More

    ಪತ್ತಿನ ಸಂಘಗಳು ರೈತರ ಸಂಜೀವಿನಿ ಇದ್ದಂತೆ

    ಚಿಕ್ಕೋಡಿ: ಸಹಕಾರಿ ಸಂಘ-ಸಂಸ್ಥೆಗಳು ರೈತರಿಗೆ ಸಂಜೀವಿನಿಯಾಗಿದ್ದು, ಪೋಷಿಸಿಕೊಂಡು ಹೋಗಬೇಕಿದೆ ಎಂದು ಕಬ್ಬೂರ ಗೌರಿಶಂಕರ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ಕರೋಶಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಕ್ಕೋಡಿಯ ಶ್ರೀ ಸಾಯಿ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಚಿಕ್ಕೋಡಿಯಲ್ಲಿ ದಿವಂಗತ ಎಂ.ಕೆ. ಕವಟಗಿಮಠ ಮುನ್ನಡೆಸಿದ್ದ ಸಹಕಾರಿ ರಂಗವನ್ನು ಇದೀಗ ಕವಟಗಿಮಠ ಸಹೋದರರು ಬೆಳೆಸುತ್ತಿರುವುದು ಸ್ತುತ್ಯರ್ಹ ಎಂದರು. ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಕರೋಶಿಯಲ್ಲಿ ಶಾಖೆ ತೆರೆಯಲು ಜನರ ಸಹಕಾರವೇ ಕಾರಣ ಎಂದರು. ತಾಲೂಕಿನ ಕೇರೂರ, ಮಾಂಜರಿ, ಭೋಜ, ಕರೋಶಿ, ನಾಗರಮುನ್ನೋಳಿ, ಕಬ್ಬೂರಿನಲ್ಲೂ ಶಾಖೆ ತೆರೆಯಲಾಯಿತು. ಕರೋಶಿ ಪಿಕೆಪಿಎಸ್ ಅಧ್ಯಕ್ಷ ಮಹೇಶ ಭಾತೆ, ಸಹಕಾರಿಯ ಉಪಾಧ್ಯಕ್ಷ ಷಡಕ್ಷರಿ ಮೂಗೇರಿ, ಸಲಹಾ ಸಮಿತಿ ಅಧ್ಯಕ್ಷ ವಿಜಯಕುಮಾರ ಕೋಠಿವಾಲೆ, ಉಪಾಧ್ಯಕ್ಷ ಕಲ್ಲಪ್ಪ ಕುರುಬರ, ಬಸವರಾಜ ಭಾತೆ, ಸಂಜಯ ಗಿಡ್ಡನವರ, ಶ್ರೀಧರ ದೀಕ್ಷಿತ, ರಮೇಶ ಕುಡತರಕರ, ರಾಜಕುಮಾರ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts