More

    ಪಾವನಾ ಮತ್ತೆ ರೌದ್ರಾವತಾರ

    ಬೆಂಗಳೂರು: ಪಾವನಾ ಗೌಡ ಅಭಿನಯದ ‘ರುದ್ರಿ’, ‘ತೂತು ಮಡಿಕೆ’, ‘ಕಲಿವೀರ’, ‘ಮೈಸೂರು ಡೈರೀಸ್’ ಮತ್ತು ‘ಮೆಹಬೂಬ’ ಎಂಬ ಐದು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕ್ಯೂನಲ್ಲಿ ನಿಂತಿವೆ. ಬಹುಶಃ ಲಾಕ್​ಡೌನ್ ಇಲ್ಲದಿದ್ದರೆ, ಐದರಲ್ಲಿ ಮೂರು ಚಿತ್ರಗಳಾದರೂ ಬಿಡುಗಡೆಯಾಗುತ್ತಿದ್ದವೇನೋ. ಆದರೆ, ಲಾಕ್​ಡೌನ್​ನಿಂದ ಐದಕ್ಕೆ ಐದೂ ಮುಂದಕ್ಕೆ ಹೋಗಿವೆ. ಈ ಪೈಕಿ ಎಷ್ಟು ಈ ವರ್ಷ ಬಿಡುಗಡೆಯಾಗುತ್ತವೋ, ಮುಂದಿನ ವರ್ಷಕ್ಕೆ ಯಾವುದೆಲ್ಲ ಹೋಗುತ್ತವೋ ಗೊತ್ತಿಲ್ಲ. ಹೀಗಿರುವಾಗಲೇ, ಪಾವನಾ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದಾರೆ.

    ‘ರುದ್ರಿ’ ಚಿತ್ರತಂಡದ ಮುಂದಿನ ಚಿತ್ರಕ್ಕೂ ಅವರು ಆಯ್ಕೆಯಾಗಿದ್ದು, ಅದು ಕೂಡ ಇನ್ನೊಂದು ಮಹಿಳಾ ಪ್ರಧಾನ ಚಿತ್ರವಾಗಲಿದೆಯಂತೆ. ಈ ಚಿತ್ರ ಯಾವುದು, ಯಾರೆಲ್ಲ ಇರುತ್ತಾರೆ ಎಂಬ ವಿಷಯ ಗಳಿಗೆಲ್ಲ ಇನ್ನೂ ಸ್ವಲ್ಪ ದಿನ ಕಾಯವೇಕು ಎನ್ನುವ ಪಾವನಾ, ಕಥೆ ಕೇಳಿ ಬೌಲ್ಡ್ ಆಗಿದ್ದಾರಂತೆ. ಇದು ಸಹ ಇನ್ನೊಂದು ‘ರುದ್ರಿ’ಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಪಾವನಾ ಇದ್ದು, ಈ ಚಿತ್ರ ಸದ್ಯದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ.

    ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್​ನಲ್ಲಿ ಹೇಳಿಕೊಂಡ ಅಮಿತಾಭ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts