More

    ‘ಹೆಚ್ಚು ಮಲಗಿದ್ದಕ್ಕೆ ಸಾರಿ’ ಎಂದು ಸಾವಿನ ವದಂತಿಯನ್ನು ಅಲ್ಲಗಳೆದ ನಟ

    ನವದೆಹಲಿ : ನಿನ್ನೆ ಮಾಜಿ ಸಂಸದ ಹಾಗೂ ಬಾಲಿವುಡ್​ ನಟ ಪರೇಶ್​ ರಾವಲ್ ಅವರು ನಿಧನ ಹೊಂದಿದ್ದಾರೆ ಎಂದು ಜಾಲತಾಣದಲ್ಲಿ ಸುಳ್ಳು ವದಂತಿಗಳು ಹರಡಿದ್ದವು. ಇದಕ್ಕೆ ನಗೆ ತರಿಸುವಂಥ ಪ್ರತಿಕ್ರಿಯೆಯನ್ನು ರಾವಲ್​ ಅವರು ಖುದ್ದು ಟ್ವೀಟ್ ಮಾಡಿ ನೀಡಿದ್ದಾರೆ.

    ‘ಚಲನಚಿತ್ರೋದ್ಯಮದ ಭಾಗವಾದ ಪರೇಶ್​ ರಾವಲ್​ ಶುಕ್ರವಾರ (ಮೇ 14) ಬೆಳಿಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ’ ಎಂಬ ಸಂದೇಶವನ್ನು ಲಾಫ್ಟರ್​ ಹೌಸ್​ ಎಂಬ ಖಾತೆದಾರರು ಮತ್ತಿತರರು ನಿನ್ನೆ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಸಂಜೆಯ ವೇಳೆಗೆ ಉತ್ತರ ನೀಡಿದ ರಾವಲ್​ ಅವರು, “ನಾನು 7 ಗಂಟೆಗೂ ಮೀರಿ ನಿದ್ದೆ ಮಾಡಿದ್ದರಿಂದ ಉಂಟಾದ ತಪ್ಪು ತಿಳುವಳಿಕೆಗೆ ಕ್ಷಮೆ ಇರಲಿ” ಎಂದು ಹಾಸ್ಯಯುತವಾಗಿ ಬರೆದರು.

    ಇದಕ್ಕೆ ಹಲವು ನೆಟ್ಟಿಗರು ಲೈಕುಗಳನ್ನು ಮಳೆಗರೆದರೆ, ಕೆಲವರು, ಈ ರೀತಿ ಸುಳ್ಳು ಮಾಹಿತಿ ಹರಡಿದ ಜನರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಗರಂ ಆಗಿ ಉತ್ತರ ನೀಡಿದ್ದಾರೆ. ಮತ್ತೆ ಹಲವರು ರಾವಲ್​ ಅವರಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

    ಸೆಲೆಬ್ರಿಟಿಗಳ ಬಗ್ಗೆ ಸಾವಿನ ಸುಳ್ಳು ಹರಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಮಹಾಭಾರತ ಧಾರಾವಾಹಿಯ ಭೀಷ್ಮ ಪಾತ್ರಧಾರಿ ಮತ್ತು ಶಕ್ತಿಮಾನ್​ ನಟ ಮುಕೇಶ್ ಖನ್ನ ಅವರ ಸಾವಿನ ವದಂತಿಗಳೂ ಹರಡಿದ್ದವು. ಅದಕ್ಕೆ ಖನ್ನ ಅವರು ನಾನು ಚೆನ್ನಾಗೇ ಇದ್ದೀನಿ ಎಂದು ವಿಡಿಯೋ ಪೋಸ್ಟ್​ ಮಾಡಿ ಪ್ರತಿಕ್ರಿಯಿಸಿದ್ದರು. (ಏಜೆನ್ಸೀಸ್)

    ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

    VIDEO | ಕರ್ನಾಟಕಕ್ಕೆ ಇನ್ನೂ ಎರಡು ಆಕ್ಸಿಜನ್ ಎಕ್ಸ್​ಪ್ರೆಸ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts