More

    ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲ್​ ದೇಶದಲ್ಲೇ ಪ್ರಥಮ; ‘ಜೈಲಿನಲ್ಲಿ ನೈರ್ಮಲ್ಯ’ ಸ್ಪರ್ಧೆ; 1,319 ಕಾರಾಗೃಹಗಳು ಭಾಗಿ

    ಬೆಂಗಳೂರು: ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಆರನೇ ಅಖಿಲ ಭಾರತ ಕಾರಾಗೃಹ ಸಮ್ಮೇಳದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಗುಜರಾತಿನ ಅಹಮದಾಬಾದ್‌ನಲ್ಲಿ ಸೆ.4ರಿಂದ 6 ರವರೆಗೆ ನಡೆದ 6ನೇ ಅಖಿಲ ಭಾರತ ಕಾರಾಗೃಹ ಸಮ್ಮೇಳ ನಡೆಯಿತು. ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1,319 ಕಾರಾಗೃಹಗಳು ಭಾಗವಹಿಸಿದ್ದವು.

    ‘ಜೈಲಿನಲ್ಲಿ ನೈರ್ಮಲ್ಯ ಸ್ಪರ್ಧೆಗೆ’ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಪ್ರಸ್ತಾಪಿಸಿದ್ದರು. ಸಮ್ಮೇಳನದ ಸದಸ್ಯರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಸ್ವಚ್ಛತೆ ನಿರ್ವಹಣೆಯ ಆಧಾರದ ಮೇಲೆ ಪ್ರಥಮ ಸ್ಥಾನ ಘೋಷಣೆ ಮಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣ ಕೇಂದ್ರ ಕಾರಾಗೃಹ ಮತ್ತು ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೆಂಗಳೂರಿನ ಕೇಂದ್ರ ಕಾರಾಗೃಹವು ರಾಷ್ಟ್ರದಲ್ಲಿನ ಅತಿದೊಡ್ಡ ಜೈಲಾಗಿದ್ದು, 5,200 ಬಂದಿಗಳು ದಾಖಲಾಗಿದ್ದಾರೆ. ಆಹಾರ ಗುಣಮಟ್ಟ ಮತ್ತು ಸ್ವಚ್ಛತೆಗೆ ಭಾರತ ಸರ್ಕಾರದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಭದ್ರತೆ ಪ್ರಾಧಿಕಾರ ಪರಿಶೀಲನೆ ನಡೆಸಿದರು. 2021ರ ಜೂನ್ 4ರಂದು 4 ಸ್ಟಾರ್ ರೇಟಿಂಗ್ ನೀಡಿ ಪ್ರಮಾಣೀಕರಿಸಿದೆ. ಇದು ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. ಇದಲ್ಲದೆ, ರಾಜ್ಯದ 8 ಕೇಂದ್ರ ಕಾರಾಗೃಹಗಳಿಗೆ ಸಹ 4 ಸ್ಟಾರ್ ರೇಟಿಂಗ್ ಪ್ರಮಾಣ ಪತ್ರ ದೊರೆತಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪತಿಯ ಕಾಲನ್ನು ಕತ್ತರಿಸಿ ಪತ್ನಿಯ ಕೈಗಿಟ್ರು ಆಸ್ಪತ್ರೆ ಸಿಬ್ಬಂದಿ!; ತಬ್ಬಿಬ್ಬಾದ ಮಹಿಳೆ..

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಇಷ್ಟವಿಲ್ಲದ ಮದುವೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts