More

    ಮೀನುಗಾರರ ದೋಣಿಯಲ್ಲಿ ಸಿಕ್ತು ಬಂದೂಕು-ಬುಲೆಟ್ಸ್​ ಮತ್ತು ಕೋಟ್ಯಾಂತರ ರೂ. ಬೆಲೆ ಬಾಳುವ ಡ್ರಗ್ಸ್​..!

    ಗುಜರಾತ್​: ಈ ದೋಣಿ ಸಾಧಾರಣ ಮೀನುಗಾರನ ದೋಣಿಯ ಹಾಗೆ ಸೋಗು ಹಾಕಿಕೊಂಡು ಭಾರತೀಯ ಸಮುದ್ರ ಗಡಿಯ ಒಳಗಡೆ ಬಂದಿದೆ. ಆದರೆ ಈ ದೋಣಿಯಲ್ಲಿದ್ದ ವಸ್ತುಗಳು ಮಾತ್ರ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
    ಶಸ್ತ್ರಾಸ್ತ್ರಗಳು ಮತ್ತು 10 ಸಿಬ್ಬಂದಿಯನ್ನು ಹೊತ್ತಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಭಾರತೀಯ ಕೋಸ್ಟ್​ಗಾರ್ಡ್ ತಡೆದಿದ್ದಾರೆ.

    ಪಾಕಿಸ್ತಾನದ ದೋಣಿಯನ್ನು ತಡೆಹಿಡಿಯುವ ಕಾರ್ಯಾಚರಣೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಥವಾ ಎಟಿಎಸ್‌ನೊಂದಿಗೆ ಜಂಟಿಯಾಗಿ ನಡೆಸಲಾಗಿದೆ ಎಂದು ಕೋಸ್ಟ್​ಗಾರ್ಡ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಅಲ್ ಸೊಹೆಲಿ” ಎಂಬ ಹೆಸರಿನ ಈ ದೋಣಿಯನ್ನು ‘ಓಖಾ’ ಎನ್ನುವ ಸ್ಥಳಕ್ಕೆ ತಂದು ವಶಕ್ಕೆ ಪಡೆಯಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.

    ಎಟಿಎಸ್ ಗುಜರಾತ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ, 10 ಜನರಿದ್ದ ಪಾಕಿಸ್ತಾನದ ಮೀನುಗಾರಿಕಾ ಬೋಟ್ ಅಲ್ ಸೊಹೆಲಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ತಪಾಸಣೆ ಮಾಡುವಾಗ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 300 ಕೋಟಿ ರೂ. ಮೌಲ್ಯದ 40 ಕೆಜಿ ಮಾದಕವಸ್ತುಗಳು ಈ ದೋಣಿಯಲ್ಲಿ ಇದ್ದದ್ದು ಕಂಡುಬಂದಿದೆ. ಇವರು ಭಾರತದ ಗಡಿಯೊಳಗೆ ಯಾವ ಉದ್ದೇಶ ಇಟ್ಟುಕೊಂಡು ಬಂದದ್ದು, ಎಲ್ಲಿಂದ ಬಂದದ್ದು ಎನ್ನುವ ವಿಚಾರಗಳು ತನಿಖೆಯ ನಂತರವೇ ತಿಳಿದು ಬರಲಿವೆ.

    ಭಾರತದ ಅನೇಕ ನಗರಗಳಲ್ಲಿ ಹೊಸವರ್ಷವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭ ಅನೇಕರು, ಮಾದಕ ವಸ್ತುಗಳನ್ನು ಬಳಸುವುದೂ ಈ ಹಿಂದೆ ಕಂಡುಬಂದಿದೆ. ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಈ ಡ್ರಗ್ಸ್​ ಭಾರತಕ್ಕೆ ಪೂರೈಸಲಾಗುತ್ತಿತ್ತೇ ಎನ್ನುವ ಅನುಮಾನವೂ ಎದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts