More

    ನವಾಜ್ ಷರೀಫ್ ವಿರುದ್ಧ 195 ಕೋಟಿ ರೂಪಾಯಿಯ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲು

    ಇಸ್ಲಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ನ್ಯಾಷನಲ್​ ಅಕೌಂಟೆಬಿಲಿಟಿ ಬ್ಯೂರೋ (ಎನ್​ಎಬಿ) ಈ ಪ್ರಕರಣ ದಾಖಲಿಸಿದ್ದು, ಸರ್ಕಾರಿ ವಾಹನಗಳನ್ನು ಅಕ್ರಮವಾಗಿ ಬಳಸಿಕೊಂಡು ಬೊಕ್ಕಸಕ್ಕೆ 195.2 ಕೋಟಿ ರೂಪಾಯಿ ನಷ್ಟ ಉಂಟುಮಾಡಿರುವುದಾಗಿ ಆರೋಪಿಸಲಾಗಿದೆ.

    ಎನ್​ಎಬಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಒಟ್ಟು 11 ಪ್ರಕರಣಗಳ ವಿಚಾರಣೆಗೆ ಅನುಮತಿ ಸಿಕ್ಕಿದೆ. ಇದರಂತೆ, ಷರೀಫ್ ಅವರೊಂದಿಗೆ ಚೌಧರಿ, ಸುಲ್ತಾನ್ ಮತ್ತು ಫವಾದ್​ ವಿರುದ್ಧ 73 ಹೈ ಸೆಕ್ಯುರಿಟಿ ವಾಹನ ಖರೀದಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ವಿದೇಶಿ ಗಣ್ಯರ ಆತಿಥ್ಯದ ಕೆಟಗರಿಯಲ್ಲಿ ಈ ವಾಹನಗಳನ್ನು ಖರೀದಿಸಲಾಗಿತ್ತು.

    ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಂದ ರೋಗಿಗಳಿಗೆ ಹೆಚ್ಚುವರಿ ಬಿಲ್ ಮರುಪಾವತಿಗೆ ಕ್ರಮ: ಡಿಸಿ ರೋಹಿಣಿ ಸಿಂಧೂರಿ

    ಪಕ್ಷಪಾತ ಮತ್ತು ಅಕ್ರಮವಾಗಿ ವಾಹನ ಖರೀದಿಸುವ ಮೂಲಕ ಬೊಕ್ಕಸಕ್ಕೆ 195.2 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಪ್ರಕರಣದಲ್ಲಿ ಷರೀಫ್ ಪ್ರಮುಖ ಆರೋಪಿಯಾಗಿದ್ದು, ಉಳಿದವರು ಅವರ ಸಹ ಆರೋಪಿಗಳು ಎಂದು ಎನ್​ಎಬಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಮರಕ್ಕೆ ಸಿದ್ಧ – ನೌಕಾಪಡೆಯಿಂದ ಶಕ್ತಿಪ್ರದರ್ಶನದ ಕ್ಷಿಪಣಿ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts