More

    ಚಿನ್ನ ಕಳ್ಳ ಸಾಗಣೆ; 2 ದಿನದಲ್ಲಿ 5 ಕೆ.ಜಿ. ಚಿನ್ನ ಜಪ್ತಿ

    ಬೆಂಗಳೂರು: ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ವಿಮಾನದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಐವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, 3.09 ಕೋಟಿ ರೂ. ಮೌಲ್ಯದ 5.135 ಕೆ.ಜಿ. ಚಿನ್ನ ಜಪ್ತಿ ಮಾಡಿದ್ದಾರೆ.

    ನ. 7ರಿಂದ 8ರ ನಡುವೆ ಕುವೈತ್, ದುಬೈ, ಶಾರ್ಜಾ, ಅಬುಧಾಬಿ ಮತ್ತು ಬ್ಯಾಂಕಾಕ್‌ನಿಂದ ಕೆಐಎಗೆ ಬಂದಿಳಿದ ವಿಮಾನಗಳ ಪ್ರಯಾಣಿಕರನ್ನು ಕೆಐಎ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಐವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅತ್ಯಾಧುನಿಕ ಸ್ಕಾೃನರ್‌ನಿಂದ ಪರಿಶೀಲನೆ ನಡೆಸಿದಾಗ ಪ್ರಯಾಣಿಕರು ಚಿನ್ನ ಬಚ್ಚಿಟ್ಟುಕೊಂಡು ಬಂದಿರುವುದು ಬೆಳಕಿಗೆ ಬಂದಿತ್ತು.

    ಗುದದ್ವಾರದಲ್ಲಿ ಮಾತ್ರೆಗಳ ರೂಪದಲ್ಲಿ, ಲೇಡಿಸ್ ಪರ್ಸ್ ಹ್ಯಾಂಡಲ್ ಮತ್ತು ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದರು. ಐವರು ಪ್ರಯಾಣಿಕರಿಂದ 5 ಕೆಜಿ 135 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts