More

    VIDEO| ರೈಲು ಹತ್ತುವ ವಿಚಾರಕ್ಕೆ ಗಲಾಟೆ; ಪ್ರಯಾಣಿಕರ ನಡುವೆ ಮಾರಾಮಾರಿ

    ಥಾಣೆ: ರೈಲು ಹತ್ತುವ ವೇಳೆ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕ ತಿರುಗಿ ಕೈ ಕೈ ಮಿಲಾಯಿಸಿರುವ ಘಟನೆ ಥಾಣೆಯ ದಿವಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ದಿವಾದಿಂದ ಕರ್ಜಾತ್​​ ಕಡೆಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹೆಚ್ಚಿನ ಜನಸಂದಣಿ ಇದ್ದ ಕಾರಣ ರೈಲನ್ನು ಹತ್ತಲು ಸಾಧ್ಯವಾಗಿಲ್ಲ. ಈ ವೇಳೆ ಪುಟ್​ಬೋರ್ಡ್​​ನಲ್ಲಿ ನಿಂತಿದ್ದವರ ಜೊತೆ ಜಗಳವಾಡಿರುವ ಪ್ರಯಾಣಿಕರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪ್ರಯಾಣಿಕರು ಪುಟ್​ಬೋರ್ಡ್​​ನಲ್ಲಿ ನಿಂತಿದವರನ್ನು ಹಿಡಿದು ಥಳಿಸುತ್ತಿರುವುದು ಕಂಡು ಬರುತ್ತದೆ.

    ಇದನ್ನೂ ಓದಿ: ರಾಮನವಮಿ ವೇಳೆ ಘರ್ಷಣೆ; ಹನುಮ ಜಯಂತಿಗೆ ಕಟ್ಟೆಚ್ಚೆರ ವಹಿಸುವಂತೆ ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಸೋಮವಾರ ಸಂಜೆ ಘಟನೆ ನಡೆದಿದ್ದು ದೂರನ್ನು ದಾಖಲಿಸಿಕೊಳ್ಳಲು ಹಲ್ಲೆಗೊಳಗಾದವರನ್ನು ಹುಡುಕಲಾಗುತ್ತಿದೆ. ವಿಷಯ ತಿಳಿದು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ತಲುಪುವ ವೇಳೆಗೆ ಹಲ್ಲೆಗೊಳಗಾದ ಪ್ರಯಾಣಿಕರು ಸ್ಥಳದಲ್ಲಿರಲಿಲ್ಲ. ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಈ ರೀತಿಯ ಘಟನೆಗಳು ಸಬ್​ ಅರ್ಬನ್​ ರೈಲಿನಲ್ಲಿ ಸಾಮಾನ್ಯವಾಗಿದ್ದು ಹತ್ತುವ-ಇಳಿಯುವ ಬಗ್ಗೆ ಪ್ರಯಾಣಿಕರ ನಡುವೆ ಗಲಾಟೆಯಾಗುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts