರಣದಿಂದ ಜ್ಯೂನಿಯರ್ ಎನ್.ಟಿ.ಆರ್ ದೂರವಿದ್ದರೂ, ಯಾವುದೇ ಪ್ರತಿಕ್ರಿಯೆ ಕೊಡತ್ತಿದ್ದರೂ, ಅಭಿಮಾನಿಗಳ ಹುಚ್ಚಾಟದಿಂದ ಸಾಕಷ್ಟು ಮುಜುಗರ ಅನುಭವಿಸಿದ್ದರು. ಈಗ ಪಾಯಲ್ ಅವರು ಸರ್ಟಿಫಿಕೇಟ್ ನೀಡಿರುವುದರಿಂದ, ತಾರಕ್ ಸ್ವಲ್ಪ ನಿರಾಳವಾಗಿರುವುದಷ್ಟೇ ಅಲ್ಲ, ಅವರ ಅಭಿಮಾನಿಗಳು ಸಹ ಫುಲ್ ಖುಷಿಯಾಗಿದ್ದಾರೆ.
ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು ತಮನ್ನಾ ಪ್ರತಿಭಟನೆ!; ಕಾರಣ ಏನಿರಬಹುದು?