More

  ಮಲೇಷ್ಯಾಕ್ಕೆ ತಾಳೆಎಣ್ಣೆ ಏಟು

  ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಭಾರತದ ವಿರೋಧ ನಿಲುವನ್ನು ಹೊರಹಾಕಿರುವ ಮಲೇಷ್ಯಾದ ಜತೆ ವಾಣಿಜ್ಯ ವ್ಯವಹಾರವನ್ನು ಭಾರತ ಕಡಿದುಕೊಂಡಿದೆ. ವಿಶೇಷವಾಗಿ ತಾಳೆ ಎಣ್ಣೆ (ಪಾಮ್ ಆಯಿಲ್) ಆಮದನ್ನು ಸ್ಥಗಿತಗೊಳಿಸಿ ತಕ್ಕ ಪಾಠ ಕಲಿಸಲು ಹೊರಟಿದೆ. ಇದರಿಂದ ಮಲೇಷ್ಯಾದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ.

  ಮಲೇಷ್ಯದಿಂದ ಬಂದಿರುವ 30 ಸಾವಿರ ಟನ್ ಶುದ್ಧೀಕರಿಸಿದ ಪಾಮ್ ಆಯಿಲ್ ದಾಸ್ತಾನು ಭಾರತದ ವಿವಿಧ ಬಂದರುಗಳಲ್ಲಿ ಎತ್ತುವಳಿಯಾಗದೆ ಹಾಗೇ ಉಳಿದುಕೊಂಡಿದೆ. ಕೇಂದ್ರ ಸರ್ಕಾರ ನಿರ್ಬಂಧ ಹೇರುವ ಮುನ್ನವೇ ಈ ಹಡಗುಗಳು ಎಣ್ಣೆ ತುಂಬಿಕೊಂಡು ಹೊರಟಿದ್ದವು. ಮಂಗಳೂರು ಬಂದರಿನಲ್ಲಿ ಕಚ್ಚಾ ತಾಳ ೆ ಎಣ್ಣೆಯನ್ನು ಇಳಿಸಿಕೊಳ್ಳಲಾಗಿದೆ. ಆದರೆ, ಶುದ್ಧೀಕರಿಸಿದ ಎಣ್ಣೆಯನ್ನು ಇಳಿಸಲು ಅನುಮತಿ ನೀಡಿಲ್ಲ.

  ಭಾರತ ಜಗತ್ತಿನ ಅತ್ಯಂತ ದೊಡ್ಡ ಖಾದ್ಯ ತೈಲ ಆಮದು ರಾಷ್ಟ್ರವಾಗಿದ್ದು, ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದಲೇ ವಾರ್ಷಿಕವಾಗಿ 1.50 ಲಕ್ಷದಿಂದ 2 ಲಕ್ಷ ಟನ್ ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಮಲೇಷ್ಯಾದಿಂದ ರಫ್ತಾಗುವ ತಾಳೆ ಎಣ್ಣೆ ಭಾರತದ ಒಟ್ಟು ಆಮದಿನಲ್ಲಿ ಮೂರನೇ ಎರಡಷ್ಟಾಗಿದೆ. ಶುದ್ಧೀಕರಿಸಿದ ಎಣ್ಣೆ ಮೇಲೆ ಕಡಿಮೆ ಸುಂಕದ ಅನುಕೂಲ ಪಡೆದ ಮಲೇಷ್ಯಾ 2019ರಲ್ಲಿ ಇಂಡೋನೇಷ್ಯಾವನ್ನೂ ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತಾಳೆ ಎಣ್ಣೆ ಮಾರಾಟ ಮಾಡಿತ್ತು. ನೇಪಾಳ ಹಾಗೂ ಬಾಂಗ್ಲಾದೇಶದಿಂದ 40ರಿಂದ 45 ಸಾವಿರ ಟನ್ ಪಾಮ್ ಆಯಿಲ್​ನನ್ನು ಭಾರತ ತರಿಸಿಕೊಳ್ಳುತ್ತದೆ.

  ಸಾಬೂನಿನಿಂದ ಆರಂಭಿಸಿ ಖಾದ್ಯ ವಸ್ತುಗಳ ತಯಾರಿಕೆವರೆಗೆ ವಿವಿಧ ವಸ್ತುಗಳಲ್ಲಿ ತಾಣೆಯೆಣ್ಣೆ ಬಳಕೆಯಾಗುತ್ತದೆ. ಈ ಎಲ್ಲದಕ್ಕೂ ಈ ಸಸ್ಯಮೂಲ ಎಣ್ಣೆಗೆ ಭಾರತ ಅವಲಂಬಿಸಿರುವುದು ಆಮದನ್ನೆ.

  ಆರ್ಥಿಕತೆಗೆ ಹೊಡೆತ

  ಭಾರತ ಪಾಮ್ ಆಯಿಲ್ ಆಮದನ್ನು ನಿಲ್ಲಿಸಿದ ಕಾರಣ ಮಲೇಷ್ಯಾದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಅದರ ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ತಾಳೆ ಎಣ್ಣೆ ಪಾಲು ಶೇ 2.8 ಆಗಿದೆ. ಒಟ್ಟು ರಫ್ತಿನಲ್ಲಿ ಅದರ ಪಾಲು ಶೇ. 4.5. ಭಾರತ ತಾಳೆ ಎಣ್ಣೆ ಖರೀದಿ ನಿಲ್ಲಿಸಿದ್ದರಿಂದ ತಾಳೆ ಬೆಳೆಗಾರರು, ಎಣ್ಣೆ ಶುದ್ಧೀಕರಣ ಘಟಕ ಮತ್ತು ರಫ್ತು ದಾರರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಭಾರತದ ಕ್ರಮದಿಂದ ನಮ್ಮ ದೇಶಕ್ಕೆ ಹಾನಿಯಾಗುತ್ತಿದ್ದರೂ ನಮ್ಮದು ಸಣ್ಣ ದೇಶವಾಗಿರುವುದರಿಂದ ಅದರ ವಿರುದ್ಧ ಯಾವುದೇ ಸೇಡಿನ ಕ್ರಮ ಕೈಗೊಳ್ಳಲಾಗದು

  | ಮಹತೀರ್ ಮಹಮದ್ ಮಲೇಷ್ಯಾ ಪ್ರಧಾನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts