More

    ಯುವಿ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಪುಡಿ ಪುಡಿ ಮಾಡಿದ ಕರ್ನಾಟಕದ ಯುವ ಕ್ರಿಕೆಟಿಗ!

    ಶಿವಮೊಗ್ಗ: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಅವರ ಜೀವನ ಕತೆಯಾಧಾರಿತ ಹಾಗೂ ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ನಟನೆಯ ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸಿನಿಮಾದಲ್ಲಿ ಬರುವಂತಹ ಯುವರಾಜ್ ಸಿಂಗ್ ಅವರ ದೃಶ್ಯವನ್ನು ಬಹುತೇಕ ಮಂದಿ ನೋಡಿಯೇ ಇರ್ತೀರಿ. ಯುವರಾಜ್​ ಸಿಂಗ್​ ಸಾಧನೆಯನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ, ಆ ಸಾಧನೆಯನ್ನು ಇಂದು ನಡೆದ ದೇಸಿ ಪಂದ್ಯಾವಳಿಯಲ್ಲಿ ಕನ್ನಡಿಗನೋರ್ವ ಪುಡಿ ಪುಡಿ ಮಾಡಿದ್ದಾನೆ.

    ಹೌದು, ಸೋಮವಾರ ಶಿವಮೊಗ್ಗದಲ್ಲಿ ಮುಂಬೈ ವಿರುದ್ಧ ನಡೆದ ಕೂಚ್‌ ಬೆಹರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ 636 ಎಸೆತಗಳಲ್ಲಿ ಅಜೇಯ 404* ರನ್ ಬಾರಿಸುವ ಮೂಲಕ ಯುವರಾಜ್ ಸಿಂಗ್ ಅವರ 25 ವರ್ಷ ಹಿಂದಿನ ದಾಖಲೆಯನ್ನು ಮುರಿಯವಲ್ಲಿ ಕರ್ನಾಟಕದ ಪ್ರಖರ್ ಚತುರ್ವೇದಿ ಯಶಸ್ವಿಯಾಗಿದ್ದಾರೆ.

    ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಯುವರಾಜ್, 1999ರಲ್ಲಿ ಬಿಹಾರ ವಿರುದ್ಧ ಪಂಜಾಬ್ ಪರ 358 ರನ್ ಗಳಿಸಿದ್ದರು. ಈ ವೇಳೆ ಅವರು ಧೋನಿ ಪ್ರತಿನಿಧಿಸಿದ್ದ ಬಿಹಾರ ತಂಡವನ್ನು ಸೋಲಿಸಿ ಈ ದಾಖಲೆಯನ್ನು ಬರೆದಿದ್ದರು.

    ಇಂದು (ಜ.15) ನಡೆದ ಕೂಚ್‌ ಬೆಹರ್ ಟ್ರೋಫಿಯ ಫೈನಲ್ ಪಂದ್ಯಾಟದ ಮೊದಲ ಇನ್ನಿಂಗ್ಸ್​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಕರ್ನಾಟಕ ತಂಡ 380 ರನ್​​ಗಳಿಗೆ ಮುಂಬೈ ತಂಡವನ್ನು ಆಲೌಂಟ್ ಮಾಡಿತು. 380 ರನ್​ಗಳ ಗುರಿ ಬೆನ್ನು ಹತ್ತಿದ ಕರ್ನಾಟಕ, ಹರ್ಷಿಲ್ ದಮಾನಿಯವರು 179 ರನ್, ಚತುರ್ವೇದಿ 400 ರನ್ ಗಳಿಸಿ ತಂಡದ ಒಟ್ಟು ಮೊತ್ತ 890ರ ಗಡಿ ದಾಟುತ್ತಿದ್ದಲ್ಲದೆ, 510 ರನ್​ ಮುನ್ನಡೆಯನ್ನು ಕರ್ನಾಟಕ ತಂಡ ಕಾಯ್ದುಕೊಂಡಿತು. ಆದರೆ, ನಾಲ್ಕನೇ ದಿನ ಮುಕ್ತಾಯವಾದ್ದರಿಂದ ಪಂದ್ಯವನ್ನು ಡ್ರಾ ಎಂಬ ನಿರ್ಣಯದೊಂದಿಗೆ ತೆರೆ ಎಳೆಯಲಾಯಿತು.

    ಚತುರ್ವೇದಿ ಅವರು ಕೂಚ್‌ಬೆಹರ್ ಟ್ರೋಫಿಯಲ್ಲಿ 46 ಬೌಂಡರಿಗಳು ಮತ್ತು ಮೂರು ಸಿಕ್ಸರ್​ಗಳನ್ನು ಬಾರಿಸಿ 63.32 ರನ್ ರೇಟ್ ನೊಂದಿಗೆ 400 ರನ್ ಗಳಿಸಿದ ಮೊದಲ ಆಟಗಾರನಾಗಿ ಮೂಡಿಬಂದ್ದಿದಾರೆ.

    ವಿರಾಟ್ ಕೊಹ್ಲಿ ಅಬ್ಬರದ​ ಬ್ಯಾಟಿಂಗ್ ಕಂಡು ವಾರ್ನಿಂಗ್​ ಕೊಟ್ಟ ಆಕಾಶ್​ ಚೋಪ್ರಾ​! ಆತಂಕದಲ್ಲಿ ಅಭಿಮಾನಿಗಳು

    ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಸೇಠ್​ ತನಿಖೆಗೆ ಸಹಕರಿಸುತ್ತಿಲ್ಲ; ಕಸ್ಟಡಿ ಅವಧಿ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts