More

    ಧರ್ಮ ಮಾರ್ಗದಿಂದ ಬದುಕು ಸಾರ್ಥಕ

    ಗೋಕರ್ಣ: ಹರಿ ಮತ್ತು ಸಿರಿಯನ್ನು ಧರ್ಮ ಮಾರ್ಗದಿಂದ ಸದ್ವಿನಿಯೋಗ ಮಾಡಿಕೊಳ್ಳಬೇಕು. ಇದರಿಂದ ಬದುಕು ಸಾರ್ಥಕ್ಯ ಪಡೆಯುತ್ತದೆ ಎಂದು ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯ ವ್ರತ ದೀಕ್ಷೆಯಲ್ಲಿರುವ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

    ಶನಿವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ವಿವಿಧ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು.

    ಹರಿ ಎಂದರೆ ಧರ್ಮ. ಸಿರಿ ಎಂದರೆ ಸಂಪತ್ತು. ಇವೆರಡೂ ಸತಿ-ಪತಿಗಳಿದ್ದಂತೆ. ಹರಿಯ ಉಪಾಸನೆಗೈದರೆ ಸಿರಿ ತಾನಾಗಿಯೇ ಒಲಿದು ಬರುತ್ತಾಳೆ. ಹರಿ ದಶಾವತಾರಿಯಾದರೆ ಸಿರಿಗೆ ಸಹಸ್ರಾವತಾರಗಳು. ಹರಿಯನ್ನು ಮರೆತು ಸಿರಿಯ ಹಿಂದೆ ಬಿದ್ದರೆ ಅಪಾಯ ನಿಶ್ಚಿತ. ಆದರೆ, ವರ್ತಮಾನದ ಸಮಾಜ ಸಿರಿ ಅಂದರೆ ಹಣದ ಹಿಂದೆ ಓಡುತ್ತಿದೆ. ಜೀವನದ ಅಗತ್ಯ ಕರ್ತವ್ಯಗಳನ್ನು ತೊರೆದು, ನಿರ್ಲಕ್ಷಿಸಿ ವಯಸ್ಸು ಇದ್ದಷ್ಟೂ ದಿನ ಅರ್ಥ ಸಂಪಾದನೆಗೆ ಮಾತ್ರ ಆದ್ಯತೆ ನೀಡುತ್ತಾರೆ. ಕೊನೆಗೊಂದು ದಿನ ಹದಗೆಟ್ಟು ಕ್ಷೀಣಿಸಿದ ಆರೋಗ್ಯ ಮತ್ತು ನೆಮ್ಮದಿ ಪಡೆಯಲು ಎಲ್ಲ ಸಂಪತ್ತನ್ನು ಧಾರೆ ಎರೆಯುವರು. ಹರಿಯನ್ನು ಹೃದಯದಲ್ಲಿ ಇರಿಸಿಕೊಂಡವರಿಗೆ ಯಾವ ಭಯದ ಸೋಂಕೂ ಬರಲಾರದು ಎಂದರು.

    ಸಭೆಯಲ್ಲಿ ಅನಂತಮೂರ್ತಿ ಹೆಗಡೆ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವುದಾಗಿ ಪ್ರಕಟಿಸಿದರು. ವಿಶೇಷ ಸಾಧನೆ ಮಾಡಿದ ಆತ್ರೇಯಿ ಕೃಷ್ಣಾ, ಹಿತಾ ಕಜೆ, ಅನಿರುದ್ಧ ಯು.ಎಸ್., ಶ್ರುತಿ ಟಿ., ಶಾರದಾ ಎನ್.ಕೆ., ರೂಪಶ್ರೀ, ಸುಶ್ಮಿತಾ ಬಿ.ಆರ್., ಮಹತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಉದ್ಯಮಿ ಎನ್.ಎಚ್.ಇಲ್ಲೂರ, ನಿವೃತ್ತ ಎಸ್‌ಪಿ ಎನ್.ಟಿ. ಪ್ರಮೋದ ರಾವ್, ಶಶಿಕಾಂತ, ಹಿರೇಗುತ್ತಿ ಆಶ್ರಯ ಪ್ರತಿಷ್ಠಾನ ಅಧ್ಯಕ್ಷ ರಾಜೀವ ಗಾಂವಕರ, ಉದ್ಯಮಿ ಆನಂದ ಕವರಿ ಶ್ರೀಗಳ ಆಶೀರ್ವಾದ ಪಡೆದರು.

    ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಅಧ್ಯಕ್ಷ ಯು.ಎಸ್. ಗಣಪತಿ ಭಟ್ಟ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಉದಯಶಂಕರ ಭಟ್ಟ ಮಿತ್ತೂರು, ವೀಣಾ ಗೋಪಾಲಕೃಷ್ಣ, ನಿರ್ವಹಣಾಧಿಕಾರಿ ಪ್ರಸನ್ನ ಕುಮಾರ ಟಿ.ಜಿ., ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಈಶ್ವರಿ ಬೇರ್ಕಡವು, ರಾಮಚಂದ್ರ ಅಜ್ಜನಕಾನ, ಮೋಹನ ಪಳ್ಳತ್ತಡ್ಕ, ಅರವಿಂದ ದರ್ಬೆ ಇದ್ದರು. ಸುಬ್ರಾಯ ಅಗ್ನಿಹೋತ್ರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts