More

    ಶ್ರೀಲಂಕಾಕ್ಕೆ 362 ಕೋಟಿ ರೂಪಾಯಿ ಸಾಲ ಕೊಡಲು ಮುಂದಾದ ಪಾಕಿಸ್ತಾನ!

    ಕೊಲಂಬೋ: ಪಾಕಿಸ್ತಾನದಲ್ಲಿ ಬಡತನ ತಾಂಡವವಾಡುತ್ತಿರುವ ಸುದ್ದಿ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಅದೇ ಪಾಕಿಸ್ತಾನ ಅಚ್ಚರಿ ತರಿಸುವಂತೆ ಕೆಲಸವೊಂದಕ್ಕೆ ಮುಂದಾಗಿದೆ. ಶ್ರೀಲಂಕಾದ ಸೇನೆ ಬಲಪಡಿಸುವಿಕೆಗೆ 362 ಕೋಟಿ ರೂಪಾಯಿ (50 ಮಿಲಿಯನ್​ ಡಾಲರ್​) ಸಾಲ ಕೊಡುವುದಾಗಿ ಹೇಳಿಕೊಂಡಿದೆ.

    ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರು ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಬುಧವಾರ ಮುಗಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಉಭಯ ದೇಶಗಳ ನಡುವಿನ ಸೇನಾ ಬಲ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ಸಿಬ್ಬಂದಿ ಮಟ್ಟದ ಮಾತುಕತೆಗಳನ್ನು ನಡೆಸುವುದರಿಂದ ಉಭಯ ದೇಶಗಳ ಭದ್ರತಾ ವಲಯದ ಸಂಬಂಧ ಇನ್ನಷ್ಟು ವಿಸ್ತರಣೆಯಾಗಲು ಸಜಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಭದ್ರತೆ, ಭಯೋತ್ಪಾದನೆ, ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ ಮತ್ತು ಗುಪ್ತಚರ ಹಂಚಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುವಾಗ ಪರಸ್ಪರ ಬೆಂಬಲ ಮತ್ತು ಸಮನ್ವಯ ಸಾಧಿಸಲು ಬಲವಾದ ಸಹಭಾಗಿತ್ವದ ಅಗತ್ಯವನ್ನು ಉಭಯ ಕಡೆಯವರು ಒತ್ತಿ ಹೇಳಿದ್ದಾರೆ.

    ಶ್ರೀಲಂಕಾಕ್ಕೆ ಆತ್ಮೀಯವಾಗಿ ಸ್ವಾಗತ ಮಾಡಿಕೊಂಡು ಉತ್ತಮ ಆತಿಥ್ಯ ನೀಡಿದ ಪ್ರಧಾನಿ ಗೋತಬಯ ರಾಜಪಕ್ಸೆ ಹಾಗೂ ದೇಶದ ಜನತೆಗೆ ಧನ್ಯವಾದಗಳು. ಶ್ರೀಲಂಕಾ ನಮ್ಮ ವಿಶೇಷ ಸ್ನೇಹಿತ ಮತ್ತು ಬಲವಾದ ಪಾಲುದಾರ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

    ಶ್ರೀಲಂಕಾದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ಪಾಕಿಸ್ತಾನವು 5.2 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಲಾಗಿದೆ. ಅದರ ಜತೆಯಲ್ಲಿ ಪಾಕಿಸ್ತಾನ-ಶ್ರೀಲಂಕಾ ಉನ್ನತ ಶಿಕ್ಷಣ ಸಹಕಾರ ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಮಾಡುತ್ತಿರುವ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಾಕಿಸ್ತಾನ ಘೋಷಿಸಿದೆ. (ಏಜೆನ್ಸೀಸ್​)

    ಕೇರಳದಲ್ಲಿ ಎಸ್​ಡಿಪಿಐ ಗೂಂಡಾಗಿರಿಗೆ ಆರ್​ಎಸ್​ಎಸ್​ ಕಾರ್ಯಕರ್ತ ಬಲಿ!

    ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts