More

    ಶ್ರೀಗುರು ಸೇವೆಗೆ ದ್ವಾರವಾಗಿರುವ ಪರಿವಾರ

    ಗೋಕರ್ಣ: ಮಠ ನಡೆಯಲು ಗುರುಗಳು ಹೇಗೆ ಅನಿವಾರ್ಯವೋ ಅದೇ ರೀತಿ ಪರಿವಾರದವರ ಸೇವೆಯೂ ಶ್ರೀಮಠಕ್ಕೆ ಅನಿವಾರ್ಯ. ಶ್ರೀಗುರು ಸೇವೆಗೆ ಅವರು ದ್ವಾರವಾಗಿರುವವರೇ ವಿನಃ ಗೋಡೆಯಲ್ಲ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
    ಸಂಘಟನಾ ಚಾತುರ್ಮಾಸ್ಯದ ಎರಡನೇ ದಿನ ಶ್ರೀಮಠದ ಪರಿವಾರದವರ ಭಿಕ್ಷಾಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವದಿಸಿದರು.
    ಗುರುವಿನ ಪರಿಪೂರ್ಣತೆ ಮತ್ತು ಗುರಿ ಸಾಧನೆಗೆ ಶ್ರೀಪರಿವಾರಿದವರು ಸೋಪಾನವಾಗಿದ್ದಾರೆ. ಪರಿವಾರದಲ್ಲಿದ್ದು ಸೇವೆ ಸಲ್ಲಿಸುವುದು ಒಂದು ಹೆಗ್ಗಳಿಕೆ. ಪ್ರತಿಫಲಾಪೇಕ್ಷೆ ಇಲ್ಲದೆ, ಅಗ್ನಿಶುದ್ಧವಾಗಿ ಯಾವತ್ತೂ ಅನಿವೃತ್ತವಾದ ಪರಿವಾರದ ಶ್ರೀಗುರು ಸೇವೆ ಅಭಿಮಾನಪ್ರದವಾದ ಕಾಯಕವಾಗಿದೆ ಎಂದರು.
    ಸೇವೆಯಲ್ಲಿಯೇ ಸುಖ ಕಾಣುವ ಪರಿವಾರದವರನ್ನು ಯಾವತ್ತೂ ನೋಯಿಸಬಾರದು ಎಂದು ನುಡಿದ ಶ್ರೀಗಳು ಗಣನೀಯ ಸೇವೆ ಸಲ್ಲಿಸಿದ ಶ್ರೀಪರಿವಾರದ ಐವರನ್ನು ಸನ್ಮಾನಿಸಿ ಆಶೀರ್ವದಿಸಿದರು.
    ಶ್ರೀಪರಿವಾರದ ಸುಬ್ರಾಯ ಶಂಕರ ಭಟ್ಟ ಅಗ್ನಿಹೋತ್ರಿ, ರಮೇಶ ಭಟ್ಟ ವಿಭೂತಿ, ಪಾಕತಜ್ಞ ಕೆ.ವಿ. ಲಕ್ಷ್ಮೀನಾರಾಯಣಸ್ವಾಮಿ, ಅನಂತ ಭಟ್ಟ, ಸುಬ್ರಹ್ಮಣ್ಯ ಭಟ್ಟ ಹೆಗ್ಗಾರಹಳ್ಳಿ ಅವರುಗಳಿಗೆ ಕಲ್ಪವೃಕ್ಷ ನೀಡಿ ಸಾಧಕ ಸನ್ಮಾನ ನೆರವೇರಿಸಲಾಯಿತು.
    ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಗೌ.ಕಾರ್ಯದರ್ಶಿ ನಾಗರಾಜ ಭಟ್ಟ ಪೆದಮಲೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್. ಗಣಪತಿ ಭಟ್ಟ, ಗಾಯಕಿ ಮಧುಶ್ರೀ, ಡಾ. ಸುಧೀಂದ್ರ ಅಡಿಗ ಉಪ್ಪೂರು, ಉದ್ಯಮಿ ಗೋಪಾಲ ರೆಡ್ಡಿ, ಯಕ್ಷಗಾನದ ಹಿರಿಯ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಶಹ್ರಾ ಪ್ರತಿಷ್ಠಾನದ ಮೀರಾ ರಾಜ್ದಾ, ಅಲ್ಕಾ ಪಟೇಲ, ಅನುಭೂತಿ ಗೋಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts