More

    ಲಾಸ್ಟ್ ಓವರ್ ಥ್ರಿಲ್ಲರ್ ಗೆದ್ದ ಪಾಕ್; ಬಾಂಗ್ಲಾದೇಶಕ್ಕೆ ವೈಟ್‌ವಾಷ್

    ಢಾಕಾ: ನಾಯಕ ಮಹಮದುಲ್ಲಾ ನಿರ್ಣಾಯಕ ಅಂತಿಮ ಓವರ್‌ನಲ್ಲಿ 3 ವಿಕೆಟ್ ಕಬಳಿಸಿದ ನಡುವೆಯೂ ಪಾಕಿಸ್ತಾನ ತಂಡ 3ನೇ ಹಾಗೂ ಕೊನೇ ಟಿ20 ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಜಯಿಸಿದೆ. ಈ ಮೂಲಕ ಬಾಬರ್ ಅಜಮ್ ಪಡೆ 3-0ಯಿಂದ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ, 7 ವಿಕೆಟ್‌ಗೆ 124 ರನ್ ಪೇರಿಸಿತು. ಈ ಸಾಧಾರಣ ಮೊತ್ತ ಬೆನ್ನಟ್ಟಲು ಪರದಾಡಿದ ಪಾಕ್‌ಗೆ ಕೊನೇ ಓವರ್‌ನಲ್ಲಿ 8 ರನ್ ಅಗತ್ಯವಿತ್ತು. ಆಗ ದಾಳಿಗಿಳಿದ ಮೊಹಮದುಲ್ಲ ಮೊದಲ 3 ಎಸೆತಗಳಲ್ಲಿ ರನ್ ಬಿಟ್ಟುಕೊಡದೆ 2 ವಿಕೆಟ್ ಕಬಳಿಸಿದರು. 4ನೇ ಎಸೆತಕ್ಕೆ ಸಿಕ್ಸರ್ ಬಾರಿಸಿದ ಇಫ್ತಿಕಾರ್ ಅಹ್ಮದ್ 5ನೇ ಎಸೆತಕ್ಕೆ ಔಟಾದರು. ಕೊನೇ ಎಸೆತಕ್ಕೆ 2 ರನ್ ಬೇಕಿದ್ದಾಗ ಮೊಹಮದ್ ನವಾಜ್ ಬೌಂಡರಿ ಬಾರಿಸಿ ಪಾಕ್ ಗೆಲ್ಲಿಸಿದರು.

    ಬಾಂಗ್ಲಾದೇಶ: 7 ವಿಕೆಟ್‌ಗೆ 124 (ನಯೀಮ್ 47, ಶಮಿಮ್ 22, ಮಹಮದುಲ್ಲಾ 13, ವಾಸಿಂ 15ಕ್ಕೆ 2, ಉಸ್ಮಾನ್ ಖಾದಿರ್ 35ಕ್ಕೆ 2), ಪಾಕಿಸ್ತಾನ: 5 ವಿಕೆಟ್‌ಗೆ 127 (ರಿಜ್ವಾನ್ 40, ಅಜಮ್ 19, ಹೈದರ್ ಅಲಿ 45, ಮಹಮದುಲ್ಲಾ 10ಕ್ಕೆ 3, ಅಮಿನುಲ್ 26ಕ್ಕೆ 1).ಪಂದ್ಯಶ್ರೇಷ್ಠ: ಹೈದರ್ ಅಲಿ, ಸರಣಿಶ್ರೇಷ್ಠ: ಮೊಹಮದ್ ರಿಜ್ವಾನ್.

    2021ರಲ್ಲಿ ಯೆಲ್ಲೋ ಜೆರ್ಸಿಗೆ ಟಿ20 ಪ್ರಶಸ್ತಿ ಗೆಲ್ಲೋ ಅದೃಷ್ಟ!

    ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಪಾಕ್ ಧ್ವಜ ಹಾರಾಟ, ಬಾಂಗ್ಲಾದೇಶ ಪ್ರವಾಸದಲ್ಲಿ ಕಿರಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts