More

    ಅಯೋಧ್ಯೆಯಲ್ಲಿ ಪತಂಜಲಿ ಯೋಗಪೀಠದ ಬೃಹತ್ ಗುರುಕುಲ: ಯೋಜನೆ ಘೋಷಿಸಿದ ಬಾಬಾ ರಾಮದೇವ್

    ಅಯೋಧ್ಯೆ: ಶ್ರೀರಾಮ ಮಂದಿರದ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪತಂಜಲಿ ಯೋಗಪೀಠದ ಸಂಸ್ಥಾಪಕ ಬಾಬಾ ರಾಮದೇವ್ ಅವರು ಇಂದು ದೊಡ್ಡ ಗುರುಕುಲದ ಯೋಜನೆಯನ್ನು ಘೋಷಿಸಿದ್ದಾರೆ.

    ರಾಮಮಂದಿರ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸುವ ಮೂಲಕ ಅದರ ಸಾಕ್ಷಿಗಳಾಗುತ್ತಿರುವುದು ನಮ್ಮ ಅದೃಷ್ಟ. ಇದು ದೇಶದ ಅತಿದೊಡ್ಡ ಅದೃಷ್ಟದ ಕಾರ್ಯಕ್ರಮವಾಗಿದೆ. ರಾಮರಾಜ್ಯ ಸ್ಥಾಪನೆಗೆ ಪೂರಕವಾಗಿ ಪತಂಜಲಿ ಯೋಗ ಪೀಠ ಕೂಡ ಶ್ರಮವಹಿಸಲಿದ್ದು, ಅಯೋಧ್ಯೆಯಲ್ಲೇ ದೊಡ್ಡ ಗುರುಕುಲವೊಂದನ್ನು ಸ್ಥಾಪಿಸುತ್ತೇವೆ ಎಂದು ಅವರು ಘೋಷಿಸಿದ್ದಾರೆ.

    ಇದನ್ನೂ ಓದಿ: ರಾಮನ ನೆನಪೇ ರಾಮರಾಜ್ಯ

    ಈ ಗುರುಕುಲದಲ್ಲಿ ಜಗತ್ತು ಬಯಸುವ ವೇದಾಧ್ಯಯನ, ಆಯುರ್ವೇದ ಅಧ್ಯಯನಕ್ಕೆ ಅವಕಾಶ ಇರಲಿದೆ. ಜಗತ್ತಿನ ಯಾವುದೇ ಭಾಗದ ಜನರು ಬಂದು ಈ ಗುರುಕುಲದಲ್ಲಿ ವಿದ್ಯೆ ಕಲಿಯಬಹುದು ಎಂದು ಅವರು ಹೇಳಿದರು. (ಏಜೆನ್ಸೀಸ್)

    ರಾಮಜನ್ಮಭೂಮಿಗೆ ಭೇಟಿ ನೀಡ್ತಿರೋ ಮೊದಲ ಪ್ರಧಾನಿ ನರೇಂದ್ರ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts