More

    ಪಾಲಕರು, ಶಿಕ್ಷಕರು ಮಕ್ಕಳಲ್ಲಿ ಜೀವನ ಮೌಲ್ಯ ಬಿತ್ತಬೇಕು

    ಸಿಂದಗಿ: ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಜೀವನ ಸಂಸ್ಕಾರದ ಜತೆಗೆ ಭವಿಷ್ಯದ ಬದುಕಿನ ಮೌಲ್ಯಗಳನ್ನು ಬಿತ್ತಬೇಕು ಎಂದು ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಹೇಳಿದರು.

    ತಾಲೂಕಿನ ಬಂದಾಳ ಗ್ರಾಮದಲ್ಲಿ ಸೋಮವಾರ ಜರುಗಿದ ಸಿದ್ಧೇಶ್ವರ ಪೂರ್ವ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
    ಅಧ್ಯಕ್ಷತೆ ವಹಿಸಿದ್ದ ನಿಂಗನಗೌಡ ಬಿರಾದಾರ, ಶಿಕ್ಷಕ ಬನ್ನಪ್ಪ ದೇವರಮನಿ ಮಾತನಾಡಿದರು. ಚಿಕ್ಕಸಿಂದಗಿ ಪಿಕೆಪಿಎಸ್ ಸದಸ್ಯ ಬಸಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಅಪ್ಪರಾಯಗೌಡ ಬಿರಾದಾರ ಉದ್ಘಾಟಿಸಿದರು.

    ನಿವೃತ್ತ ಶಿಕ್ಷಕ ಶಿವಶರಣಯ್ಯ ಹಿರೇಮಠ, ಶಿಕ್ಷಕರಾದ ಬನ್ನೆಪ್ಪ ದೇವರಮನಿ, ಬಸವರಾಜ ಅಗಸರ, ಪಿಕೆಪಿಎಸ್ ಸದಸ್ಯ ಸಂಗಣ್ಣ ಕಡಕೋಳ, ವ್ಯಾಪಾರಿ ಖಾಜಾಸಾಬ ನದಾ ಅವರನ್ನು ಸನ್ಮಾನಿಸಲಾಯಿತು.

    ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಚಂದ್ರ ಗೊಬ್ಬೂರ, ಶ್ರೀಶೈಲ ಬಿರಾದಾರ, ಮಲ್ಲಪ್ಪ ಹೆರಕಲ್ಲ, ನಿಂಗಪ್ಪ ಬಿರಾದಾರ, ನಾನಾಗೌಡ ಪಾಟೀಲ, ರಮೇಶ ಬೂದಿಹಾಳ, ಸಿದಗೊಂಡಪ್ಪ ದೇವರಮನಿ, ಬಂದಾಳ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಬೂದಿಹಾಳ, ಗ್ರಾಪಂ ಸದಸ್ಯ ಶ್ರೀಶೈಲ ಕುಂಬಾರ, ಸಾಹೇಬಗೌಡ ಬಗಲಿ, ಸಂಗಮೇಶ ಯಳಮೇಲಿ, ನಿಂಗೊಂಡಪ್ಪ ಯಳಸಂಗಿ, ಗ್ರಾಪಂ ಸದಸ್ಯ ಅಶೋಕ ತಳವಾರ ಮತ್ತಿತರರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಉಮೇಶ ಬೂದಿಹಾಳ ಸ್ವಾಗತಿಸಿದರು. ಅಶೋಕ ಬೂದಿಹಾಳ ವಂದಿಸಿದರು. ಶಿಕ್ಷಕ ಅಯ್ಯಪ್ಪ ಹಿಪ್ಪರಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts