More

    ಪತಂಜಲಿ ಕರೊನಾ ಔಷಧಕ್ಕೆ ಮತ್ತೊಂದು ಸಂಕಟ, ಬ್ರ್ಯಾಂಡ್​ ನೇಮ್​ ಬಳಕೆಗೆ ಹೈಕೋರ್ಟ್​ ತಡೆ

    ನವದೆಹಲಿ: ಕರೊನಾಕ್ಕೆ ಯಶಸ್ವಿಯಾಗಿ ಔಷಧವನ್ನು ತಯಾರಿಸಿದ್ದು, ಅದನ್ನು ಕರೊನಿಲ್​ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಯೋಗ ಗುರು ಬಾಬಾ ರಾಮದೇವ್​ ಅವರ ಕಂಪನಿ ಹೇಳಿಕೊಂಡಿತ್ತು. ಆದರೆ, ಈ ಔಷಧವನ್ನು ಕ್ಲಿನಿಕಲ್​ ಟ್ರಯಲ್​ಗೆ ಒಳಪಡಿಸಿಲ್ಲ, ಜತೆಗೆ ಇದನ್ನು ತಯಾರಿಸಿ, ಮಾರಾಟ ಮಾಡಲು ಸೂಕ್ತ ಅನುಮತಿಗಳನ್ನೂ ಪಡೆದುಕೊಂಡಿಲ್ಲ ಎಂದು ಹೇಳಿದ್ದ ಸರ್ಕಾರ, ಇದರ ಮಾರಾಟವನ್ನು ನಿಷೇಧಿಸಿತ್ತು. ಇದೀಗ ಇದರ ಕರೊನಿಲ್​ ಎಂಬ ಬ್ರ್ಯಾಂಡ್​ನೇಮ್​ ಬಳಕೆಯನ್ನು ನಿಷೇಧಿಸಿ ಮದ್ರಾಸ್​ ಹೈಕೋರ್ಟ್​ ಮಧ್ಯಂತರ ಆದೇಶ ಹೊರಡಿಸಿದೆ.

    ತಮಿಳುನಾಡಿನ ಚೆನ್ನೈ ಮೂಲದ ರಾಸಾಯನಿಕಗಳ ತಯಾರಿಕಾ ಸಂಸ್ಥೆ ಆರೂಢ ಇಂಜಿನಿಯರಿಂಗ್​ ಪ್ರೈವೇಟ್​ ಲಿಮಿಟೆಡ್​ ಎಂಬ ಕಂಪನಿಯು ಕರೊನಿಲ್​ ಎಂಬ ಬ್ರ್ಯಾಂಡ್​ನೇಮ್​ ಅನ್ನು 1993ರಲ್ಲೇ ನೋಂದಾಯಿಸಿದೆ. ಈ ಹೆಸರಿನಲ್ಲಿ ರಾಸಾಯನಿಕ ಹಾಗೂ ಬೃಹತ್​ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸುವ ಸ್ಯಾನಿಟೈಸರ್​ಗಳನ್ನು ಉತ್ಪಾದಿಸುತ್ತಿದೆ. ಕರೊನಿಲ್​ 213 ಎಸ್​ಪಿಎಲ್​ ಮತ್ತು ಕರೊನಿಲ್​ 92ಬಿ ಎಂಬ ಹೆಸರಿನಲ್ಲಿ ಈ ಉತ್ಪನ್ನಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದು, ಕಾಲಾನುಕಾಲಕ್ಕೆ ಟ್ರೇಡ್​ಮಾರ್ಕ್​ ಬಳಕೆಯ ಅನುಮತಿಯನ್ನು ನವೀಕರಿಸಿಕೊಂಡು ಬರುತ್ತಿದೆ.

    ಇದನ್ನೂ ಓದಿ: ನದಿ ನೀರಲ್ಲಿ ಬರಿಗೈಯಿಂದಲೇ ಗುದ್ದಿ ಮೊಸಳೆ ಹಿಮ್ಮೆಟ್ಟಿಸಿದ ಧೀರ….!

    ಈ ಹಿನ್ನೆಲೆಯಲ್ಲಿ ಆರೂಢ ಕಂಪನಿಯು ಕರೊನಿಲ್​ ಬ್ರ್ಯಾಂಡ್​ನೇಮ್​ ಅನ್ನು ಬಳಸದಂತೆ ಪತಂಜಲಿ ಸಂಸ್ಥೆಯನ್ನು ತಡೆಯಬೇಕು ಎಂದು ಕೋರಿ ಮದ್ರಾಸ್​ ಹೈಕೋರ್ಟ್​ನಲ್ಲಿ ಮನವಿ ಮಾಡಿಕೊಂಡಿತ್ತು. ನಾವು ಮತ್ತು ಪತಂಜಲಿ ಈ ಬ್ರ್ಯಾಂಡ್​ನೇಮ್​ನಲ್ಲಿ ಉತ್ಪಾದಿಸುವ ಉತ್ಪನ್ನಗಳು ಬೇರೆ ಬೇರೆ ಇರಬಹುದು. ಆದರೆ, ಒಂದೇ ಬಗೆಯ ಟ್ರೇಡ್​ಮಾರ್ಕ್​ಗಳ ಬಳಕೆಯಿಂದ ನಮ್ಮ ಬೌದ್ಧಿಕ ಆಸ್ತಿಯ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ ಎಂದು ಆರೂಢ ಕಂಪನಿ ವಾದಿಸಿತ್ತು.

    ಇದರ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕರೊನಿಲ್​ ಬ್ರ್ಯಾಂಡ್​ನೇಮ್​ ಅನ್ನು ಬಳಸದಂತೆ ಪತಂಜಲಿ ಸಂಸ್ಥೆಗೆ ಸೂಚಿಸಿ ಜು.30ರವರೆಗೆ ಅನ್ವಯಿಸುವಂತೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

    ಒಳನುಸುಳಲೆತ್ನಿಸಿದ ಮತ್ತೊಬ್ಬ ಪಾಕ್ ಆಡಳಿತ ಕಾಶ್ಮೀರ (PaK) ವ್ಯಕ್ತಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts