More

    ದೆಹಲಿಯಲ್ಲಿ ದಟ್ಟ ಹೊಗೆ: ವಿಮಾನ ಸಂಚಾರದಲ್ಲಿ ವ್ಯತ್ಯಯ, ರನ್​ವೇಯಲ್ಲಿ ದಿನ ಕಳೆದ ಪ್ರಯಾಣಿಕರು

    ನವದೆಹಲಿ: ಕೆಲ ದಿನಗಳಿಂದ ದೆಹಲಿಯಲ್ಲಿ ದಟ್ಟ ಮಂಜು ಕವಿದು, ಶೀತ ಮಾರುತ ಮುಂದುವರಿದ ಕಾರಣ ಎರಡನೇ ದಿನವಾದ ಸೋಮವಾರ ಕೂಡ ದೆಹಲಿಯಲ್ಲಿ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಯಿತು.

    ಇದನ್ನೂ ಓದಿ:ಯುವಿ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಪುಡಿ ಪುಡಿ ಮಾಡಿದ ಕರ್ನಾಟಕದ ಯುವ ಕ್ರಿಕೆಟಿಗ!

    ರನ್​ವೇ ಮೇಲೆ ಊಟ: ದಟ್ಟ ಮಂಜಿನ ಕಾರಣ ವಿಮಾನಗಳ ರದ್ದತಿ ಅಥವಾ ವಿಳಂಬ ಹಾರಾಟದಿಂದ ರೋಸಿಹೋದ ಪ್ರಯಾಣಿಕರು ಆಕ್ರೋಶ ಹೊರಹಾಕಿದ ಘಟನೆಗಳೂ ನಡೆದವು. ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಜೊತೆ ಪ್ರಯಾಣಿಕರ ವಾಗ್ವಾದ, ರನ್​ ವೇ ಊಟ ಮಾಡುವುದು. ಕೆಲ ಪ್ರಯಾಣಿಕರು ಹರಟೆ ಹೊಡೆಯುತ್ತಿರುವುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

    ಭಾನುವಾರದಂತೆ ಸೋಮವಾರ ಕೆಲವೇ ವಿಮಾನಗಳು ಹಾರಾಟ ಆರಂಭಿಸಿದವು ಎಂದು ವಿಮಾನ ನಿಲ್ಧಾಣ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

    ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 313 ವಿಮಾನಗಳ ಸಂಚಾರ ವಿಳಂಬವಾಗಿದೆ ಹಾಗೂ 82 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಗಳ ಸಂಚಾರ ಕುರಿತ ಮಾಹಿತಿ ಒದಗಿಸುವ ‘ಫ್ಲೈಟ್‌ರಾಡಾರ್‌24’ ಜಾಲತಾಣದಲ್ಲಿ ವಿವರಿಸಲಾಗಿದೆ.

    ದೆಹಲಿ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವಿಳಂಬವಾಗುವ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ಇಂಡಿಗೋ ಪೈಲಟ್‌ಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

    ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಪೈಲಟ್ ವಿಮಾನ ಟೇಕಾಫ್ ಆಗುವುದು ವಿಳಂಬವಾಗಲಿದೆ ಎಂದು ಘೋಷಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ವಿಮಾನಯಾನ ಭದ್ರತಾ ಏಜೆನ್ಸಿ ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವೈರಲ್ ವಿಡಿಯೋದಲ್ಲಿ, ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದ್ದು, ಸಹ ಪೈಲಟ್ ಅನ್ನು ಅನುಪ್ ಕುಮಾರ್ ಎಂದು ಗುರುತಿಸಲಾಗಿದೆ.

    ‘ಪ್ರಯಾಣಿಕನೊಬ್ಬ ಸಹ ಪೈಲಟ್‌ ಮೇಲೆ ಹಲ್ಲೆ ನಡೆಸಿದ್ದು ಆತನ ಹೆಸರನ್ನು ‘ಪ್ರಯಾಣ ನಿರ್ಬಂಧ ಪಟ್ಟಿ’ಯಲ್ಲಿ ಸೇರ್ಪಡೆ ಮಾಡುವ ಸಂಬಂಧ ವಿಷಯವನ್ನು ಸ್ವತಂತ್ರ ಆಂತರಿಕ ಸಮಿತಿಗೆ ವರ್ಗಾಯಿಸಲಾಗಿದೆ’ ಎಂದು ಇಂಡಿಗೊ ವಿಮಾನ ಸಂಸ್ಥೆ ಪ್ರಕಟಣೆ ತಿಳಿಸಿದೆ. ಆತನ ವಿರುದ್ಧ ಐಪಿಸಿ ಹಾಗೂ ವಿಮಾನ ನಿಯಮಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿಯಲ್ಲಿ ದಟ್ಟ ಮಂಜಿನಿಂದ ಗೋಚರತೆ ಕಡಿಮೆಯಾಗಿದೆ ಈ ಪರಿಸ್ಥಿತಿಯಿಂದ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದೆ. ನಮ್ಮ ಗ್ರಾಹಕರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಪ್ರಸ್ತುತ ಘಟನೆಯನ್ನು ಪರಿಶೀಲಿಸುತ್ತಿದ್ದೇವೆ. ಭವಿಷ್ಯದಲ್ಲಿ ಅಂತಹ ಯಾವುದೇ ನಿದರ್ಶನಗಳನ್ನು ತಪ್ಪಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಇಂಡಿಗೋ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts