More

    ಬಾಲಿವುಡ್​ ಚಿತ್ರಕ್ಕೆ ಟೈಟಲ್​ ಫಿಕ್ಸ್​ – ಕನ್ನಡಿಗ ಪವನ್​ ಒಡೆಯರ್​ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಸಿನಿಮಾ

    | ಹರ್ಷವರ್ಧನ್​ ಬ್ಯಾಡನೂರು

    ನಿರ್ದೇಶಕ ಪವನ್​ ಒಡೆಯರ್​ ಬಾಲಿವುಡ್​ಗೆ ಹಾರಿದ್ದು, ಕೆಲವು ತಿಂಗಳಿನಿಂದ ಮೊದಲ ಹಿಂದಿ ಚಿತ್ರದಲ್ಲಿ ಬಿಜಿಯಿರುವುದು ಗೊತ್ತಿತ್ತು. ಇದೀಗ ಅವರ ಚೊಚ್ಚಲ ಬಾಲಿವುಡ್​ ಸಿನಿಮಾದ ಟೈಟಲ್​ ರಿವೀಲ್​ ಆಗಿದೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಪವನ್​, “”ದಿ ನೋಟರಿ’ ಎಂದು ವರ್ಕಿಂಗ್​ ಟೈಟಲ್​ ಇಟ್ಟು ಕೆಲಸ ಮಾಡುತ್ತಿದ್ದೆವು. ಇದೀಗ ಚಿತ್ರೀಕರಣ ಪೂರ್ಣಗೊಂಡು ಅಂತಿಮ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಟೈಟಲ್​ ರಿಲೀಸ್​ ಮಾಡಿದ್ದೇವೆ. ಚಿತ್ರಕ್ಕೆ “ಆವಸ್ಥಿ ವರ್ಸಸ್​ ಆವಸ್ಥಿ’ ಎಂದು ಹೆಸರಿಟ್ಟಿದ್ದೇವೆ. ಸುಳ್ಳು ತುಂಬಿರುವ ಜಗತ್ತಿನಲ್ಲಿ ಅವನೊಬ್ಬನೇ ಸತ್ಯ ನುಡಿಯುವವನು ಎಂದು ನಂಬಿರುವ ನಾಯಕನ ಕುರಿತ ಸ್ಟೋರಿ’ ಎಂದು ಹೇಳಿಕೊಳ್ಳುತ್ತಾರೆ ಪವನ್​.

    ಬಾಲಿವುಡ್​ ಚಿತ್ರಕ್ಕೆ ಟೈಟಲ್​ ಫಿಕ್ಸ್​ - ಕನ್ನಡಿಗ ಪವನ್​ ಒಡೆಯರ್​ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಸಿನಿಮಾ

    ಇದನ್ನೂ ಓದಿ: ತೋತಾಪುರಿ-2 ನಾಯಕರ ಫಸ್ಟ್​ ಲುಕ್​ ಬಿಡುಗಡೆ

    ಮೊದಲ ಬಾಲಿವುಡ್​ ಅನುಭವ
    ಕೆಲವೇ ದಿನಗಳಲ್ಲಿ ಚಿತ್ರದ ಮೊದಲ ಪ್ರತಿ ಕೈಗೆ ಬರುವ ನಿರೀೆಯಿದೆ. ಆ ಬಳಿಕ ಪ್ರಚಾರ ಕಾರ್ಯ ಶುರು ಮಾಡುವ ಆಲೋಚನೆ ಚಿತ್ರತಂಡದ್ದು. “”ಗೋವಿಂದಾಯ ನಮ@’, “ಗೂಗ್ಲಿ’, “ಜೆಸ್ಸಿ’ ಚಿತ್ರಗಳು ಪರಭಾಷೆಗಳಲ್ಲಿ ರಿಮೇಕ್​ ಆದ ಸಮಯದಲ್ಲಿ ಆ ಭಾಷೆಗಳಲ್ಲಿ ನಿರ್ದೇಶಿಸುವ ಅವಕಾಶವಿತ್ತು. ಹೊಸ ಕಥೆಯೊಂದಿಗೆ ಸಿನಿಮಾ ಮಾಡಬೇಕು ಅಂತ ತುಂಬ ದಿನಗಳಿಂದ ನಾನೂ ಪ್ಲ್ಯಾನ್​ ಮಾಡುತ್ತಿದ್ದೆ. ಈ ಕಥೆಯನ್ನು ದೊಡ್ಡ ಮಟ್ಟದಲ್ಲಿ ಹೇಳಬಹುದು ಅಂತನ್ನಿಸಿತು. ಬಾಲಿವುಡ್​ ಸಿನಿಮಾ ಹೊಸ ಅನುಭವ ಎನ್ನಬಹುದು. ಎಲ್ಲಾ ಕಡೆ ಸಿನಿಮಾ ಮಾಡು ಪ್ರಕ್ರಿಯೆ ಒಂದೇ ರೀತಿ ಇರುತ್ತದೆ. ಆದರೆ, ಹಿಂದಿ ಚಿತ್ರರಂಗದಲ್ಲಿ ದೊಡ್ಡ ಸ್ಕೇಲ್​ನಲ್ಲಿ ಮಾಡಬಹುದು ಹಾಗೂ ಅದಕ್ಕೆ ಬೇಕಾದ ಸೌಲಭ್ಯಗಳೂ ಇಲ್ಲಿವೆ’ ಎನ್ನುತ್ತಾರೆ ಪವನ್​.

    ಬಾಲಿವುಡ್​ ಚಿತ್ರಕ್ಕೆ ಟೈಟಲ್​ ಫಿಕ್ಸ್​ - ಕನ್ನಡಿಗ ಪವನ್​ ಒಡೆಯರ್​ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಸಿನಿಮಾ

    ಇದನ್ನೂ ಓದಿ: ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ – ಕುಮಾರ್​ ಆರೋಪಕ್ಕೆ ಸುದೀಪ್​ ಪರೋಕ್ಷ ಪ್ರತಿಕ್ರಿಯೆ?

    “ಆವಸ್ಥಿ ವರ್ಸಸ್​ ಆವಸ್ಥಿ’ಯಲ್ಲಿ ಟಾನುಟಿಗಳು
    ಈ ಚಿತ್ರದಲ್ಲಿ ಬೆಂಗಾಳಿ, ಬಾಲಿವುಡ್​ ಚಿತ್ರಗಳಲ್ಲಿ ಮಿಂಚಿರುವ ಪರಂಬ್ರತಾ ಚಟರ್ಜಿ ನಾಯಕನಾಗಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಪತ್ನಿ ನಟಿ ಗೀತಾ ಬಸ್ರಾ ಅವರಿಗೆ ನಾಯಕಿಯಾಗಿದ್ದು, ಏಳು ವರ್ಷಗಳ ಬ್ರೇಕ್​ ಬಳಿಕ ಕಮ್​ಬ್ಯಾಕ್​ ಮಾಡಿದ್ದಾರೆ. ಜತೆಗೆ ಮನೋಜ್​ ಜೋಶಿ, ದಲೀಪ್​ ತಾಹಿಲ್​, ಜರೀನಾ ವಾಹಬ್​, ಸತೀಶ್​ ರಾಜೇಂದ್ರನ್​, ಸಹರ್​ ಶುಕ್ಲಾ, ಶಿವ್​ ಪಂಡಿತ್​, ಶಿಶಿರ್​ ಶರ್ಮಾ ಸೇರಿ ಟಾನುಟಿಗಳ ದಂಡೇ ಚಿತ್ರದಲ್ಲಿದೆ.

    ಬಾಲಿವುಡ್​ ಚಿತ್ರಕ್ಕೆ ಟೈಟಲ್​ ಫಿಕ್ಸ್​ - ಕನ್ನಡಿಗ ಪವನ್​ ಒಡೆಯರ್​ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಸಿನಿಮಾ

    ಬ್ರೇಕ್​ ಬಳಿಕಕ ಹೊಸ ಪವನ್​
    ಕೆಲವು ದಿನಗಳ ಹಿಂದಷ್ಟೇ ಮುದ್ದಾದ ಹೆಣ್ಣು ಮಗು ಪವನ್​ & ಅಪೇಾ ದಂಪತಿ ಮಡಿಲು ಸೇರಿದೆ. ಹೀಗಾಗಿಯೇ ಬಾಲಿವುಡ್​ ಚಿತ್ರದ ರಿಲೀಸ್​ ಬಳಿಕ, “ಮನೆಗೆ ದುರ್ಗೆ ಆಗಮನವಾಗಿದೆ. ನನ್ನ ನೆಚ್ಚಿನ ದೇವಿ ದುರ್ಗೆ. ಸದ್ಯ ್ಯಾಮಿಲಿಗೆ ಟೈಮ್​ ಕೊಡೋಣ ಅಂತ ಅಂದುಕೊಂಡಿದ್ದೇನೆ. ಕಳೆದ 11 ವರ್ಷಗಳಲ್ಲಿ 10 ಸಿನಿಮಾ ಮಾಡಿದ್ದೇನೆ. ಒಮ್ಮೆಯೂ ಬ್ರೇಕ್​ ತೆಗೆದುಕೊಂಡಿಲ್ಲ. ಬಾಲಿವುಡ್​, ತೆಲುಗಿನಲ್ಲೂ ಒಳ್ಳೊಳ್ಳೆ ಆರ್​ಗಳಿವೆ. ನಟಿಸಬೇಕು ಅಂತನೂ ಅಂದುಕೊಂಡಿದ್ದೇನೆ. ಆದರೆ, ಕೆಲ ವರ್ಷಗಳಿಂದ ಒಂದು ಹೆಜ್ಜೆ ಹಿಂದಿ ಇಟ್ಟಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಪವನ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts