More

    ‘ಪಠಾಣ್​’ ಜಿಂದಾ ಹೈ; ಶಾರೂಖ್​ ಖಾನ್​ ಹೊಸ ಚಿತ್ರದ ಟೀಸರ್​ ಬಂತು

    ಮುಂಬೈ: ‘ಮೂರು ವರ್ಷಗಳಿಂದ ಪಠಾಣ್​ ಬಗ್ಗೆ ಯಾವುದೇ ಸುಳಿವಿಲ್ಲ. ಅವನು ಬದುಕಿದ್ದಾನೋ, ಇಲ್ಲವೋ ಗೊತ್ತಿಲ್ಲ …’ ಎಂಬ ಮಾತು ಕೇಳಿಬರುತ್ತಿದ್ದಂತೆಯೇ, ಪಠಾಣ್​ ಧ್ವನಿ ಕೇಳುತ್ತದೆ. ‘ಪಠಾಣ್​ ಜಿಂದಾ ಹೈ …’ ಎಂಬ ಮುಗಿಯುತ್ತಿದ್ದಂತೆಯೇ ಶಾರೂಖ್​ ಖಾನ್​ ಸಖತ್​ ಫೂಟ್​ ಮಾಡುತ್ತಾರೆ. ಮೇಲಿನಿಂದ ಹಾರಿ ಬಂದ ಗನ್​ ಹಿಡಿದು, ಎದುರಿಗಿರುವವರನ್ನು ಶೂಟ್​ ಮಾಡುತ್ತಾರೆ.

    ಇದನ್ನೂ ಓದಿ: ನವೆಂಬರ್​ನಲ್ಲಿ ಸಿನಿಮಾ ಹಬ್ಬ; 20ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ!

    ಹೀಗೆ ಪ್ರಾರಂಭವಾಗುತ್ತದೆ ಶಾರೂಖ್​ ಖಾನ್​ ಅಭಿನಯದ ‘ಪಠಾಣ್’ ಚಿತ್ರದ ಟೀಸರ್​. ‘ಪಠಾಣ್​’ ಚಿತ್ರದ ಬಗ್ಗೆ ಕೆಲವು ವರ್ಷಗಳಿಂದ ಸುದ್ದಿಗಳು ಬರುತ್ತಲೇ ಇದ್ದವು. ಆದರೆ, ಚಿತ್ರ ಹೇಗಿರುತ್ತದೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಚಿತ್ರದ ದೃಶ್ಯಗಳನ್ನು ಯಾರೂ ನೋಡಿರಲಿಲ್ಲ. ಇದೀಗ ಯಶ್​ರಾಜ್​ ಫಿಲಂಸ್​ನವರು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಚಿತ್ರದ ಮೊದಲ ಟೀಸರ್​ ಬಿಡುಗಡೆ ಮಾಡಿದ್ದಾರೆ. ಇಂದು ಶಾರೂಖ್​ ಖಾನ್​ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಹುಟ್ಟುಹಬ್ಬದ ಉಡುಗೊರೆಯಾಗಿ ಈ ಟೀಸರ್​ ಬಿಡುಗಡೆ ಮಾಡಲಾಗಿದೆ.

    ‘ಪಠಾಣ್​’ ಟೀಸರ್​ನಲ್ಲಿ ಬರೀ ಶಾರೂಖ್​ ಖಾನ್​ ಅಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಮತ್ತು ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್​ ಅಬ್ರಹಾಂ ಅವರನ್ನು ಸಹ ನೋಡಬಹುದು. ಇದೊಂದು ಆಕ್ಷನ್​ ಚಿತ್ರವಾಗಿದ್ದು, ಟೀಸರ್​ನಲ್ಲಿ ಸಾಕಷ್ಟು ರೋಮಂಚನಕಾರಿ ಆಕ್ಷನ್​ ದೃಶ್ಯಗಳಿವೆ. ದೀಪಕಿ ಇಲ್ಲಿ ಖಳರ ಜತೆಗೆ ಹೊಡೆದಾಡುವುದಷ್ಟೇ ಅಲ್ಲ, ತಮ್ಮ ಗ್ಲಾಮರ್​ನಿಂದಲೂ ಗಮನ ಸೆಳೆಯುತ್ತಾರೆ. ಇನ್ನು, ಸಾಕಷ್ಟು ಚೇಸಿಂಗ್​, ಫೈಟಿಂಗ್​, ಬ್ಲಾಸ್ಟ್​​ ದೃಶ್ಯಗಳು ಈ ಟೀಸರ್​ನಲ್ಲಿದ್ದು, ಆಕ್ಷನ್​ ಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

    ಇದನ್ನೂ ಓದಿ: ಮಲಯಾಳಂಗೆ ರಾಜ್​ ಬಿ ಶೆಟ್ಟಿ; ‘ರುಧಿರಂ’ ಚಿತ್ರದಲ್ಲಿ ನಟನೆ

    ಅಂದಹಾಗೆ, ‘ಪಠಾಣ್​’ ಚಿತ್ರವು 2023ರ ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಯಶ್​ ಚೋಪ್ರಾ ನಿರ್ಮಿಸಿರುವ ಈ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಈ ಚಿತ್ರ ಮೂಡಿಬರಲಿದೆ.

    ಬಾಲಿವುಡ್​ಗೆ ಅಮಲಾ ಪೌಲ್​; ‘ಭೋಲಾ’ ಚಿತ್ರದಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts