More

    ಮಾತಿಗೆ ಬೆಲೆ ನೀಡಿ, ಇಲ್ಲ ಜಾಗ ಖಾಲಿ ಮಾಡಿ ; ಚಿಕ್ಕನಾಯಕನಹಳ್ಳಿ ಪುರಸಭೆ ಪರಿಸರ ಇಂಜಿನಿಯರ್‌ಗೆ ಸಚಿವ ಮಾಧುಸ್ವಾಮಿ ತರಾಟೆ

    ಚಿಕ್ಕನಾಯಕನಹಳ್ಳಿ : 14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳಿಗೆ ಟೆಂಡರ್ ಕರೆಯುವುದು ಹಾಗೂ ಅನುಮೋದಿಸುವುದು, ಪಂಪ್‌ಹೌಸ್ ಬಳಿಯ ಶುದ್ಧನೀರಿನ ಟಕ ನಿರ್ವಹಣೆ ಹಾಗೂ ರುದ್ರನಗುಡಿ ಬಳಿಯ ನೀರಿನ ಟಕದ ನಿರ್ವಹಣೆ ಟೆಂಡರ್ ಅನುಮೋದನೆ ನೀಡುವುದು ಸೇರಿ ಹಲವು ವಿಷಯಗಳ ಬಗ್ಗೆ ಪುರಸಭೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾವಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.

    ಪುರಸಭೆ ಸದಸ್ಯರ ಮಾತಿಗೆ ಬೆಲೆ ನೀಡದೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಂಬದ್ಧ ಕಾರಣ ನೀಡಿದರೆ ಮೊದಲು ಜಾಗ ಖಾಲಿ ಮಾಡಿ ಎಂದು ಪರಿಸರ ಇಂಜಿನಿಯರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಗುಡುಗಿದರು.

    ಕಸ ವಿಲೇವಾರಿ ಹಾಗೂ ಜೆಸಿಬಿ ಬಳಕೆಗೆ ಸಂಬಂಧಿಸಿದಂತೆ ನಮ್ಮ ಮಾತಿಗೆ ಪರಿಸರ ಇಂಜಿನಿಯರ್ ಜ್ಯೋತೀಶ್ವರಿ ಬೆಲೆ ನೀಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿ, ವಾರ್ಡ್‌ಗಳಿಗೆ ಸಂಬಂಧಪಟ್ಟಂತೆ ನಿಮ್ಮ ಮೇಲೆ ದೂರುಗಳು ಬರುತ್ತಿವೆ. ಸಮಸ್ಯೆಗಳಿಗೆ ಸ್ಪಂದಿಸದೆ ತಲೆಹರಟೆ ಪ್ರತಿಕ್ರಿಯೆ ನೀಡಿದರೆ ಕೂಡಲೇ ಜಾಗ ಖಾಲಿ ವಾಡಿ ಎಂದು ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು.

    ಜನರ ಅಲೆದಾಟ: ಪರಿಸರ ಇಂಜಿನಿಯರ್ ಸಾರ್ವಜನಿಕ ಕೆಲಸಕ್ಕೆ ಜೆಸಿಬಿ ಬಳಕೆ ವಾಡುವ ಬಗ್ಗೆ ಸದಸ್ಯರು ತಿಳಿಸಿದರೂ ಕ್ರಮಕೈಗೊಳ್ಳುವುದಿಲ್ಲ. ಕಸ ವಿಲೇವಾರಿ ಬಗ್ಗೆ ಗಮನಹರಿಸುತ್ತಿಲ್ಲ. ಪರಿಸರ ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರ ಮಧ್ಯೆ ಭಿನ್ನಾಭಿಪ್ರಾಯವಿದ್ದು ಸರಿಯಾಗಿ ಕೆಲಸ ವಾಡುತ್ತಿಲ್ಲ ಎಂದು ಲಕ್ಷ್ಮೀ ದೂರಿದರು. ಇದಕ್ಕೆ ಧ್ವನಿಗೂಡಿಸಿದ ರಾಜಶೇಖರ್, ಹಲವಾರು ತಿಂಗಳು ಕಳೆದರೂ ವಾರಸುದಾರರಿಗೆ ಮರಣ ದೃಢೀಕರಣ ಪತ್ರ ನೀಡಲು ಅಧಿಕಾರಿಗಳು ಅಲೆದಾಡಿಸುತ್ತಾರೆ ಎಂದು ಕಿಡಿಕಾರಿದರು.

    ಇದಕ್ಕೆ ಸ್ಪಂದಿಸಿದ ಸಚಿವರು, ಅಧಿಕಾರಿಗಳು ಭಿನ್ನಾಭಿಪ್ರಾಯಗಳನ್ನು ಕಚೇರಿಯಿಂದ ಹೊರಗಡೆ ಇಟ್ಟುಕೊಳ್ಳಿ, ಇಲ್ಲಿ ಸಾರ್ವಜನಿಕರ ಕೆಲಸಗಳನ್ನು ವಾಡಬೇಕು ಎಂದು ಸೂಚಿಸಿದರು. ಸದಸ್ಯರ ವಾತಿಗೆ ಅಧಿಕಾರಿಗಳು ಬೆಲೆ ಕೊಟ್ಟು ಸಭೆಗೆ ಹಾಜರಾಗುವ ಮುನ್ನ ಚರ್ಚಿಸುವ ವಿಷಯಗಳ ಮಾಹಿತಿಯನ್ನು ಎಲ್ಲ ಸದಸ್ಯರಿಗೆ ನೀಡಬೇಕು. ಇದರಿಂದ ಅವರು ಹಿಂದಿನ ಅವಧಿಯಲ್ಲಿನ ಖರ್ಚು ವೆಚ್ಚಗಳ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಹೊಸ ಯೋಜನೆಗಳ ಚರ್ಚಿಸಲು ಸಾಧ್ಯವಾಗುತ್ತದೆ ಎಂದರು.

    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ 2 ತಿಂಗಳು ಕಳೆದರೂ ಮುಖ್ಯಾಧಿಕಾರಿ ಸಭೆ ಕರೆಯುವಲ್ಲಿ ತಾತ್ಸಾರ ವಾಡುತ್ತಿದ್ದಾರೆ. ಇನ್ನು ಕೆಳ ಹಂತದ ನೌಕರರ ಹತ್ತಿರ ಸರಿಯಾಗಿ ಕೆಲಸ ವಾಡಿಸುತ್ತಿಲ್ಲ ಎಂದು ಉಪಾಧ್ಯಕ್ಷೆ ರೇಣುಕಮ್ಮ ಟೀಕಿಸಿದರು. ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ರಿಂಗ್ ರೋಡ್ ಕೈಬಿಟ್ಟು ಕುರುಬರಹಳ್ಳಿ ಮತ್ತು ಮೇಲನಹಳ್ಳಿ ವ್ಯಾಪ್ತಿಯಲ್ಲಿ ಕಾಯ್ದಿರಿಸಿರುವ ವ್ಯವಸಾಯ ವಲಯವನ್ನು ತೆಗೆದು ನಗರೀಕರಣ ಎಲ್ಲೆಯನ್ನು ವಿಸ್ತರಿಸಿ ಅಂತಿಮ ಮಹಾಯೋಜನೆಯಲ್ಲಿ ಅಳವಡಿಸಿಕೊಳ್ಳಲು ಸದಸ್ಯರು ಸೂಚಿಸಿದರು. ಸದಸ್ಯರಾದ ರೇಣುಕಪ್ರಸಾದ್(ಶ್ಯಾಮ್), ಮಲ್ಲೇಶಯ್ಯ, ಸಿ.ಬಸವರಾಜು, ಮಲ್ಲಿಕಾರ್ಜುನ್, ಮಂಜುನಾಥ್, ಬಾಬು, ಸಿ.ಡಿ.ಸುರೇಶ್, ರತ್ನಮ್ಮ, ಸಿ.ಬಿ.ತಿಪ್ಪೇಸ್ವಾಮಿ, ಸುಧಾ, ದಯಾನಂದ್, ರಾಜೇಶ್ವರಿ, ಉವಾ, ಜಯಮ್ಮ ಮತ್ತಿತರರು ಇದ್ದರು.

    ಮುಖ್ಯಾಧಿಕಾರಿಗೆ ಕಾರು ಬೇಡ : ಪುರಸಭೆ ಮುಖ್ಯಾಧಿಕಾರಿಗೆ ಕಾರು ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಧಿಕಾರಿಗೆ ಕಾರಿನ ಅವಶ್ಯಕತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಪುರಸಭೆಗೆ ಹೆಚ್ಚಿನ ಆದಾಯ ಬಂದರೆ ಕಾರನ್ನೇ ಖರೀದಿ ಮಾಡಬಹುದು. ಹಾಗಾಗಿ ಕಾರನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಬೇಡ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts