More

    ಭಾರತವನ್ನು ಸೋಲಿಸಿದ್ದಲ್ಲಿ… ಜಿಂಬಾಬ್ವೆ ತಂಡಕ್ಕೆ ಬಂಪರ್​ ಆಫರ್​ ಕೊಟ್ಟ ಪಾಕಿಸ್ತಾನದ ನಟಿ!

    ನವದೆಹಲಿ: ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಕೊನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ. ಈಗಾಗಲೇ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಸದ್ದು ಮಾಡಿದೆ. ಇದೀಗ ಭಾರತ ಎದುರು ಗೆಲುವಿನ ಆಸೆ ಹೊತ್ತಿರುವ ಜಿಂಬಾಬ್ವೆಗೆ ಪಾಕ್​ ನಟಿಯೊಬ್ಬಳು ಬಂಪರ್​ ಆಫರ್​ ನೀಡಿದ್ದಾರೆ.

    ಅಂದಹಾಗೆ ಪಾಕ್​, ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಹೀನಾಯ ಸೋಲಿನ ಹತಾಶೆಯಲ್ಲಿದೆ. ಪಾಕ್​ ಕ್ರೀಡಾಭಿಮಾನಿಗಳಿಗೂ ಸಹ ಈ ಎರಡೂ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋತಿದ್ದು, ಪಾಕ್​ಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಭಾರತದ ಸೋಲನ್ನು ಪಾಕ್​ ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್​ ನಟಿ ಸೆಹಾರ್​ ಶಿನ್ವಾರಿ ಎಂಬಾಕೆ ಜಿಂಬಾಬ್ವೆಗೆ ಆಫರ್​ ಒಂದನ್ನು ನೀಡಿದ್ದಾರೆ.

    ಆ ಆಫರ್​ ಏನು ಅಂದರೆ, ಭಾನುವಾರ (ನ.6) ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಜಿಂಬಾಬ್ವೆ ಸೋಲಿಸಿದ್ದಲ್ಲಿ, ಜಿಂಬಾಬ್ವೆ ಮೂಲದ ಯುವಕನನ್ನು ಪಾಕ್​ ನಟಿ ಮದುವೆ ಆಗಲಿದ್ದಾರಂತೆ.

    ಇದೀಗ ನಟಿಯ ಟ್ವೀಟ್​ ವೈರಲ್​ ಆಗುತ್ತಿದೆ. ಜಿಂಬಾಬ್ವೆ ಗೆಲ್ಲಲಿ ಎಂದು ಪಾಕ್​ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದರೆ, ಇದೆಲ್ಲ ತಿರುಕನ ಕನಸು ಅಂತಾ ಭಾರತೀಯ ಕ್ರೀಡಾಭಿಮಾನಿಗಳು ನಟಿಯ ಟ್ವೀಟ್​ ಅನ್ನು ಗೇಲಿ ಮಾಡಿದ್ದಾರೆ. ಮೊನ್ನೆ (ನ.2) ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲೂ ಪಾಕಿಗಳು ಭಾರತದ ಸೋಲಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ವರುಣ ಭಾರತದ ಮೇಲೆ ಕೃಪೆ ತೋರಿಸಿ, ಪಂದ್ಯದ ದಿಕ್ಕನ್ನೇ ಬದಲಿಸಿತು.

    ಅಂದಹಾಗೆ ಜಿಂಬಾಬ್ವೆ ವಿರುದ್ಧ ಭಾನುವಾರ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ ಟೀಮ್​ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಡ್ರೈವಿಂಗ್​ ಗೊತ್ತಿಲ್ಲದಿದ್ರೂ ವರದಕ್ಷಿಣೆಯಾಗಿ ಕಾರು ಪಡೆದ ವರ: ಮದ್ವೆ ಹಿಂದಿನ ದಿನವೇ ನಡೆಯಿತು ಘೋರ ದುರಂತ

    ಚಿತ್ರದುರ್ಗದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಅನುಮಾನಾಸ್ಪದ ಸಾವು

    ತೆಲಂಗಾಣದಲ್ಲಿ ಆಪರೇಷನ್​ ಕಮಲ: ವಿಡಿಯೋ ಸಾಕ್ಷಿ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಕೆಸಿಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts