More

    ಆತಂಕ ಸೃಷ್ಟಿಸಿದ ಆಂಧ್ರದ ವಾಹನಗಳ ಪ್ರವೇಶ

    ಪರಶುರಾಮಪುರ: ಕರೊನಾ ಆತಂಕದ ನಡುವೆ ಆಂಧ್ರದಿಂದ ಕಡಪ ಕಲ್ಲುಗಳನ್ನು ಹೊತ್ತ ವಾಹನಗಳು ರಾಜ್ಯದ ಗಡಿ ಗ್ರಾಮ ಪರಶುರಾಮಪುರಗಳಲ್ಲಿ ವ್ಯವಹರಿಸುತ್ತಿರುವುದು ಆತಂಕ ಸೃಷ್ಟಿಸಿದೆ.

    ಚಳ್ಳಕೆರೆ ತಾಲೂಕು ಜಾಜೂರಿನ ಕೂಗಳತೆ ದೂರದ ಆಂಧ್ರದ ಗಂಟೆ ಓಬಯ್ಯನ ಹಟ್ಟಿಯಲ್ಲಿ ಕರೊನಾ ಪಾಸಿಟಿವ್ ಬಂದ ಕಾರಣ ಗ್ರಾಮದ ಸುತ್ತ ಸೀಲ್‌ಡೌನ್ ಮಾಡಲಾಗಿದೆ.

    ಅನಂತಪುರ ಜಿಲ್ಲೆಯ ಹಳ್ಳಿಗಳಲ್ಲಿ 25ಕ್ಕೂ ಹೆಚ್ಚು ಕರೊನಾ ಪಾಸಿಟಿವ್ ಕೇಸ್‌ಗಳು ಕಾಣಿಸಿಕೊಂಡ ಕಾರಣ ಅಲ್ಲಿನವರಿಗೆ ಪ್ರವೇಶ ನೀಡಬೇಡಿ ಹಾಗೂ ನೀವೂ ಅಲ್ಲಿಗೆ ಹೋಗಬೇಡಿ ಎಂದು ಮೊಳಕಾಲ್ಮೂರು- ಚಳ್ಳಕೆರೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.

    ಆರೋಗ್ಯ, ಪೊಲೀಸ್ ಇಲಾಖೆ ಕಣ್ಗಾವಲಿದ್ದರೂ ಸುರಕ್ಷತಾ ಕ್ರಮ ಪಾಲಿಸದೆ ಕಡಪ ಕಲ್ಲು ಹೊತ್ತ ವಾಆಹನಗಳು ನಿರಾತಂಕವಾಗಿ ರಾಜ್ಯ ಪ್ರವೇಶಿಸುತ್ತಿವೆ. ಪರಶುರಾಮಪುರ, ಪಿ.ಮಹದೇವಪುರ, ಕಡೇಹುಡೆ, ಎನ್‌ಪಿಗೇಟ್, ಎಸ್.ದುರ್ಗ, ಕ್ಯಾದಿಗುಂಟೆ, ಪಿಲ್ಲಹಳ್ಳಿ, ಪಿ.ಗೌರೀಪುರಗಳಲ್ಲಿ ಮಾರಾಟ ಮಾಡುತ್ತಿವೆ.

    ಆಂಧ್ರ ಗಡಿಭಾಗದ ಮುಖ್ಯರಸ್ತೆಗಳಲ್ಲಿ ಚೆಕ್‌ಪೋಸ್ಟ್ ತೆರೆದು ವಾಹನಗಳನ್ನು ತಡೆಯಲಾಗುತ್ತಿದೆ. ಬೇರೆ ಮಾರ್ಗಗಳಲ್ಲಿ ಬರುತ್ತಿರುವ ಮಾಹಿತಿ ಇದೆ. ಈ ಕುರಿತು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಲಾಗುವುದು.
    ಡಾ.ಪ್ರೇಮಸುಧಾ ಟಿಎಚ್‌ಒ

    ಕಡೇಹುಡೆ ಗ್ರಾಮಕ್ಕೆ ಕಡಪ ಕಲ್ಲುಗಳನ್ನು ಹೊತ್ತ ವಾಹನ ಮಂಗಳವಾರ ಬೆಳಗ್ಗೆ ಬಂದಿತ್ತು. ಆಂಧ್ರದವರ ಸಂಪರ್ಕದಲ್ಲಿದ್ದರು ಎಂಬ ಶಂಕೆಯಿಂದ ವಾರದ ಹಿಂದೆ ಕಡೇಹುಡೆ ಗ್ರಾಮದ 15 ಮಂದಿಯನ್ನು ಚಳ್ಳಕೆರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಮುಂಜಾಗ್ರತೆಯಾಗಿ ಇಂತ ವಾಹನಗಳಿಗೆ ಕಡಿವಾಣ ಹಾಕಬೇಕು.
    ಪಾಂಡುರಂಗಪ್ಪ
    ನಿವೃತ್ತ ಪಿಡಿಒ, ಕಡೇಹುಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts