More

    ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

    ನವದೆಹಲಿ: ಕರೊನಾ ನಿಯಂತ್ರಣ ಹಾಗೂ ತಡೆ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸುವ ಅಭಿಯಾನ ಜಗತ್ತಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ನಡುವೆಯೇ ಕೆಲವು ರಾಷ್ಟ್ರಗಳಲ್ಲಿ ನಿಗದಿತ ಕಂಪನಿಯೊಂದರ ಕರೊನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

    ಯುಕೆ ಮೆಡಿಕಲ್ ರೆಗ್ಯುಲೇಟರಿಯು ಇಂಥದ್ದೊಂದು ಮಾಹಿತಿಯನ್ನು ಶನಿವಾರ ಹೊರಹಾಕಿದೆ. ಆಸ್ಟ್ರಾಜೆನೆಕಾ ಹಾಗೂ ಆಕ್ಸ್​ಫರ್ಡ್ ಜತೆಯಾಗಿ ಸಂಶೋಧಿಸಿರುವ ಕರೊನಾ ಲಸಿಕೆಯಿಂದಾಗಿ ರಕ್ತಹೆಪ್ಪುಗಟ್ಟುವಿಕೆ ಸಂಭವಿಸುತ್ತಿದೆ ಎಂದು ಅದು ಹೇಳಿದೆ. ಇದೇ ಹಿನ್ನೆಲೆಯಲ್ಲಿ ಕೆಲವು ಐರೋಪ್ಯ ರಾಷ್ಟ್ರಗಳು ಆಸ್ಟ್ರಾಜೆನೆಕಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿವೆ ಎಂದೂ ಅದು ತಿಳಿಸಿದೆ. ಆಸ್ಟ್ರಾಜೆನೆಕಾ ಲಸಿಕೆ ಪಡೆದ ಬಳಿಕ 7 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಯುಕೆಯಲ್ಲಿನ ಮೆಡಿಸಿನ್ಸ್​ ಆ್ಯಂಡ್​ ಹೆಲ್ತ್​​ಕೇರ್ ಪ್ರೊಡಕ್ಟ್ಸ್​ ರೆಗ್ಯುಲೇಟರಿ ಏಜೆನ್ಸಿ ತಿಳಿಸಿದೆ.
    ಆಸ್ಟ್ರಾಜೆನೆಕಾ ಲಸಿಕೆ ತೆಗೆದುಕೊಂಡ ಬಳಿಕ ಒಬ್ಬಳು ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ನೆದರ್ಲೆಂಡ್ ಕೂಡ ಶುಕ್ರವಾರ 60 ವರ್ಷದೊಳಗಿನವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿದೆ. ಈ ವಾರದ ಆರಂಭದಲ್ಲಿ ಜರ್ಮನಿ ಕೂಡ ಇಂಥದ್ದೇ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿ: ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!

    ಇನ್ನೊಂದೆಡೆ ಆಸ್ಟ್ರಾಜೆನೆಕಾ ಕಂಪನಿಯ ಲಸಿಕೆ ಸುರಕ್ಷಿತ ಎಂದು ಹೇಳಿದ್ದ ಯುರೋಪಿಯನ್​ ಮೆಡಿಸಿನ್ಸ್ ಏಜೆನ್ಸಿ(ಇಎಂಎ), ಸದ್ಯದ ಬೆಳವಣಿಗೆ ಕುರಿತು ಏ. 7ರಂದು ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆ ಇದೆ. ಲಸಿಕೆ ಸುರಕ್ಷಿತ ಹಾಗೂ ವಯಸ್ಸು, ಲಿಂಗ ಅಥವಾ ವೈದ್ಯಕೀಯ ಹಿನ್ನೆಲೆಗೆ ಅನುಗುಣವಾಗಿ ಯಾವುದೇ ರಿಸ್ಕ್​ ಫ್ಯಾಕ್ಟರ್ ಇಲ್ಲ ಎಂದು ಇಎಂಎ ಬುಧವಾರವೂ ಹೇಳಿತ್ತು. ಇನ್ನು ಯುಕೆನಲ್ಲಿ 18.1 ಬಿಲಿಯನ್​ ಡೋಸ್​ ಲಸಿಕೆಗಳನ್ನು ನೀಡಿದ ಬಳಿಕ 30 ಜನರಲ್ಲಿ ರಕ್ತಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ ಎಂಬುದಾಗಿ ಯುಕೆ ರೆಗ್ಯುಲೇಟರಿ ಹೇಳಿದೆ. (ಏಜೆನ್ಸೀಸ್)

    ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

    ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಆಗುತ್ತಾ? ಸಚಿವ ಸುಧಾಕರ್​ ಏನು ಹೇಳಿದ್ರು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts